Header Ads
Header Ads
Breaking News

ಅಂತರಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿ ಪರಶುರಾಮ ತಂಡಜದ ಮುಡಿಗೆ ಪ್ರಶಸ್ತಿಯ ಗರಿ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜು ಮೈದಾನದಲ್ಲಿ ಪಂದ್ಯಾಟ

ಭಟ್ಕಳದಲ್ಲಿ ಸಾಗರ ರಸ್ತೆಯ ಶ್ರೀ ಗುರು ಸುಧೀಂದ್ರ ಕಾಲೇಜು ಮೈದಾನದಲ್ಲಿ ನಡೆಯುತ್ತಿದ್ದ ಅಂತರ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಉಡುಪಿ ತಂಡವನ್ನು ಮಣಿಸಿದ ಪರಶುರಾಮ ತಂಡ ವಿಜಯಿಯಾಗಿದೆ.

ತೀವ್ರವಾದ ಹಣಾಹಣಿಯಿಂದ ಆರಂಭವಾದ ಕಬಡ್ಡಿ ಪಂದ್ಯಾಟ ಕಬಡ್ಡಿ ಸೆಣಸಾಟದಲ್ಲಿ ಗೆಲ್ಲುವ ತಂಡ ಯಾವುದು ಎನ್ನುವ ಕೂತುಹಲ ಭಟ್ಕಳದಲ್ಲಿ ಕೆರಳಿಸಿತ್ತು. ಕೊನೆಗೆ ಅತಿಥೇಯ ಪರಶುರಾಮ ತಂಡ ಉಡುಪಿ ಜಿಲ್ಲೆಯ ಜಲದುರ್ಗಾ ಟೆಲ್ಲರ್ ತಂಡವನ್ನು 13-17 ರ ಅಂತರದಲ್ಲಿ ಮಣಿಸುವ ಮೂಲಕ ವಿಜಯಮಾಲೆಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಉಡುಪಿಯ ಜಲದುರ್ಗಾ ತಂಡವೂ ಉಚ್ಚಿಲ್‌ನ ಮಹಾಲಕ್ಷ್ಮಿ ತಂಡವನ್ನು ಮಣಿಸಿದರೆ, ಭಟ್ಕಳದ ಕೊಸ್ಮಸ್ ಮತ್ತು ಪರಶುರಾಮ ತಂಡಗಳು ಸೆಮಿಫೈನಲ್ ಪ್ರವೇಶಿಸಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು.

ಬಳಿಕ ಉಡುಪಿಯ ಜಲದುರ್ಗಾ ಭಟ್ಕಳದ ಪರಶುರಾಮ ತಂಡಗಳು ಫೈನಲ್ ಪಂದ್ಯದಲ್ಲಿ ಕೂತುಹಲದ ರೋಚಕ ಆಟವಾಡಿ ಪ್ರೇಕ್ಷಕರನ್ನು ರಂಜಿಸಿದವು. ಪೈನಲ್ ಸೇರಿ ಎಲ್ಲಾ ಪಂದ್ಯಗಳು ರೋಚಕತೆಯನ್ನು ತಲುಪಿದ್ದು. ಪ್ರೇಕ್ಷರರ ಕೂಗಾಟ ಮುಗಿಲು ಮುಟ್ಟಿತ್ತು. ವಿಜಯಶಾಲಿಯಾದ ಗೆದ್ದ ಪರಶುರಾಮ ತಂಡದ ಮನೋಜ ನಾಯ್ಕ ಬೆಸ್ಟ ಆಲ್‌ರೌಂಡರ, ಬೆಸ್ಟ ಕೇಚರ್ ಆಗಿ ವಿಶ್ವ ನಾಯ್ಕ, ಜಲದುರ್ಗಾ ತಂಡದ ವಿಕ್ರಾಂತ ಬೆಸ್ಟ ರೈಡರ್ ಪ್ರಶಸ್ತಿ ಪಡೆದುಕೊಂಡರು.

ಇದಕ್ಕೂ ಪೂರ್ವದಲ್ಲಿ ಕಬಡ್ಡಿ ಪಂದ್ಯಾವಳಿಯ ಸಮಾರೋಪ ಕಾರ್ಯಕ್ರಮ ನಡೆದಿದ್ದು ಕಾರ್ಯಕ್ರಮದಲ್ಲಿ ಬಿ.ಜೆ.ಪಿ ಪಕ್ಷದ ನಾಯಕ ಜೆ.ಡಿ ನಾಯ್ಕ ಮಾತನಾಡಿ “ಒಂದು ಕ್ರಿಡಾ ಕೂಟವನ್ನು ನಡೆಸುವುದು ಸುಲಭದ ಮಾತು ಆಗಿರುದಿಲ್ಲಾ ಎಲ್ಲಾ ಕ್ರೀಡಾಸಕ್ತರ ಬೆಂಬಲ ಬೇಕಾಗುತ್ತದೆ ಎಂದು ಹೇಳಿದರು

ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷ ಸಾಧಿಖ್ ಮಟ್ಟಾ, ಇನಾಯಿತುಲ್ಲಾ ಶಾಬಂದ್ರಿ, ಅನಂತ ನಾಯ್ಕ ಉಗ್ರಾಣಿಮನೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ: ರಾಘವೇಂದ್ರ ಮಲ್ಯ ಭಟ್ಕಳ