Header Ads
Header Ads
Header Ads
Breaking News

’ಅಂತರ’ ಹೊಸತನದ ಮೊದಲ ಹೆಜ್ಜೆಯಾಗಲಿ: ಶೈಲೇಶ್ ಕುಮಾರ್

ಹೊಸತನದ ಹಾದಿಯಲಿ ಮೊದಲ ಹೆಜ್ಜೆಗಳನ್ನು ಇಡುತ್ತಿದ್ದೀರಿ. ಬಿವೋಕ್‌ನಂತಹ ಕೋರ್ಸಗಳ ಉದ್ದೇಶವೇ ಪ್ರಾಯೋಗಿಕ ಕಲಿಕೆಗಳನ್ನು ವಿದ್ಯಾರ್ಧಿಗಳಿಗೆ ಹೆಚ್ಚಾಗಿ ತಲುಪಿಸುವಂತದು. ಹೊಸ ಪ್ರಾಧ್ಯಪಕರು, ಹೊಸ ಕೋರ್ಸಗಳ ಜೊತೆಗೆ ನೀವು ಹೊರಜಗತ್ತಿಗೆ ಗೊತ್ತಾಗುವಂತೆ ಕೆಲಸಗಳನ್ನು ಮಾಡಬೇಕು ಜೊತೆಗೆ ಕಲಿಯಬೇಕು ಎಂದು ಉಜಿರೆ ಶ್ರಿ.ಧ.ಮ ಪದವಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಶೈಲೇಶ್ ಕುಮಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಅವರು ಇತ್ತೀಚೆಗೆ ಎಸ್.ಡಿ.ಎಂ ನ ಬಿವೋಕ್ ದಿಜಿಟ್‌ಲ್ ಮೀಡಿಯಾ ಹಾಗು ಫಿಲ್ಮ್‌ಮೇಕಿಂಗ್ ವಿಭಾಗದ ವಿದ್ಯಾರ್ಥಿಗಳು ನಿರ್ಮಿಸಿರುವ ’ಅಂತರ’ ಕಿರುಚಿತ್ರವನ್ನು ಬಿಡುಗಡೆಗೊಳಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಬಿವೋಕ್ ಪದವಿ ಕೋರ್ಸಗಳು ಕೌಶಲ್ಯ ಆಧಾರಿತ ಹೊಸ ಮಾದರಿಯ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುವ ಉದ್ದೇಶಹೊಂದಿದೆ. ಇದರಿಂದ ವಿದ್ಯಾರ್ಥಿಯೊಬ್ಬ ತನಗೆ ಬೇಕಾದ ವಿಷಯಗಳನ್ನು ಮಾತ್ರ ಆಯ್ಕೆಮಾಡಿ ತುಂಬಾ ಗಹನವಾದ ಅಧ್ಯಯನ ಜೊತೆಗೆ ಕೌಶಲ್ಯಗಳನ್ನು ಕಲಿಯಲು ಸಹಾಯವಾಗುತ್ತದೆ ಎಂದು ವಿದ್ಯಾರ್ಥಿಗಳ ನೂತನ ಚಟುವಟಿಕೆಗಳಿಗೆ ಶುಭಕೋರಿದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಬಿವೋಕ್ ದಿಜಿಟ್‌ಲ್ ಮೀಡಿಯಾ ಹಾಗು ಫಿಲ್ಮ್‌ಮೇಕಿಂಗ್ ವಿಭಾಗದ ಮುಖ್ಯಸ್ಥ ಭಾಸ್ಕರ ಹೆಗಡೆ ಮಾತನಾಡಿ, ದೊಡ್ಡ ಕೆಲಸಗಳಿಗೆ ಮೊದಲ ಹೆಜ್ಜೆಯನ್ನು ಇಟ್ಟಿದ್ದೇವೆ, ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಈ ಕಿರುಚಿತ್ರ ದೊಡ್ಡ ಮೈಲುಗಲ್ಲಾಗಲಿದೆ. ಕೆಲಸಮಾಡುತ್ತಾ ಕಲಿಯುವ ಹೊಸ ಅವಕಾಶ ಬಿವೋಕ್‌ನ ಎಲ್ಲಾ ವಿಭಾಗಗಳಿಗೆ ದೊರಕಿದೆ. ಹಾಗಾಗಿ ವಿದ್ಯಾರ್ಥಿಗಳು ಹಾಗೂ ಯುವಪ್ರಾಧ್ಯಪಕರು ಮುಕ್ತಮನಸ್ಸಿಂದ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಆ ಮೂಲಕ ನೂತನ ಶೈಕ್ಷಣಿಕ ನಿತಿಗೆ ನಮ್ಮನ್ನು ನಾವು ತೆರೆದುಕೊಳ್ಳಬೇಕು ಎಂದರು.

ನಂತರ ಮಾತನಾಡಿದ ’ಅಂತರ’ ಕಿರುಚಿತ್ರದ ವಿಧ್ಯಾರ್ಥಿ ನಿರ್ಧೇಶಕ ಶ್ರೀನಿಧಿ, ಬಿವೋಕ್ ನಮಗೆ ತುಂಬಾ ಅವಕಾಶಗಳನ್ನು ನೀಡಿದೆ, ಬೇರೆ ಯಾವುದೇ ವಿಚಾರಗಳ ಒತ್ತಡವಿಲ್ಲದೆ ನಾವೇನು ಬಯಸುತ್ತೇವೆ ಅದನ್ನೆ ಅತ್ಯಂತ ಖುಷಿಯಿಂದ ಮಾಡಲು ಅವಕಾಶವನ್ನು ನೀಡಿದೆ ಅದರ ಫಲವಾಗಿ ಈ ಕಿರುಚಿತ್ರ ನಿಮ್ಮ ಮುಂದಿದೆ. ತರಗತಿಯ ಪ್ರತಿಯೊಬ್ಬರು ಈ ಚಿತ್ರದಲ್ಲಿ ಬೇರೆ, ಬೇರೆ ವಿಭಾಗಳಲ್ಲಿ ಅವರ, ಅವರ ಕೌಶಲ್ಯಗಳಿಗೆ ತಕ್ಕಂತೆ ಕೆಲಸಮಾಡಿದ್ದೇವೆ, ಮುಂದೆಯೂ ಹೊಸ, ಹೊಸ ಯೋಜನೆಗಳ ಮೂಲಕ ಹೊಸ ಕೆಲಸಗಳನ್ನು ಮಾಡಲು ಉತ್ಸುಕರಾಗಿದ್ದೇವೆ. ಅದಕ್ಕೆ ಬಿವೋಕ್ ವಿಭಾಗ ನಮಗೆ ಪೂರಕವಾಗಲಿದೆ ಎನ್ನುವ ಭರವಸೆ ನಮಗಿದೆ ಎಂದರು.

ಕಾರ್ಯಕ್ರಮದಲ್ಲಿ ಬಿವೋಕ್ ದಿಜಿಟ್‌ಲ್ ಮೀಡಿಯಾ ಹಾಗು ಫಿಲ್ಮ್‌ಮೇಕಿಂಗ್ ವಿಭಾಗದ ಉಪನ್ಯಾಸಕರಾದ ಮಾಧವಹೊಳ್ಳ, ಅಶ್ವಿನಿ ಜೈನ್ ಹಾಗೂ ಇತರ ವಿಭಾಗಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿರಿದ್ದರು. ವಿದ್ಯಾರ್ಥಿ ಗೌತಮ್ ಕಾರ್ಯಕ್ರಮವನ್ನು ನಿರೂಪಿಸಿದರು, ಪೃಥ್ವಿ ವಂದಿಸಿದರು.

Related posts

Leave a Reply

Your email address will not be published. Required fields are marked *