Breaking News

ಅಂದಿನ ದಿನದ ಅನಿರ್ವಾಯತೆ ಇಂದಿನ ದಿನದ ಆಟ.. ನಂದಿಕೂರಿನಲ್ಲಿ “ಕೆಸರ್‍ಡ್ ಏರ್ ಬಿರ್ಸೆ” ಉದ್ಘಾಟಿಸಿ ಸೊರಕೆ ಮಾತು

 

ನಂದಿಕೂರಿನ ಖುಷಿ ಪ್ರೇಂಡ್ಸ್ ಆಶ್ರಯದಲ್ಲಿ ನಡೆದ “ಕೆಸರ್‍ಡ್ ಏರ್ ಬಿರ್ಸೆ” ಎಂಬ ಕೂಟವನ್ನು ದೀಪ ಬೆಳಗಿಸುವ ಮೂಲಕ ಕಾಪು ಶಾಸಕ ವಿನಯ ಕುಮಾರ್ ಸೊರಕೆ ಉದ್ಘಾಟಿಸಿದರು.

ಆ ಬಳಿಕ ಮಾತನಾಡಿದ ಅವರು, ಆಟಿಯಲ್ಲಿ ಒಂದು ದಿನ, ಕೆಸರಲ್ಲಿ ಒಂದು ದಿನ, ಇದು ಈಗತಾನೆ ಹುಟ್ಟಿಕೊಂಡ ಕೂಸುಗಳು. ಆದರೆ ಅಂದಿನ ದಿನಗಳಲ್ಲಿ ಜನರು ಬದುಕಿಗಾಗಿ ಅನಿವಾರ್ಯ ಸ್ಥಿತಿಯಲ್ಲಿ ಕೆಸರಿನೊಂದಿಗೆ ಬೆರೆತು ಕೃಷಿ ಚಟುವಟಿಕೆಗಳನ್ನು ನಡೆಸುತ್ತಾ ತಮ್ಮ ಸಂಸಾರ ಕಟ್ಟಿಕೊಂಡವರು ಕೃಷಿಕರು.

ಆದರೆ ಈ ರೀತಿಯಲ್ಲಾದರೂ ಇಂದಿನ ಪೀಳಿಗೆಗೆ ನಮ್ಮ ತುಳುನಾಡ ಸಂಸ್ಕೃತಿ ಸಂಸ್ಕಾರಗಳನ್ನು ತಿಳಿಸಿ ನಮ್ಮ ಹಿರಿಯರ ಕಷ್ಟ ಜೀವನದ ದರ್ಶನ ಮಾಡಿಸುವ ಈ ಕೆಲಸ ಶ್ಲಾಘನೀಯವೆಂದರು.

ಕೆಸರ ಗದ್ದೆಗೆ ಸಿಯಾಳ, ಹಾಲು ಎರೆದು ಧಾರ್ಮಿಕ ವಿಧಿವಿಧಾನಗಳನ್ನು ಪೊರೈಸಿದ ಬಳಿಕ ಕಂಬಳದ ಕೋಣಗಳನ್ನು ಇಳಿಸಿ ಮೂರು ಸುತ್ತು ಪ್ರದಕ್ಷಿಣೆ ತರಲಾಯಿತು. ಆ ಬಳಿಕ ಮಕ್ಕಳು, ಮಹಿಳೆಯರು ಪುರುಷರೆನ್ನದೆ ನೂರಾರು ಮಂದಿ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಖುಷಿ ಪ್ರೇಂಡ್ಸ್ ಆಯೋಜಿಸಿದ ಈ ಕ್ರೀಡಾಕೂಟದ ಖುಷಿಯನ್ನು ಅನುಭವಿಸಿದರು. ಅಂತಿಮವಾಗಿ ನಡೆದ ಹಗ್ಗಾಜಗ್ಗಾಟದಲ್ಲಿ ಬೆಳ್ಳಿಬೆಟ್ಟು ಪ್ರೇಂಡ್ಸ್ ಚಾಂಪಿಯನ್ ಆಗಿ ಮೂಡಿಬಂದರೆ, ನಂದಿಕೂರು ಯುವಕರ ತಂಡ ದ್ವೀತಿಯ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.

ವೇದಿಕೆಯಲ್ಲಿ ಜಿ.ಪಂ. ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾ.ಪಂ. ಸದಸ್ಯ ದಿನೇಶ್ ಕೋಟ್ಯಾನ್, ಪಲಿಮಾರು ಗ್ರಾ.ಪಂ. ಅಧ್ಯಕ್ಷ ಜಿತೇಂದ್ರ ಪುಟ್ರಾಡೋ, ಸಂಘಟಕ ಸುಧೀರ್ ದೇವಾಡಿಗ, ವೈ, ಸುಧೀರ್ ಕುಮಾರ್, ಕಾಪು ದಿವಾಕರ ಶೆಟ್ಟಿ, ವಿನಯ ಬಲ್ಲಾಳ್ ಮುಂತಾದವರಿದ್ದರು. ರಾಜೇಶ್ ಶೇರಿಗಾರ್ ಕಾರ್ಯಕ್ರಮ ನಿರ್ವಾಹಿಸಿದರು.

ವರದಿ-ಸುರೇಶ್ ಎರ್ಮಾಳ್

Related posts

Leave a Reply