Header Ads
Breaking News

ಅಂಗಾಂಗ ದಾನ ಮಾಡುವ 8 ಜನರ ಪಾಲಿಗೆ ಬೆಳಕಾದ ಯುವಕ

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯುವಕನೋರ್ವನ ಅಂಗಾಂಗ ದಾನ ಮಾಡುವ ಮೂಲಕ ಯುವಕನ ಕುಟುಂಬ ಸಾವಿನಲ್ಲೂ ಸಾರ್ಥಕತೆಯನ್ನು ಮೆರೆದಿದೆ. ಮೇ 27ರಂದು ಉಡುಪಿ ಬ್ರಹ್ಮಾವರ ಬಳಿ ರಸ್ತೆ ಅಪಘಾತ ಉಂಟಾಗಿ ಸುದೀಪ್ ಪೂಜಾರಿ ಎಂಬವರು ತೀವ್ರವಾಗಿ ಗಾಯಗೊಂಡು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆದರೆ ನಿನ್ನೆ ಸಂದೀಪ್ ಅವರ ಮೆದುಳು ನಿಷ್ಕ್ರಿಯಗೊಂಡಿದ್ದು, ಮೆದುಳಿನ ಮರಣ ಹೊಂದಿದ ರೋಗಿ ಎಂದು ಘೋಷಿಸಿತ್ತು.

ಈ ಹಿನ್ನೆಲೆಯಲ್ಲಿ ಸುದೀಪ್ ಪೂಜಾರಿಯವರ ಅಣ್ಣಂದಿರಾದ ಸಂದೀಪ್ ಪೂಜಾರಿ ಮತ್ತು ಪ್ರದೀಪ್ ಪೂಜಾರಿ ಅವರು ಕಾರ್ಯಸಾಧ್ಯವಾದ ಅಂಗಗಳನ್ನು ದಾನ ಮಾಡಲು ಇಚ್ಚಿಸಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಎರಡು ಕಾರ್ನಿಯ, ಎರಡು ಮೂತ್ರಪಿಂಡಗಳು, ಯಕೃತ್ತು (ಲಿವರ್), ಮೇದೋಜೀರಕ ಗ್ರಂಥಿ (ಪ್ಯಾಂಕ್ರಿಯಾಸ್), ಹೃದಯ ಮತ್ತು ಶ್ವಾಸಕೋಶವನ್ನು ದಾನ ಮಾಡಿ ಒಟ್ಟು ಎಂಟು ಜನರ ಬದುಕನ್ನು ಉಳಿಸಲು ಸಹಾಯ ಮಾಡಿದ್ದಾರೆ. ಈ ಅಂಗಾಂಗಳನ್ನು ಗ್ರೀನ್ ಕಾರಿಡಾರ್ ಮೂಲಕ ಮಣಿಪಾಲದಿಂದ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಬೆಂಗಳೂರಿಗೆ ವರ್ಗಾಯಿಸಲಾಯಿತು.

Related posts

Leave a Reply

Your email address will not be published. Required fields are marked *