Header Ads
Header Ads
Breaking News

ಅಂತರಾಷ್ಟ್ರೀಯ ದೇಹದಾರ್ಢ್ಯಪಟು ನಿಶಾನ್‌ಕುಮಾರ್‌ಗೀ ಸನ್ಮಾನ ಮಂಗಳೂರು ರೋಟರಿ ವತಿಯಿಂದ ಕಾರ್ಯಕ್ರಮ

ರೋಟರಿ ಮಂಗಳೂರು ಜಿಲ್ಲಾ 3181 ವತಿಯಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ದೇಹದಾರ್ಢ್ಯ ಪಟು ನಿಶಾನ್ ಕುಮಾರ್ ಅವರಿಗೆ ಸನ್ಮಾನ ಕಾರ್ಯಕ್ರಮವು ಮಂಗಳೂರಿನಲ್ಲಿ ನಡೆಯಿತು.

ಉದ್ಯಮಿ ಮತ್ತು ರೋಟರಿಯನ್ ರವಿಚಂದ್ರ ಅವರು ನಿಶಾನ್ ಕುಮಾರ್‌ರನ್ನು ಸನ್ಮಾನಿಸಿದ್ದರು. ಈ ವೇಳೆ ರೋಟರಿ ಮಾಜಿ ಅಧ್ಯಕ್ಷ ಮಾಧವ ಸುವರ್ಣ ಮಾತನಾಡಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದು ಸಂತಸ ತಂದಿದೆ ಎಂದು ಹೇಳಿದರು.

ಈ ಸಂದರ್ಭ ರೋಟರಿ ಮಂಗಳೂರಿನ 3181 ಅಧ್ಯಕ್ಷ ವಸಂತ ಶೆಣೈ, ಸೆಕ್ರೆಟರಿ ನವೀನ್ ನಾರಾಯಣ್, ಉಪಾಧ್ಯಕ್ಷ ವಸಂತ ಪೈ ಮತ್ತಿತ್ರರು ಉಪಸ್ಥಿತರಿದ್ದರು.

ವರದಿ: ಶರತ್