Header Ads
Header Ads
Header Ads
Breaking News

ಅಂಗವಿಕಲನ ಬಾಳಿಗೆ ಬೆಳಕಾದ ಸುಶೀಲಾ ಭಟ್ಕಳ ತಾಲೂಕಿನಲ್ಲಿ ಅಪರೂಪದ ಮದುವೆ

ಭಟ್ಕಳ ತಾಲೂಕಿನ ಮುರ್ಡೆಶ್ವರದ ಆರ್.ಎನ್ ಶೇಟ್ಟಿ ಮಿನಿ ಸಭಾಭವನದಲ್ಲಿ ನಡೆದಿರುವ ಈ ಅಪರೂಪದ ವಿವಾಹಕ್ಕೆ ಬಂದು ಮಿತ್ರರು ಸಾಕ್ಷಿಯಾಗಿದ್ದಾರೆ. ಯುವಕನು ಅಂಗವೈಕಲ್ಯ ಹೊಂದಿದ್ದರು ಕೂಡ ಕ್ರಿಯಾಶೀಲನಾಗಿ ಸ್ವಾಭಿಮಾನದಲ್ಲಿ ಬದುಕು ಸಾಗಿಸುತ್ತಿದ್ದರು.

ಈಗಿನ ಕಾಲದಲ್ಲಿ ಯುವತಿಯರಲ್ಲಿ ತನ್ನ ಮದುವೆಯಾಗೋ ಹುಡುಗ ಸ್ಪೂರದ್ರೂಪಿ, ಯಾವುದೇ ನ್ಯೂನತೆಯಿಲ್ಲದೇ ಇರುವವನಾಗಿರಬೇಕೆಂಬ ಆಸೆಯಲ್ಲಿರುವ ಹುಡುಗಿಯರಲ್ಲಿ ಇರುವುದು ನ್ಯಾಯ ಸಮ್ಮತವೇ, ಆದರೆ ಸುಶಿಲಾ ಮದುವೆಯಾಗುವ ಹುಡುಗ ಅಂಗವೈಕಲ್ಯ ಆಗಿದ್ದಾನೆಂದು ತಿಳಿದು ಇಷ್ಟು ಪಟ್ಟು ಹಸೆಮಣೆ ಏರಿರುವುದು ಪ್ರಶಂಸನೀಯವಾದದ್ದು. ಅಂಗವೈಕಲ್ಯವನ್ನು ನೋಡಿ ಕನಿಕರವನ್ನು ತೋರಿಸಿ ಸುಮ್ಮನಿರುವ ಈ ಸಮಾಜದಲ್ಲಿ ಒಬ್ಬ ಅಂಗವಿಕಲನನ್ನೆ ತನ್ನ ಜೀವನಕ್ಕೆ ಸ್ವಾಗತಿಸಿ ಇಂದಿನ ಸಾಮಾಜಕ್ಕೆ ಈ ಯುವತಿ ಮಾದರಿಯಾಗಿದ್ದಾಳೆ. ಈ ವಿವಾಹದ ಸಂದರ್ಭದಲ್ಲಿ ಈ ಯುವ ಜೋಡಿಯ ಜೀವನ ಸಂತಸವಾಗಿರಲಿ ಎಂದು ಮದುವೆಗೆ ಬಂದ ಬಂದು ಮಿತ್ತರು ಹಾರೈಸಿದರು
ವರದಿ: ರಾಘವೇಂದ್ರ ಮಲ್ಯ ಭಟ್ಕಳ

Related posts

Leave a Reply