Breaking News

ಅಂಗಡಿ ಮಾಲೀಕನಿಗೆ ಚೂರಿ ಇರಿತ

ಅಂಗಡಿ ಮಾಲೀಕರಿಗೆ ಐದು ಮಂದಿಯ ತಂಡ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಹರೇಕಳ ಕಡವಿನ ಬಳಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ.ಪಾವೂರು ನಿವಾಸಿ ಅಬ್ದುಲ್ ರಹಿಮಾನ್ (35) ಕೊಲೆಯತ್ನಕ್ಕೆ ಒಳಗಾದವರು.ಪಾವೂರು ಕಡವಿನಬಳಿ ಇರುವ ಜ್ಯೂಸ್ ಅಂಗಡಿಯನ್ನು ಮುಚ್ಚಲು ಅನುವಾಗುತ್ತಿದ್ದ ಸಂದರ್ಭದಲ್ಲಿ ಓಮ್ನಿ ಕಾರಿನಲ್ಲಿ ಬಂದ ಐದು ಮಂದಿಯ ತಂಡ ಚೂರಿಯಿಂದ ತಲೆ, ಕಾಲು ಹಾಗೂ ಕೈಗಳ ಭಾಗಕ್ಕೆ ಇರಿದು ಕೊಲೆಗೆ ಯತ್ನಿಸಲಾಗಿದೆ. ಸ್ಥಳೀಯವಾಗಿ ಗಾಂಜಾ ವ್ಯಸನಿಗಳ ಉಪಟಳದ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರೆಂಬ ಕಾರಣಕ್ಕಾಗಿ ಹಂಚು ಹಾಕಿದ್ದ ತಂಡ ಕೃತ್ಯ ಎಸಗಿದೆ. ಗಾಯಾಳುವನ್ನು ನಾಟೆಕಲ್ ಆಸ್ಪತ್ರೆಹೆ ದಾಖಲಿಸಲಾಗಿದೆ.

Related posts

Leave a Reply