Header Ads
Breaking News

ಅಂಚೆ ಜೀತ ಪದ್ಧತಿ ಮುಕ್ತಗೊಳಿಸಿ ಕಮಲೇಶಚಂದ್ರ ವರದಿ ಜಾರಿಗೊಳಿಸಿ ಪುತ್ತೂರಿನಲ್ಲಿ ಅಂಚೆ ನೌಕರರ ಅನಿರ್ಧಿಷ್ಟ ಮುಷ್ಕರ

 
ಪುತ್ತೂರು; ಗ್ರಾಮೀಣ ಅಂಚೆ ನೌಕರರು ತಮ್ಮ ಹಲವಾರು ವರ್ಷದ ಬೇಡಿಕೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಫಲಕಾರಿಯಾಗಿಲ್ಲ. ಗಾಣದೆತ್ತಿನಂತೆ ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಈ ನೌಕರರು ಬ್ರಿಟೀಷರು ಬಿಟ್ಟಹೋದ ’ಅಂಚೆ ಜೀತ ಪದ್ಧತಿ’ಯಲ್ಲಿ ಇಂದೂ ಬದುಕುತ್ತಿದ್ದಾರೆ. ೨೦೧೬ರಲ್ಲಿ ನೀಡಲಾದ ಕಮಲೇಶಚಂದ್ರ ವರದಿಯನ್ನು ಜಾರಿಯಾಗದಿದ್ದರೆ ಮುಷ್ಕರ ಹಿಂತೆಗೆದುಕೊಳ್ಳುವುದಿಲ್ಲ. ಯಾವುದೇ ಕೆಲಸ ಮಾಡದೆ ಕೇವಲ ಮೇಜು ಕುಟ್ಟಿ ಸಂಬಳ ಪಡೆಯುವ ರಾಜಕಾರಣಿಗಳಿಗೆ ಯಾವುದೇ ಸಮಸ್ಯೆ ಇಲ್ಲದೆ ಕೇಂದ್ರ ಸರಕಾರ ಹಣ ನೀಡುತ್ತಿದೆ. ಆದರೆ ಇಲಾಖೆಯನ್ನು ಲಾಭದಾಯಕವಾಗಿ ಮಾರ್ಪಡಿಸಿದ ಗ್ರಾಮೀಣ ಅಂಚೆ ನೌಕರರ ಬಹುವರ್ಷದ ಬೇಡಿಕ