Header Ads
Breaking News

ಅಂಗವಿಕಲನಿಗೆ ಆಸರೆಯಾದ ಕಾರ್ಕಳದ ಹುಡುಗಿ : ಭಜರಂಗದಳ ಕಾರ್ಯಕರ್ತರ ಸಹಕಾರದಿಂದ ದಿಟ್ಟ ಹೆಜ್ಜೆ

ಹಿಂದೂ ಜಾಗರಣ ವೇದಿಕೆ ಹಾಗೂ ಭಜರಂಗದಳ ಗ್ರಾಮ ಸಮಿತಿ ವತಿಯಿಂದ ಕಲ್ಯಾಣ ಮಹೋತ್ಸವ ಬೆಳ್ತಂಗಡಿ ತಾಲೂಕಿನ ಕಾಯರ್ತಡ್ಕದಲ್ಲಿ ನಡೆಯಿತು. ಈ ಕಲ್ಯಾಣ ಮಹೋತ್ಸವದಲ್ಲಿ ಭಾಗವಹಿಸಿದ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕುದ್ರಾಡಿನ ಚಂದ್ರಶೇಖರ ಎಂಬವರು ಸುಮಾರು ಒಂದೂವರೆ ವರ್ಷದ ಹಿಂದೆ ಆದ ಅಪಘಾತಒಂದರಲ್ಲಿ ತನ್ನ ಒಂದು ಕಾಲನ್ನು ಕಳೆದು ಕೊಂಡಿದ್ದರಿಂದ ಬಹಳ ನೊಂದಿದ್ದರು. ಮನೆಯಲ್ಲಿ ತಾಯಿ ಒಬ್ಬರೇ ಇದ್ದು ಅವರೂ ಕೂಡ ಹಾಸಿಗೆ ಹಿಡಿದಿದ್ದಾರೆ. ಇದೇ ಸಂದರ್ಭದಲ್ಲಿ ಸುದ್ದಿ ತಿಳಿದ ಕಾರ್ಕಳ ತಾಲೂಕಿನ ಮಾಳ ನಡಿ ಪರ್ಕಳ ಎಂಬಲ್ಲಿನ ಸಂಜೀವಿನಿ ಎಂಬ ಹುಡುಗಿ ವಿಶ್ವ ಹಿಂದೂ ಪರಿಷತ್,ಬಜರಂಗದ ಕಾರ್ಯಕರ್ತರ ಸಹಕಾರದಿಂದ ಒಂದಾಗಿ ದಿಟ್ಟ ಹೆಜ್ಜೆಯನ್ನು ಇಟ್ಟು ಸತಿ ಪತಿಗಳಾಗುವ ಮೂಲಕ ಸಮಾಜಕ್ಕೇ ಒಂದು ಹೊಸ ಸಂದೇಶ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸಂಜೀವಿನಿಯವರು ತನ್ನ ಹುಡುಗ ಕಾಲು ಕಳೆದು ಕೊಂಡರು ಪರವಾಗಿಲ್ಲ ನಾನು ಅವರಿಗೆ ಬಾಳು ಕೊಡುತ್ತೇನೆ ಎಂದರು. ವಿಶ್ವ ಹಿಂದೂ ಪರಿಷತ್ತಿನ ತಾಲೂಕು ಕಾರ್ಯದರ್ಶಿಗಳಾದ ನವೀನ್ ನೆರಿಯ ಮಾತನಾಡಿ ನಮ್ಮೆಲ್ಲರ ಸಹಕಾರದಿಂದ ನವ ಜೋಡಿಗಳು ಸತಿ ಪತಿಗಳಾಗಿದ್ದಾರೆ. ಅವರ ಜೀವನ ಉಜ್ವಲವಾಗಲಿ ಎಂದರು. ನಂತರ ನಡೆದ ಹಿಂದೂ ಸಮಾಜ ಉತ್ಸವದಲ್ಲಿ ವಿವಿಧ ಗಣ್ಯರು ಶುಭ ಹಾರೈಸಿದರು.

Related posts

Leave a Reply

Your email address will not be published. Required fields are marked *