Header Ads
Breaking News

‘ಅಂತರಾಳದ ಗೀತೆಗಳು’ ಲೋಕಾರ್ಪಣೆ : ಮಂಗಳೂರು ಪ್ರೆಸ್‍ಕ್ಲಬ್‍ನಲ್ಲಿ ಬಿಡುಗಡೆ

ಪ್ರೊ. ಬಿ.ಎಂ. ಇಚ್ಲಂಗೋಡುರವರು ಬರೆದ ‘ಅಂತರಾಳದ ಗೀತೆಗಳು ಎಂಬ ಕವನ ಸಂಕಲನ ಬಿಡುಗಡೆ ಸಮಾರಂಭ ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ನಡೆಯಿತು.ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಅವರು ಕೃತಿಯನ್ನು ಬಿಡುಗಡೆಗೊಳಿಸಿದರು. ಪ್ರೊ. ಬಿ.ಎಂ. ಇಚ್ಲಂಗೋಡು ಅವರು ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಕನ್ನಡದ ಅನೇಕ ಸಾಹಿತ್ಯ ಕೃತಿಗಳನ್ನು, ಕವನ ಸಂಕಲನಗಳನ್ನು ಇಂಗ್ಲೀಷ್ ಸಹಿತವಾಗಿ ನಾಡಿಗೆ ನೀಡಿದವರು. ಇವತ್ತು ಅಂತರಾಳದ ಗೀತೆಗಳು ಎಂಬ ಕವನ ಸಂಕಲವನ್ನು ಬಿಡುಗಡೆಗೊಳಿಸಲಾಯಿತು. ಹೀಗೆ ಅವರು ಮುಂದಿನ ದಿನಗಳಲ್ಲಿ ಕವನ ಸಂಕಲನಗಳನ್ನು ಬರೆಯುತ್ತಾ ಇರಲಿ ಎಂದು ಹಾರೈಸಿದರು. ಆನಂತರ ಪ್ರೊ. ಬಿ.ಎಂ. ಇಚ್ಲಂಗೋಡು ಅವರು ಮಾತನಾಡಿ, ನನ್ನ ಜೀವನದಲ್ಲಿ ಆಗಿ ಹೋದ ಕೆಲವೊಂದು ವಿಚಾರಗಳನ್ನು ಈ ಕವನ ಸಂಕಲನದಲ್ಲಿ ಅಳವಡಿಸಿದ್ದೇನೆ ಎಂದು ಹೇಳಿದರು.ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಕನ್ನಡ ಸಂಘದ ಕಾರ್ಯದರ್ಶಿ ಜೀವನ್ ಮತ್ತು ಹಾರಿಸ್ ಮುಹಮ್ಮದ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *