Header Ads
Header Ads
Breaking News

ಅಂಧರ ಬಾಳಿಗೊಂದು ಬೆಳಕಿನ ಆಶಾಕಿರಣ. ಸಹ್ಯಾದ್ರಿ ಕಾಲೇಜು ಪ್ರಸ್ತುತ ಪಡಿಸುವ ವಿನೂತನ ಕಾರ್ಯಕ್ರಮ.

ಅಂಧರ ಬಾಳಿಗೊಂದು ಆತ್ಮವಿಶ್ವಾಸ ಎಂಬ ನಿಟ್ಟಿನಲ್ಲಿ ಸಹ್ಯಾದ್ರಿ ಇನ್ನೊವೇಶನ್ ಹಬ್‌ನ ಆರ್.ಡಿ.ಎಲ್ ಟೆಕ್ನಾಲಜೀಸ್ ತಂತ್ರಜ್ಞಾನ ಸಂಸ್ಥೆಯಿಂದ ನಿರ್ಮಿಸಲಾದ ’ವಿ.ಎಲ್ ಗ್ಲಾಸ್’ ವಿಶಿಷ್ಟ ಕನ್ನಡಕದ ಪ್ರದರ್ಶನ ಅಡ್ಯಾರಿನ ಸಹ್ಯಾದ್ರಿ ಕಾಲೇಜಿನಲ್ಲಿ ನಡೆಯಿತು.ಹೌದು ಅಂಧತ್ವ ಅಥವಾ ದೃಷ್ಠಿಹೀನತೆ ಇಂದು ವಿಶ್ವದಾದ್ಯಂತ ಸವಾಲಾಗಿ ಪರಿಣಮಿಸಿದೆ.ಈ ನಿಟ್ಟಿನಲ್ಲಿ ಸಹ್ಯಾದ್ರಿ ಇನ್ನೊವೇಶನ್ ಹಬ್‌ನಿಂದ ಪ್ರಯೋಜಿತ ತಂತ್ರಜ್ಞಾನ ಸಂಸ್ಥೆ ಆರ್.ಡಿ.ಎಲ್ ಟೆಕ್ನಾಲಜೀಸ್‌ರವರ ಎಲ್.ಐ.ಎಫ್.ಐ ಎಂಬ ತಂತ್ರಜ್ಞಾನದಿಂದ ಆವಿಷ್ಕರಿಸಲ್ಪಟ್ಟ ’ವಿ.ಎಲ್.ಗ್ಲಾಸ್’ ಅಂಧರ ಬಾಳಿಗೆ ಒಂದು ಅದ್ಭುತ ಕೊಡುಗೆ.

ಈ ವೇಳೆ ಆರ್.ಡಿ.ಎಲ್ ಟೆಕ್ನಾಲಜೀಸ್‌ನ ನಿರ್ದೇಶಕ ರಾಘವೇಂದ್ರ ಜಿ.ಶೆಟ್ಟಿ ಮಾತನಾಡಿ ’ವಿ.ಎಲ್ ಗ್ಲಾಸ್’ ವಿಶಿಷ್ಟ ಕನ್ನಡಕದ ಕುರಿತು ಸಂಪೂರ್ಣ ಮಾಹಿತಿ ನೀಡಿದರು.ನಂತರ ಮಾತನಾಡಿದ ಆರ್.ಡಿ.ಎಲ್ ಟೆಕ್ನಾಲಜೀಸ್‌ನ ಸದಸ್ಯ ಅನುಷ್ ಇದನ್ನು ಮಾರುಕಟ್ಟೆಗೆ ಬಿಡುವ ಬಗ್ಗೆ ಯೋಚನೆ ಮಾಡುತ್ತಿದ್ದೇವೆ ಮತ್ತು ಇದು ಮುಂದಿನ ಜನಾಂಗಕ್ಕೆ ಉಪಯೋಗವಾಗಲಿದೆ ಇನ್ನು ತಂತ್ರಜ್ಞಾನ ಬಳಕೆ ಮಾಡಲಿದೆ ಎಂದು ಹೇಳಿದರು.ಈ ಸಂದರ್ಭ ಆರ್.ಡಿ.ಎಲ್ ಟೆಕ್ನಾಲಜೀಸ್‌ನ ಸದಸ್ಯರು,ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply