Header Ads
Header Ads
Breaking News

ಅಂಗವೈಕಲ್ಯ ಮೆಟ್ಟಿನಿಂತು ಮಾದರಿಯಾದ ವಿದ್ಯಾರ್ಥಿಗಳು

ಸುಳ್ಯದ ಈ ವಿಶೇಷ ಚೇತನ ಮಕ್ಕಳು ಎಲ್ಲರಂತಲ್ಲ. ಅಂಗವೈಕಲ್ಯತೆ ಇದ್ದರೂ ಒಬ್ಬೊಬ್ಬರು ಒಂದೊಂದು ವಿಷಯಗಳಲ್ಲಿ ಪರಿಣಿತರು. ಆಲಂಕಾರಿಕ ವಸ್ತುಗಳನ್ನು ತಯಾರು ಮಾಡುವಲ್ಲಿ ಎತ್ತಿದ್ದ ಕೈ, ಇವರ ಕೈಯಲ್ಲಿ ಅರಳುವ ಪೇಪರ್ ಕಟ್ಟಿಂಗ್‍ಗಳು, ಹೂವಿನ ಬೊಕ್ಕೆ, ಗ್ರೀಟಿಂಗ್ಸ್ ಕಾರ್ಡ್, ಚಿತ್ರಗಳು, ನೆಲಕ್ಕೆ ಹಾಸುವ ಮ್ಯಾಟ್‍ಗಳು, ಕೈವಸ್ತ್ರ, ಟೇಬಲ್‍ಗೆ ಹಾಸುವ ಆಲಂಕಾರಿಕ ವಸ್ತುಗಳು, ಪೇಪರ್ ಕವರ್‍ಗಳು ಇವುಗಳನ್ನು ತಯಾರಿಸುತ್ತಿರುವುದು ಸಾಮಾನ್ಯ ವಿದ್ಯಾರ್ಥಿಗಳಲ್ಲ. ಅಂಗವೈಕಲ್ಯವನ್ನು ಮೆಟ್ಟಿನಿಂತು ಸಮಾಜಕ್ಕೆ ಮಾದರಿಯಾದ ವಿಶೇಷಚೇತನ ಮಕ್ಕಳು.ಹೆತ್ತವರಿಂದ, ಸಮಾಜದಿಂದ ನಿರ್ಲಕ್ಷ್ಯಕ್ಕೆ ಒಳಗಾದ ಮಕ್ಕಳಿಗೆ ದಾರಿದೀಪವಾಗಿದ್ದು ಸುಳ್ಯದ ಎಂ.ಬಿ.ಪೌಂಡೇಷನ್‍ನ ಸಾಂದೀಪ ವಿಶೇಷ ಶಾಲೆ. ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಂಗವಿಕಲ ಮಕ್ಕಳ ಕೇಂದ್ರಿಕೃತತ ವಿಶೇಷ ಶೈಕ್ಷಣಿಕ ಯೋಜನೆಯಡಿ ಎಂ.ಬಿ.ಪೌಂಡೇಷನ್ ಮಾತೃಸಂಸ್ಥೆಯ ಅಡಿಯಲ್ಲಿ 2000ರಲ್ಲಿ ಆರಂಭವಾದ ವಿಶೇಷ ಶಾಲೆ ಸರಕಾರದ ಹೆಚ್ಚಿನ ಅನುದಾನಗಳು ಬರದಿದ್ದು ಹಲವು ಸಮಸ್ಯೆಗಳಿದ್ದರೂ ವಿಶೇಷ ಮಕ್ಕಳ ಚಟುವಟಿಕೆಗಳಿಗೆ ತೊಂದರೆ ಆಗಿಲ್ಲ. 7 ವಿಶೇಷ ಚೇತನ ಮಕ್ಕಳಿಂದ ಆರಂಭವಾದ ಶಾಲೆ 20ನೇ ವರ್ಷದಲ್ಲಿ ಸುಮಾರು 45 ಮಕ್ಕಳು ವಿಶೇಷ ಶಾಲೆಯಲ್ಲಿ ಮಕ್ಕಳ ಐಕ್ಯೂ ಮಟ್ಟದ ಮೂಲಕ ತರಬೇತಿ ಪಡೆಯುತ್ತಿದ್ದಾರೆ.

ವಿಶೇಷ ಮಕ್ಕಳ ಕೈಚಳಕದಲ್ಲಿ ಹಲವು ಆಲಂಕಾರಿಕ ವಸ್ತುಗಳು ಮೂಡುತ್ತಿದೆ. ಅಂಗವೈಕಲ್ಯ ಮಕ್ಕಳ ಈ ಕೈಚಳಕ ವಿಶ್ಮಯಗೊಳಿಸಿದೆ. ಹೂವಿನ ಬೊಕ್ಕೆಗಳು, ವೇದಿಕೆಗಳನ್ನು ಶೃಂಗಾರ ಮಾಡುವ ಕರಕುಶಲಗಳು, ಬಟ್ಟೆಗಳ ಮೇಲೆ ನೂಲುಗಳ ಸಹಾಯದಿಂದ ವಿವಿಧ ಆಕಾರದ ಚಿತ್ರಗಳು ಮಕ್ಕಳ ಬೌಧಿಕ ಶಕ್ತಿಗೆ ಹಿಡಿದ ಕೈಕನ್ನಡಿ. ಮಕ್ಕಳು ತಯಾರಿಸುವ ಚಿತ್ರಗಳು, ಆಲಂಕಾರಿಕ ವಸ್ತುಗಳು, ಬಣ್ಣ, ಆಕಾರ, ಗಾತ್ರ, ಒಂದಕ್ಕಿಂತಲೂ ಒಂದು ಭಿನ್ನವಾಗಿದೆ. ಆರೋಗ್ಯವಂತ ವಿದ್ಯಾರ್ಥಿಗಳಲ್ಲಿ ಇರುವ ಗುಣಗಳನ್ನು ಶಿಕ್ಷಣದ ಮೂಲಕ ಬೆಳೆಸಿಕೊಂಡಿದ್ದಾರೆ.

ಆಲಂಕಾರಿಕ ವಸ್ತುಗಳಿ ಅಲ್ಲದೇ ಕೆಲವು ವಿದ್ಯಾರ್ಥಿಗಳಿಗೆ ಹೊಲಿಗೆ ತರಬೇತಿಗಳನ್ನು ನೀಡುವ ಮೂಲಕ ಅಂಗವೈಕಲ್ಯವನ್ನು ಮೆಟ್ಟಿನಿಲ್ಲುವಲ್ಲಿ ಸಹಕಾರ ನೀಡುತ್ತಿದ್ದಾರೆ. ಇಂತಹ ತರಬೇತಿಗಳಿಗೆ ಸ್ಥಳಾವಕಾಶದ ಕೊರತೆ ಕೂಡ ಎದ್ದು ಕಾಣುತ್ತಿದೆ. ಮಕ್ಕಳಿಗೆ ಆತನ ಹೆಸರು ಹೇಳುವಂತದ್ದು, ಊರಿನ ಹೆಸರು, ದೂರಾದ ಊರುಗಳಿಂದ ಬರುವ ಮಕ್ಕಳು ಬಸ್ಸು ಬೋರ್ಡ್ ಓದಲು ತಿಳಿಸಿಕೊಡಲಾಗುತ್ತದೆ. ಇದಕ್ಕೆಲ್ಲ ಇಲ್ಲಿ ಶಿಕ್ಷಕಿಯರಿಗೆ ವಿಶೇಷ ಶಿಕ್ಷಣದ ತರಬೇತಿ ಪಡೆದು ಮಕ್ಕಳಿಗೆ ಭೋಧನೆ ಮಾಡುತ್ತಿದ್ದಾರೆ. ಶಿಕ್ಷಕರು ಕೂಡಾ ತುಂಬಾ ತಾಳ್ಮೆಯಿಂದ ಮಕ್ಕಳಿಗೆ ಎಲ್ಲಾ ರೀತಿಯಿಂದಲೂ ಸಹಕಾರ ನೀಡುತ್ತಾರೆ. ಇಲ್ಲಿನ ಮಕ್ಕಳು ಬುದ್ದಿಮಾಂದ್ಯತೆ ಅಥವಾ ಮೆದುಳಿನ ಬೆಳವಣಿಗೆ ಕುಂಠಿತವಾಗಿದ್ದರೂ ಕೂಡ ಸಾಮಾನ್ಯ ಮಕ್ಕಳಲ್ಲಿ ಇರುವ ಯಾವುದಾದರೂ ಒಂದು ಕಲೆ ಇದೆ.

ಈ ಬಗ್ಗೆ ಸಾಂದೀಪ ವಿಶೇಷ ಶಾಲೆಯ ಅಧ್ಯಕ್ಷ ಎಂ.ಬಿ.ಸದಾಶಿವ ಪ್ರತಿಕ್ರಿಯೆ ನೀಡಿ ಅಂಗವೈಕಲ್ಯ ಇರುವ ಮಕ್ಕಳನ್ನು ತನ್ನ ಮಕ್ಕಳು ಎಂಬಂತೆ ಸಲಹುವ ಈ ಸಾಂದೀಪ ವಿಶೇಷ ಶಾಲೆಗೆ ಸ್ವಂತ ಕಟ್ಟಡ ಇಲ್ಲ. ಸುಳ್ಯ ಪದವಿ ಪೂರ್ವ ಕಾಲೇಜಿಗೆ ಸೇರಿಸ ವೃತ್ತಿಪರ ವಿಭಾಗದ ತರಭೆತಿ ಕಟ್ಟಡದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ತರಬೇತಿ ನೀಡಲು ಕೂಡ ಸ್ಥಳಾವಕಾಶದ ಕೊರತೆ ಕಾಡುತ್ತಿದೆ. ಸರಕಾರದ ಯಾವ ಸೌಲಭ್ಯಗಳು ಕೂಡ ಇಲ್ಲಿಯವರೆಗೆ ಬಂದಿಲ್ಲ. ಸರಕಾರದಿಂದ ಸರಕಾರಿ ಶಾಲೆಗಳಿಗೆ ನೀಡುವ ಬಿಸಿಯೂಟ ಯೋಜನೆಯಿಂದಲೂ ಮಕ್ಕಳು ವಂಚಿತರಾಗಿದ್ದಾರೆ. ಹಲವು ದಾನಿಗಳ ನೆರವು ಪಡೆದುಕೊಂಡು ಈಗ ತನ್ನ ಸ್ವಂತ ಜಾಗದಲ್ಲಿ ಎರಡು ಅಂತಸ್ತಿನ ಕಟ್ಟಡ ಕಟ್ಟಿ ಶಾಲೆಯನ್ನು ಕಟ್ಟುತ್ತಿದ್ದೇನೆ. ಸರಕಾರಿ ಶಾಲೆಗಳಿಗೆ ಸಿಗುವ ಎಲ್ಲಾ ಸೌಲಭ್ಯಗಳು ಕೂಡ ಇಲ್ಲಿನ ಮಕ್ಕಳಿಗೆ ಸಿಗಬೇಕು ಎಂದು ಹೇಳಿದರು.

ಸಂಸ್ಥೆಯ ಮುಖ್ಯ ಶಿಕ್ಷಕಿ ಹರಿಣಿ ಸದಾಶಿವ ಪ್ರತಿಕ್ರಿಯೇ ನೀಡಿ 7 ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಆರಂಭವಾದ ವಿಶೇಷ ಮಕ್ಕಳ ಶಾಲೆ ಇವತ್ತು 40 ರಿಂದ 45 ವಿಕಲಚೇತನ ಮಕ್ಕಳು ಶಿಕ್ಷಣ ಪಡೆಯತ್ತಿದ್ದಾರೆ. ಅವರ ಐಕ್ಯೂ ಮಟ್ಟ ನೋಡಿ ಶಿಕ್ಷಣ ನೀಡಲಾಗುತ್ತಿದೆ. ಮಕ್ಕಳಿಗೆ ಯಾವುದೇ ತೀತಿಯಲ್ಲಿ ತೊಂದರೆ ಆಗಬಾರದು ಎನ್ನುವ ನಿಟ್ಟಿನಲ್ಲಿ ವಿಶೇಷ ಶಿಕ್ಷಣ ಪಡೆದ ಶಿಕ್ಷಕಿಯರನ್ನು ನಿಯೋಜನೆ ಮಾಡಲಾಗಿದೆ. ಮಕ್ಕಳಿಗೆ ಆಲಂಕಾರಿಕ ವಸ್ತುಗಳನ್ನು ತಯಾರಿಸುವುದು, ಕರಕುಶಲ ವಸ್ತುಗಳನ್ನು ಮತ್ತು ಹೊಲಿಗೆ ತರಬೇತಿಗಳನ್ನು ಮಕ್ಕಳಿಗೆ ಕಲಿಸುವ ಮೂಲಕ ಅವರನ್ನು ಸ್ವಾವಲಂನಿಯಾಗಿ ಮಾಡುವುದು ಸಂಸ್ಥೆಯ ಉದ್ದೇಶ ಎಂದು ಹೇಳಿದರು.
ಒಟ್ಟಿನಲ್ಲಿ ಅಂಗವೈಕಲ್ಯವನ್ನು ಮೆಟ್ಟಿನಿಂತು ಸಮಾಜಕ್ಕೆ ಮಾದರಿಯಾದ ವಿಶೇಷಚೇತನ ಮಕ್ಕಳ ಈ ಕಾರ್ಯ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.

Related posts

Leave a Reply

Your email address will not be published. Required fields are marked *