Header Ads
Header Ads
Header Ads
Breaking News

ಅಂತರರಾಜ್ಯ ಕುಖ್ಯಾತ ಬೈಕ್ ಕಳ್ಳನ ಸೆರೆ ಮಂಜೇಶ್ವರ ಠಾಣಾಧಿಕಾರಿ ನೇತೃತ್ವದ ಕಾರ್ಯಾಚರಣೆ

ಮಂಜೇಶ್ವರ: ಅಂತರಾಜ್ಯ ಕುಖ್ಯಾತ ಬೈಕ್ ಕಳ್ಳನೊಬ್ಬನನ್ನು ಮಂಜೇಶ್ವರ ಠಾಣಾಧಿಕಾರಿ ಅನೂಪ್ ಕುಮಾರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಕೋಝಿಕ್ಕೋಡ್ ಕೊಡುವಳ್ಳಿ ನಿವಾಸಿ ಫಸಲುದ್ದೀನ್ (27) ಬಂಧಿತ ಆರೋಪಿ. ಕಳವುಗೈದ ಬುಲೆಟ್ ಬೈಕನ್ನು ಕೂಡಾ ಪೊಲೀಸರು ವಶಕ್ಕೆ ತೆಗೆದಿದ್ದಾರೆ.

ಕರ್ನಾಟಕದ ವಿಟ್ಲ ಭಾಗದಿಂದ ಆನೆಕಲ್ಲು ರಸ್ತೆಯಾಗಿ ಆರೋಪಿ ಬೈಕಿನಲ್ಲಿ ಆಗಮಿಸುತ್ತಿರುವಾಗ ಅದೇ ಸ್ಥಳದಲ್ಲಿ ವಾಹನ ತಪಾಸಣೆಯಲ್ಲಿ ನಿರತರಾಗಿದ್ದ ಠಾಣಾಧಿಕಾರಿ ತಂಡವು ವಾಹನವನ್ನು ತಡೆದು ನಿಲ್ಲಿಸಿ ತಪಾಸಣೆಗೈಯುತ್ತಿರುವ ಸಂದರ್ಭ ತದ್ವಿರುದ್ದವಾದ ಹೇಳಿಕೆಯನ್ನು ನೀಡಿದ ಹಿನ್ನೆಲೆಯಲ್ಲಿ ಈತನನ್ನು ವಶಕ್ಕೆ ತೆಗೆದು ತನಿಖೆಗೊಳಪಡಿಸಿದಾಗ ಮಾಹಿತಿಗಳು ಲಭಿಸಿವೆ. ಇದೀಗ ಈತನಿಗೆ ಕರ್ನಾಟಕದ ಕಳವು ತಂಡದ ಕೈವಾಡವಿರಬಹುದಾಗಿ ಶಂಕಿಸಲಾಗಿದೆ.

Related posts

Leave a Reply