Header Ads
Header Ads
Breaking News

ಅಂತರ ಜಿಲ್ಲಾ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಟ್ರೋಫಿ ಕಬಡ್ಡಿ ಪಂದ್ಯಾಟದಲ್ಲಿ ಟಾಸ್ಟ್ ಪೆರುವಾಯಿ ತಂಡಕ್ಕೆ ಪ್ರಥಮ ಪ್ರಶಸ್ತಿ

 

ವಿಟ್ಲದ ಮಾದರಿ ಶಾಲೆಯ ಮೇಲಿನ ಮೈದಾನದಲ್ಲಿ ವಿಟ್ಲ ಸ್ವಸ್ತಿಕ್ ಫ್ರೆಂಡ್ಸ್ ಆಶ್ರಯದಲ್ಲಿ ದ ಕ ಜಿಲ್ಲಾ ಮತ್ತು ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಹಕಾರದಲ್ಲಿ ನಡೆದ ಪ್ರೋ ಕಬಡ್ಡಿ ಮಾದರಿಯ ಮ್ಯಾಟ್ ಅಂತರ್ ಜಿಲ್ಲಾ ಅಹರ್ನಿಶಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಟ್ರೋಫಿ – 2017 ಕಬಡ್ಡಿ ಪಂದ್ಯಾಟದಲ್ಲಿ ಟಾಸ್ಕ್ ಪೆರುವಾಯಿ ತಂಡ ಪ್ರಥಮ ಪ್ರಶಸ್ತಿ ಪಡೆದುಕೊಂಡಿದೆ.

ಮಂಗಳೂರು ವಿಶ್ವವಿದ್ಯಾಲಯ ತಂಡ ದ್ವಿತೀಯ ಸ್ಥಾನ ಪಡೆದರೆ, ಫ್ರೆಂಡ್ಸ್ ಕಡಬ ತಂಡ ತೃತೀಯ ಹಾಗೂ , ಸಾಯಿ ಟೌನ್ ಕಿಚನ್ ವಿಟ್ಲ ತಂಡ ಚತುರ್ಥ ಪ್ರಶಸ್ತಿ ಪಡೆದುಕೊಂಡಿದೆ. ಪೆರುವಾಯಿ ತಂಡದ ರೋಹಿತ್ ಮಾರ್ಲ ಅವರು ಆಲ್ ರೌಂಡರ್, ಮಂಗಳೂರು ವಿಶ್ವವಿದ್ಯಾಲಯ ತಂಡದ ರತನ್ ಬೆಸ್ಟ್ ರೈಡರ್ ಹಾಗೂ ಪೆರುವಾಯಿ ತಂಡದ ಸಚಿನ್ ಉತ್ತಮ ಹಿಡಿತಗಾರ ಪ್ರಶಸ್ತಿ ಪಡೆದುಕೊಂಡಿದ್ದಾರೆ.ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಸಹ್ಯಾದ್ರಿ ಕಾಲೇಜಿನ ಶಿಶಿರ್ ಶೆಣೈ ವಿಟ್ಲ, ಆಳ್ವಾಸ್ ಕಾಲೇಜಿನ ಸತೀಶ್, ಆಳ್ವಾಸ್ ಕಾಲೇಜಿನ ರಕ್ಷಿತ್, ವಿಟ್ಲ ಜೇಸಿಸ್ ಶಾಲೆಯ ಹಸ್ತಾ ಜೈನ್, ಅಮೃತ ಕಾಲೇಜಿನ ಶ್ರೀಲಕ್ಷ್ಮೀ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ವೈದ್ಯಾಧಿಕಾರಿ ಡಾ. ಪ್ರಸಾದ್ ಭಂಡಾರಿ, ವಿಶ್ವಕರ್ಮ ಸಮಾಜದ ಅಧ್ಯಕ್ಷ ಸುಧಾಕರ ಆಚಾರ್ಯ, ರೈ ಎಸ್ಟೆಟ್ ಮಾಲಕ ಅಶೋಕ್ ಕುಮಾರ್ ರೈ, ಮೊದಲಾದವರು ಉಪಸ್ಥಿತರಿದ್ದರು.