Header Ads
Breaking News

“ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ”

ಸುಳ್ಯದ ಸಿಡಿಪಿಓ ಕಛೇರಿಯ ಶ್ರೀಶಕ್ತಿ ಭವನದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ , ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಇವುಗಳ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅಚರಿಸಲಾಯಿತು. ಕಾಯ್ರಕ್ರಮದ ಉದ್ಘಾಟಣೆಯನ್ನು ನ್ಯಾಯಲಯದ ನ್ಯಾಯಧೀಶರಾದ ಯಶವಂತಕುಮರ್ ನೆರವೇರಿಸಿದರು. ಸಿಡಿಪಿಒ ರಶ್ಮಿ ಅವರು ಮಹಿಳಾ ದಿನಾಚರಣೆ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು.

 

ಹಿರಿಯ ವಕೀಲರಾದ ಬಿ ವೆಂಕಪ್ಪ ಗೌಡ, ವಕೀಲರಾದ ಪ್ರತಿಭಾ ಇವರು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದ್ದರು. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಬಗ್ಗೆ ಸುಳ್ಯ ಗಾರ್ಡನ್ ಅಸ್ಪತ್ರೆಯ ವೈದ್ಯಾಧಿಕಾರಿಯಾದ ಸಾಯಿಗೀತ ವಿಷಯ ಮಂಡಿಸಿದ್ದರು. ಸಭೆಯ ಅದ್ಯಕ್ಷರಾದ ವಕೀಲರ ಸಂಘದ ಅಧ್ಯಕ್ಷರಾದ ಎಂ ವೆಂಕಪ್ಪ ಗೌಡರು ಮಾತನಾಡಿ ಮಹಿಳೆಯ ರಕ್ಷಣೆ, ಸುರಕ್ಷತೆ, ಅವಳ ಜೀವನದಲ್ಲಿ ಬರುವ ಕಾನೂನುಗಳ ಬಗ್ಗೆ, ಮಹಿಳೆ ಪುರುಷರಷ್ಟೇ ಸಮಾನ ಮೀಸಲಾತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾಳೆ.

 

ಈ ದಿನ ಮಹಿಳೆ ಎಲ್ಲ ರಂಗದಲ್ಲೂ ಮುಂಚೂಣಿಯಲ್ಲಿದ್ದಾಳೆಂದು ಮಾತನಾಡಿದ್ದರು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ರಾಧಾ ಬಾರ್ಪಣೆ ಪ್ರಾರ್ಥಿಸಿದ್ದರು. ಕಾರ್ಯಕ್ರಮದಲ್ಲಿ ವಕೀಲರಾದ ಧರ್ಮಪಾಲ ಕೊಯಿಂಗಾಜೆ ಎಲ್ಲರನ್ನು ಸ್ವಾಗತಿಸಿದ್ದರು. ಕಾರ್ಯಕ್ರಮವನ್ನು ರವಿಶ್ರೀ ನಿರುಪಿಸಿದರು. ಮೇಲ್ವಿಚಾರಕಿ ದೀಪಿಕಾರವರು ವಂದಿಸಿದರು. ವಕೀಲರು, ನ್ಯಾಯಲಯದ ಸಿಬ್ಬಂದಿ ವರ್ಗ, ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಬ್ಲಾಕ್ ಸೊಸೈಟಿಯ ಶಿಬ್ಬಂದಿವರ್ಗ, ಸಿಡಿಪಿಒ ಇಲಾಖೆಯ ಸಿಬ್ಬಂದಿ ವರ್ಗದವರೆಲ್ಲಾ ಹಾಜರಿದ್ದರು.

Related posts

Leave a Reply

Your email address will not be published. Required fields are marked *