Header Ads
Header Ads
Header Ads
Breaking News

ಅಂಗನವಾಡಿ ಮಕ್ಕಳ ಮುದ್ದು ಕೃಷ್ಣ ಸ್ಪರ್ಧೆ ಮೂಡಬಿದ್ರೆ ರೋಟರಿ ಕ್ಲಬ್‌ನಿಂದ ಆಯೋಜನೆ

ಮೂಡುಬಿದಿರೆಯ ರೋಟರಿ ಕ್ಲಬ್, ಇನ್ನರ್‌ವೀಲ್ ಹಾಗೂ ರೋಟರ್‍ಯಾಕ್ಟ್ ಕ್ಲಬ್ ಇವುಗಳ ಸಹಯೋಗದಲ್ಲಿ ಸಮಾಜ ಮಂದಿರ ಸಭಾದಲ್ಲಿ ಆಹ್ವಾನಿತ ಸರಕಾರಿ ಅಂಗನವಾಡಿ ಕೇಂದ್ರಗಳ ಮಕ್ಕಳ ಮುದ್ದುಕೃಷ್ಣ ಸ್ಪಧೆ ನಡೆಯಿತು.

ಇನ್ನರ್‌ವೀಲ್ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ ಸ್ಪರ್ಧೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.
ರೋಟರಿ ಕ್ಲಬ್ ಅಧ್ಯಕ್ಷ ಶ್ರೀಕಾಂತ್ ಕಾಮತ್, ಕಾರ್ಯದರ್ಶಿ ಮೊಹಮ್ಮದ್ ಆರಿಫ್, ತೀರ್ಪುಗಾರರಾದ ದೀಪ್ತಿ ಭಟ್, ಸಂಗೀತ ಭಟ್ ಮತ್ತು ಸ್ವಾತಿ ಉಪಸ್ಥಿತರಿದ್ದರು.
ಮಧ್ಯಾಹ್ನ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿ ವಿಜೇತ ಪುಟಾಣಿಗಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.

Related posts

Leave a Reply