Header Ads
Header Ads
Header Ads
Breaking News

ಅಂಗಡಿಕಾರರ ಕಬ್ಜಾ ವಿಚಾರ ಮೃತ ಅಂಗಡಿಕಾರ ರಾಮಚಂದ್ರ ನಾಯ್ಕ್ ಸಾವು ದುಃಖ ತಂದಿದೆ ಭಟ್ಕಳದಲ್ಲಿ ನಾಗರಾಜ್ ಶೇಟ್ ಹೇಳಿಕೆ

ಸೆಪ್ಟೆಂಬರ್ 14 ರಂದು ಭಟ್ಕಳ ಪುರಸಭೆಯ ಕಛೇರಿಯಲ್ಲಿ ನಡೆಸಲಾದ ಅಂಗಡಿಕಾರರ ಕಬ್ಜಾ ವಿರುದ್ಧವಾಗಿ ಬೆಂಕಿ ಹಚ್ಚಿಕೊಂಡ ಮೃತ ಅಂಗಡಿಕಾರ ರಾಮಚಂದ್ರ ನಾಯ್ಕ ಸಾವು ಎಲ್ಲಾ ಅಂಗಡಿಕಾರರಿಗೂ ದುಖಃ ತಂದಿದೆ ಎಂದು ದೈವಜ್ಞ ಬ್ರಾಹ್ಮಣ ಸುವರ್ಣಕಾರರ ಸಂಘದ ಕಾರ್ಯದರ್ಶಿ ನಾಗರಾಜ ಶೇಟ್ ತಿಳಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಂಗಡಿಕಾರರ ಹೋರಾಟಕ್ಕೆ ಬೆಂಬಲ ಸೂಚಿಸಿದ ದೈವಜ್ಞ ಬ್ರಾಹ್ಮಣ ಸುವರ್ಣಕಾರರ ಸಂಘದ ಕಾರ್ಯದರ್ಶಿ ನಾಗರಾಜ ಶೇಟ್ “ ಬಡ ಅಂಗಡಿಕಾರರನ್ನು ಒಕ್ಕಲೆಬ್ಬಿಸುವುದರ ವಿರುದ್ಧ ಪ್ರತಿಭಟನೆಯಾಗಿದ್ದು, ಇದು ಪಕ್ಷಾತೀತ ಹೋರಾಟವಾಗಿದೆ. ಈ ಹೋರಾಟಕ್ಕೆ ಬೆಂಬಲಿಸಿದ ಎಲ್ಲಾ ಪಕ್ಷದ ಮುಖಂಡರಿಗೂ, ಹೋರಾಟಗಾರರಿಗೂ, ಸಾರ್ವಜನಿಕರಿಗೂ ಹಾಗು ತಾಲೂಕಿನ ಎಲ್ಲಾ ಸಮಾಜದ ಬಾಂಧವರಿಗೂ ಧನ್ಯವಾದ. ಪುರಸಭಾ ಅಂಗಡಿಗಳ ಕಬ್ಜಾ ವಿರುದ್ಧವಾಗಿ ಅಂಗಡಿಕಾರನೋರ್ವ ರಾಮಚಂದ್ರ ನಾಯ್ಕ ಆತ್ಮಹತ್ಯೆ ಪ್ರಯತ್ನಕ್ಕೆ ಕೈಗೊಂಡಿದಾಗ ಆ ಕ್ಷಣದ ಪ್ರತಿಕ್ರಿಯೆ ಸಹಜ ಪ್ರತಿಕ್ರಿಯೆ ಅಷ್ಟೇ. ಇದನ್ನೇ ಮುಂದಿಟ್ಟುಕೊಂಡು ಸ್ಥಳೀಯ ಹೋರಾಟಗಾರರ ಮೇಲೆ ದರೋಡೆ ಅಂತಹ ಪ್ರಕರಣವನ್ನು ಪೋಲೀಸ್ ಇಲಾಖೆ ದಾಖಲಿಸಿದ್ದು ಖಂಡನೀಯ. ಇದೇ ಪ್ರಕರಣವನ್ನು ಬಳಸಿಕೊಂಡು ರಾಜಕೀಯ ವಿರೋಧಿಗಳನ್ನು ಹಣೆಯಲು ಬಳಸಿಕೊಳ್ಳುತ್ತಿರುವುದು ಎಲ್ಲಾ ಪುರಸಭೆಯ ಅಂಗಡಿಕಾರರು ಹಾಗು ಸ್ಥಳೀಯ ಸಾರ್ವಜನಿಕರು ಖಂಡಿಸುತ್ತೇವೆ.” ಎಂದರು.


ಇದೇ ಸಂಧರ್ಭದಲ್ಲಿ ಪುರಸಭಾ ಅಂಗಡಿಕಾರ ಮೃತ್ಯುಂಜಯ ಆಚಾರಿ ಮಾತನಾಡಿ “ ಈ ಹಿಂದೆಲ್ಲ ಅಂಗಡಿಕಾರರು ಶಾಂತಿಯುತ ಹೋರಾಟ ನಡೆಸಿಕೊಂಡು ಬರುತ್ತಿದ್ದು, ಕಾರಣಾಂತರಿಂದ ಸೆಪ್ಟೆಂಬರ್ 14 ರಂದು ಓರ್ವ ಅಂಗಡಿಕಾರರು ಸಾವನ್ನಪ್ಪಿರುವುದು ದುಖಃಕರ ಸಂಗತಿಯಾಗಿದೆ. ಮೃತ ರಾಮಚಂದ್ರ ನಾಯ್ಕ ಸಾವು ಎಲ್ಲಾ ಅಂಗಡಿಕಾರರಿರು ಆಘಾತವನ್ನುಂಟು ಮಾಡಿದೆ. ಪುರಸಭೆಯ ಮೇಲೆ ಯಾರೋ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದರಿಂದ ಅಂತಹವರ ಹುಡುಕಾಟವನ್ನು ಪೋಲೀಸರು ನಡೆಸುತಿದ್ದಾರೆ. ಮುಂದಿನ ದಿನದಲ್ಲಿ ಆಯಾ ಅಂಗಡಿಕಾರರಿಗೆ ಅವರಿಗೆ ಅಂಗಡಿ ಸಿಗುವ ಹಾಗೇ ಜಿಲ್ಲಾಢಳಿತ ಕ್ರಮ ಕೈಗೊಳ್ಳಲಿ ಎಂದು ಮನವಿ ಮಾಡಿಕೊಂಡರು.


ಈ ಸಂಧರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಪುರಸಭೆಯ ಎಲ್ಲಾ ಅಂಗಡಿಕಾರರು ಮುಂದಿನ ದಿನಗಳಲ್ಲಿ ಪುರಸಭೆಯವರು ನಮ್ಮ ಅಂಗಡಿಗಳನ್ನು ಒಕ್ಕಲೆಬ್ಬಿಸುವುದಾಗಲಿ ಅಥವಾ ಪೋಳಿಸರು ಹೋರಾಟಗಾರರ ಮೇಲೆ ಸುಳ್ಳು ಕೇಸನ್ನು ದಾಖಲಿಸಿ ಕಿರುಕುಳ ನೀಡುವುದನ್ನು ಮುಂದುವರೆಸಿದರೆ ಪುರಸಭೆಯ ೧೪೮ ಅಂಗಡಿಕಾರರು ಸಾಮೂಹಿಕ ಆತ್ಮಹತ್ಯೆಯಂತಹ ಕಠಿಣ ನಿರ್ಧಾರವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಜಿಲ್ಲಾಢಳಿತಕ್ಕೆ ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಪುರಸಭೆಯ ಎಲ್ಲಾ ಅಂಗಡಿಕಾರರು ಉಪಸ್ಥಿತರಿದ್ದರು. ಸುದ್ದಿಗೋಷ್ಠಿಯ ಬಳಿಕ ಅಂಗಡಿಕಾರ ಮೃತ ರಾಮಚಂದ್ರ ನಾಯ್ಕ ಮನೆಗೆ ತೆರಳಿ ಕುಟುಂಸ್ಥರಿಗೆ ಸಾಂತ್ವನ ತಿಳಿಸಿದರು.

ವರದಿ: ರಾಘವೇಂದ್ರ ಮಲ್ಯ ಭಟ್ಕಳ

Related posts

Leave a Reply