Header Ads
Header Ads
Header Ads
Breaking News

ಅಂತಾರಾಷ್ಟ್ರೀಯ ಹೆಣ್ಣು ಶಿಶು ದಿನಾಚರಣೆ ಆಳ್ವಾಸ್‌ನಲ್ಲಿ ಹೆಣ್ಣು ಶಿಶು ಉಳಸಿ ಆಂದೋಲನ ಲಿಂಗ ಸೂಕ್ಷ್ಮತೆ ಕುರಿತು ವಿಚಾರಗೋಷ್ಟಿ

 
 ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ಸ್ನಾತಕೋತ್ತರ ವಿಭಾಗದ ಆಶ್ರಯದಲ್ಲಿ ‘ಹೆಣ್ಣು ಶಿಶು ಉಳಿಸಿ ಆಂದೋಲನ’ದ ಭಾಗವಾಗಿ ಲಿಂಗ ಸೂಕ್ಷ್ಮತೆ ಕುರಿತು ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ವಿಚಾರಗೋಷ್ಟಿ ನಡೆಯಿತು. ಇನ್ನೂ ಮಂಗಳೂರು ರೋಶ್ನಿ ನಿಲಯದ ನಿವೃತ್ತ ಪ್ರೊಫೆಸರ್ ರೀಟಾ ನೊರೋನ್ಹಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಭಾರತದ ಸಂಪತ್ತಿನ ೬೧ ಶೇಕಡದಷ್ಟು ಅಂಶ ಕೇವಲ ಒಂದು ಶೇಕಡ ಮಂದಿಯ ಕೈಯಲ್ಲಿದೆ. ಅಪೌಷ್ಟಿಕತೆಯ ಕಾರಣದಿಂದ ಶೇಕಡ ೪೦ರಷ್ಟು ಮಂದಿಯ ಬೆಳವಣಿಗೆ ಕುಂಠಿತವಾಗುತ್ತಿದೆ.

ದೈಹಿಕ , ಮಾನಸಿಕ ತೊಂದರೆಗಳಿಗೂ ಇದು ಕಾರಣವಾಗಿದೆ ಎಂದು ಅವ್ರು ಹೇಳಿದ್ರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಕುರಿಯನ್ , ಎಂಎಸ್‌ಡಬ್ಲ್ಯು ವಿಭಾಗ ಮುಖ್ಯಸ್ಥ ಡಾ| ರವಿಚಂದ್ರ ನಾಯರ್ ಮತ್ತಿತರು ಉಪಸ್ಥಿತರಿದ್ರು.

Related posts

Leave a Reply