Header Ads
Header Ads
Breaking News

ಅಂಗವೈಕಲ್ಯತೆಯನ್ನು ಮೆಟ್ಟಿನಿಂತ ಕುಂಭಾಶಿಯ ಯುವತಿ, ಲಲಿತಾ ಪೂಜಾರಿ ಕೈಯಲ್ಲಿ ಮೂಡುತ್ತಿದೆ ಕರಕುಶಲ ವಸ್ತುಗಳು


ಮನುಷ್ಯನಿಗೆ ಅಂಗವೈಕಲ್ಯ ಎನ್ನುವುದು ಶಾಪವೆನ್ನುತ್ತಾರೆ. ಆದರೆ ಈ ಶಾಪವನ್ನು ವರವನ್ನಾಗಿಸಿಕೊಳ್ಳುವವರು ಕೆಲವೇ ಮಂದಿ ಅಂತಹವರ ಸಾಲಿಗೆ ಸೇರುತ್ತಾರೆ ಕುಂಭಾಶಿಯ ಕೊರವಡಿಯ ಲಲಿತಾ ಪೂಜಾರಿ.


ಆರು ವರ್ಷವಿರುವಾಗ ಪೊಲೀಯೋ ಕಾಯಿಲೆಗೆ ತುತ್ತಾದ ಲಲಿತಾಗೆ ಕಾಲು ಮತ್ತು ಕೈ ಭಾಗಶಃ ಸ್ವಾಧೀನ ಕಳೆದುಕೊಂಡಿದೆ. ಆದರೂ ದೃತಿಗೆಡೆದ ಲಲಿತಾ ತನ್ನ ವೈಕಲ್ಯತೆಯನ್ನು ಮೆಟ್ಟಿ ನಿಂತು ಕರಕುಶಲ ವಸ್ತುಗಳನ್ನು ಮಾಡಲು ಆರಂಭಿಸಿದರು. ತನ್ನ ಅಂಗವೈಕಲ್ಯತೆಯನ್ನು ಮರೆಯಲು ಆರಂಭಿಸಿದ ಈ ಹವ್ಯಾಸ ಈಗ ಹೆಮ್ಮರವಾಗಿದೆ. ಇದಕ್ಕೆ ಪ್ರೇರಣೆಯಾಗಿ ನಿಂತವರು ಇವರ ಅತ್ತಿಗೆ ಸರಿತಾ ಅವರ ಪ್ರೋತ್ಸಾಹ ಮತ್ತು ಸಹಕಾರದಿಂದ ಅವರು ಈ ಕರಕುಶಲ ವಸ್ತುಗಳನ್ನು ಮಾಡಲಾರಂಭಿಸಿದರು. ಕಿವಿ ಜುಮುಕಿ, ಸರ, ಗೆಜ್ಜೆ, ಹೂದಾನಿ, ಗಣಪತಿ ಹೀಗೆ ಹತ್ತು ಹಲವು ವಸ್ತುಗಳನ್ನು ಇವರು ತಮ್ಮ ಕೈಯಲ್ಲಿ ಮಾಡಿದ್ದಾರೆ. ಮೊದ ಮೊದಲು ಚಿಕ್ಕ ಚಿಕ್ಕ ವಸ್ತುಗಳನ್ನು ತಮ್ಮದೆ ಕಲ್ಪನೆಯಲ್ಲಿ ಮಾಡುತ್ತಿದ್ದ ಲಲಿತಾರಿಗೆ, ಅತ್ತಿಗೆ ನೀಡಿದ ಕರಕುಶಲ ವಸ್ತುಗಳನ್ನು ತಯಾರಿಸುವ ಪುಸ್ತಕದ ಸಹಾಯದಿಂದ ಇನ್ನಷ್ಟು ಹೊಸ ವಸ್ತುಗಳನ್ನು ತಯಾರಿಸಿದ್ರು. ಅದಕ್ಕೊಂದಿಷ್ಟು ತಮ್ಮದೆ ಕಲ್ಪನೆ ಸೇರಿಸಿ ಅದನ್ನು ಇನ್ನಷ್ಟು ಅಂದಗೊಳಿಸಿದರು. ಇದಕ್ಕೆ ಲಲಿತಾರ ಅತ್ತಿಗೆ ಕೂಡ ಕೆಲವೊಂದು ಸಲಹೆಗಳನ್ನು ಮತ್ತು ಹೊಸ ಹೊಸ ಐಡಿಯಾಗಳನ್ನೂ ನೀಡಿದರು. ಇದರಿಂದ ಇನ್ನಷ್ಟು ಬಗೆಯ ಹೊಸ ಹೊಸ ಚಂದದ ವಸ್ತುಗಳು ಇವರ ಕೈಚಳಕದಲ್ಲಿ ಮೂಡಿದೆ.
ತಂತ್ರಜ್ಞಾನ ಬದಲಾದಂತೆ ಈಗ ಹಲವರಿಗೆ ಯೂಟ್ಯೂಬ್ ಗುರುವಾಗಿದೆ. ಅದರಂತೆ ಇವರು ಯೂಟ್ಯೂಬ್ ನೋಡಿ ಕೆಲವೊಂದು ಹೊಸ ವಿಚಾರಗಳನ್ನು ಕಲಿಯೋಣ ಎಂದು ಹೋದರೆ ಅಲ್ಲಿ ಹೇಳಿಕೊಟ್ಟ ಎಲ್ಲಾ ಕರಕುಶಲ ವಸ್ತುಗಳೂ ಈಗಾಗಲೇ ನಾನು ಮಾಡುತ್ತಿದ್ದೆ. ಅದೂ ಕೂಡ ಇನ್ನಷ್ಟು ಸರಳವಾಗಿ ಮಾಡುತ್ತಿದ್ದೆ. ಅದಕ್ಕೆ ನಾನು ಯೂಟ್ಯೂಬ್‌ನ್ನು ನಂಬಿಕೊಂಡಿಲ್ಲ ಸಮಯವಿದ್ದಾಗ ಯೂಟ್ಯೂಬ್‌ನಲ್ಲಿ ಏನಾದರೂ ಹೊಸ ವಿಚಾರ ಸಿಗಬಹುದೇನೋ ಎಂದು ಹುಡುಕಾಡುತ್ತಿರುತ್ತೇನೆ. ಮತ್ತು ನನ್ನ ವಿಧಾನಕ್ಕೂ ಮತ್ತು ಅವರು ಹೇಳಿಕೊಡುವ ವಿಧಾನಕ್ಕೂ ಇರುವ ವೆತ್ಯಾಸವನ್ನು ಕಾಣುತ್ತಿರುತ್ತೇನೆ ಎನ್ನುತ್ತಾರೆ ಲಲಿತಾ.
ತಾನು ಕಲಿತ ವಿದ್ಯೆ ನನ್ನೊಳಗೆ ಸಾಯಬಾರದು, ತಾನು ಎಕಲವ್ಯನಂತೆ ಕಲಿತರೂ ಇನ್ನೊಬ್ಬರಿಗೆ ಅಂತಹ ಸಮಸ್ಯೆ ಬರಬಾರದೆಂಬ ಮನೋಭಾವವಿರುವ ಲಲಿತಾ ತನ್ನ ಮನೆ ಸುತ್ತಮುತ್ತಲಿನ ಆಸಕ್ತ ಮಕ್ಕಳಿಗೆ ಕರಕುಶಲ ವಸ್ತುಗಳ ತಯಾರಿಕೆ ಬಗ್ಗೆ ತರಬೇತಿ ನೀಡುತ್ತಾರೆ. ಇವರು ನೀಡುವ ತರಬೇತಿಗೆ ಯಾವುದೇ ಮಕ್ಕಳಿಂದ ಒಂದು ರೂಪಾಯಿ ಕೂಡ ತೆಗೆದುಕೊಳ್ಳುವುದಿಲ್ಲ. ಮಕ್ಕಳಿಗೆ ಈ ವಸ್ತುಗಳ ತಯಾರಿಕೆ ಬಗ್ಗೆ ಆಸಕ್ತಿ ಮೂಡಬೇಕೆನ್ನುವುದು ಅವರ ಆಶಯವಾಗಿದೆ.
ಲಲಿತಾ ಅದ್ಬುತವೆನಿಸುವ ಕರಕುಶಲ ವಸ್ತುಗಳನ್ನ ತಯಾರಿಸಿದರೂ ಅದನ್ನು ಮಾರಾಟ ಮಾಡಲು ಯಾವುದೇ ವ್ಯವಸ್ಥೆಯಿಲ್ಲ. ಈಗಾಗಲೇ ಅತ್ತಿಗೆ ಮತ್ತು ಅಣ್ಣಂದಿರು ತಮ್ಮ ಸ್ನೇಹಿತರು ಮತ್ತು ಸಂಬಂಧಿಗಳಲ್ಲಿ ಕೆಲವೊಂದು ವಸ್ತುಗಳನ್ನು ಮಾರಾಟ ಮಾಡಿದ್ದಾರೆ. ಆದರೂ ಕೂಡ ತಯಾರಿಸಿಟ್ಟ ವಸ್ತುಗಳು ಇನ್ನೂ ಕೂಡ ಹಾಗೇ ಇದೆ. ಆದರೂ ಕೂಡ ಸ್ತ್ರೀ ಶಕ್ತಿ ಸಂಘಟನೆ ಮೊದಲಾದವುಗಳು ಇವರ ಸಹಾಯಕ್ಕೆ ಬಂದು ಮಾರುಕಟ್ಟೆ ನಿರ್ಮಾಣ ಮಾಡಿಕೊಟ್ಟರೆ ಇವರ ಕಾಯಕಕ್ಕೆ ಒಂದು ಬೆಲೆ ಬರುತ್ತದೆ.
ಲಲಿತಾಗೆ ಗಾಲಿ ಕುರ್ಚಿ ಮೇಲೆ ಕುಳಿತುಕೊಳ್ಳಬೇಕೆಂಬ ಕನಸಿದ್ದ ಬಗ್ಗೆ ತಿಳಿದ ಕುಂಭಾಶಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀವಾಣಿ ಅಡಿಗ ಮತ್ತು ಸದಸ್ಯರಿಗೆ ತಿಳಿದ ಹಿನ್ನೆಲೆ ಅವರು ಇವರಿಗೆ ಶೇ. ೩ರ ಅನುದಾನದಡಿ ಗಾಲಿ ಕುರ್ಚಿ ನೀಡಿದೆ ಮತ್ತು ಮುಂದೆ ಅವರಿಗೆ ಬೇಕಾದ ಎಲ್ಲಾ ಸೌಕರ್ಯಗಳನ್ನೂ ನೀಡುವುದಾಗಿ ಭರವಸೆ ನೀಡಿದ್ದಾರೆ.

Related posts

Leave a Reply