Header Ads
Header Ads
Header Ads
Breaking News

ಅಂಬರ್ ಕ್ಯಾಟ್ರಸ್ ತುಳು ಸಿನಿಮಾ ಉಳ್ಳಾಲದಲ್ಲಿ ಚಿತ್ರದ ಆಡಿಯೋ ಬಿಡುಗಡೆ

ಕಲ್ಮಶವಿಲ್ಲದಂತೆ ಆಶ್ರಮದಲ್ಲಿ ಇರುವ ಹಿರಿಯರ ಮಧ್ಯೆ ಆಡಿಯೋ ಬಿಡುಗಡೆ ನಡೆಸಿರುವ ಕಾರ್ಯ ಅರ್ಥಪೂರ್ಣವಾಗಿದ್ದು, ಚಿತ್ರ ತಂಡ ಪ್ರತಿಭಾವಂತರಾಗಿದ್ದು, ಭವಿಷ್ಯದಲ್ಲಿ ಗೆಲುವು ಖಚಿತ ಎಂದು ಕಾರ್ಕಳದ ಮಾಜಿ ಶಾಸಕ ಹೆಚ್. ಗೊಪಾಲ ಭಂಡಾರಿ ಹೇಳಿದರು.

ಅವರು ಅಸೈಗೋಳಿಯ ಅಭಯಾಶ್ರಮದಲ್ಲಿ ಶುಕ್ರವಾರ ನಾಗೇಶ್ವರ ಸಿನಿ ಕಂಬೈನ್ಸ್ ಇವರ ಮೊದಲ ತುಳು ಚಲನಚಿತ್ರ ಅಂಬರ್ ಕ್ಯಾಟರರ್‍ಸ್ ಇದರ ಧ್ವನಿ ಸುರುಳಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಪಂಚತಾರಾ ಹೊಟೇಲುಗಳಲ್ಲಿ ನಡೆಯುವಂತಹ ಕಾರ್ಯಕ್ರಮವನ್ನು ವೃದ್ಧಾಶ್ರಮದಲ್ಲಿ ನಡೆಸಿರುವುದು ಇತರರಿಗೆ ಮಾದರಿ. ತುಳು ಚಲನಚಿತ್ರಗಳ ರಚನೆಯ ಮೂಲಕ ವಿಶ್ವದಾದ್ಯಂತ ಇರುವ ತುಳು ಅಭಿಮಾನಿಗಳ ಗಮನ ಸೆಳೆಯುವಂತಾಗಲಿ ಎಂದರು. ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಯು.ಟಿ.ಖಾದರ್ ಮಾತನಾಡಿ ಎಲ್ಲರೂ ನೋಡುವಂತಹ ಚಿತ್ರವಾಗಿ ಹೊರಹೊಮ್ಮಲಿ. ಚಿತ್ರದ ನಾಯಕನಟ ರಾಜ್ಯ ಮಾತ್ರವಲ್ಲ ದೇಶದಲ್ಲಿಯೇ ನಾಯಕನಟನಾಗಿ ಭವಿಷ್ಯ ರೂಪಿಸುವಂತಾಗಲಿ ಎಂದ ಅವರು ರಾಜಕೀಯ ನಟರಿಗಿಂತ ಚಿತ್ರ ನಟರು ಒಳ್ಳೆಯವರು , ಅವರಿಗೆ ಪ್ರೋತ್ಸಾಹ ಅಭಿಮಾನಿಗಳು ನೀಡಬೇಕಾಗಿದೆ ಎಂದರು.

ಬಿಜೆಪಿ ರಾಜ್ಯ ಕಾರ್‍ಯಕಾರಿಣಿ ಮಂಡಳಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ ಚಿತ್ರದ ನಿರ್ಮಾಪಕರು ಸಾಮಾಜಿಕ ಕಳಕಳಿಯ ವ್ಯಕ್ತಿತ್ವ ಹೊಂದಿದವರು. ಇಂತಹ ಮನೋಭಾವದವರು ಕೈ ಹಾಕುವ ಎಲ್ಲಾ ಕೆಲಸಗಳು ಯಶಸ್ವಿಯಾಗುತ್ತದೆ. ಚಿತ್ರವೂ ಯಶಸ್ವಿಯಾಗಿ ಪ್ರದರ್ಶನಗೊಳ್ಳಲಿ ಎಂದು ಹಾರೈಸಿದರು. ತುಳು ಚಲನಚಿತ್ರ ನಿರ್ಮಾಪಕ ಕಿಶೋರ್ ಡಿ ಶೆಟ್ಟಿ ಮಾತನಾಡಿ ನಿರ್ಮಾಪಕರಿಗೆ ಸಿನೆಮಾ ಎಂದರೆ ಗ್ಯಾಂಬಿಂಗ್ ಇದ್ದಂತೆ, ಹಾಕಿರುವ ಹಣ ಬರಲೂಬಹುದು, ಹೋಗಲುಬಹುದು. ಆದರೂ ಆತ್ಮವಿಶ್ವಾಸದ ಜತೆಗೆ ಚಿತ್ರ ನಿರ್ಮಿಸುವ ಮೂಲಕ ತುಳು ಚಲನಚಿತ್ರವನ್ನು ಬೆಳೆಸಲು ಮುಂದಾಗಿರುವ ತಂಡಕ್ಕೆ ಶುಭಹಾರೈಸಿದರು.

ತುಳು ಚಲನಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ ಪ್ರಕಾಶ್ ಪಾಂಡೇಶ್ವರ, ಪ್ರಕಾಶ್ ಪಾಂಡೇಶ್ವರ, ಚಿತ್ರ ನಿರ್ಮಾಪಕ ಕಡಂದಲೆ ಸುರೇಶ್ ಭಂಡಾರಿ, ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ , ಉದ್ಯಮಿ ಶಿವರಾಮ ಭಂಡಾರಿ, ಅಸೈಗೋಳಿ ಅಭಯಾಶ್ರಮದ ನಿರ್ದೇಶಕ ಶ್ರೀನಾಥ್ ಹೆಗ್ಡೆ , ಉದ್ಯಮಿ ಮಹಾವೀರ ಜೈನ್ , ಸೋಮಶೇಖರ ಭಂಡಾರಿ, ಮಂಗಳೂರು ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ಚಲನಚಿತ್ರ ನಿರ್ದೇಶಕ ಜಯಪ್ರಸಾದ್ ಬಜಾಲ್, ತುಳು ವಾಗ್ಮಿ ದಯಾನಂದ ಕತ್ತಲಸಾರ್, ತುಳು ಚಲನಚಿತ್ರ ನಿರ್ಮಾಪಕ ಸಚಿನ್ ಉಪ್ಪಿನಂಗಡಿ, ಚಿತ್ರದ ನಾಯಕ ನಟ ಸೌರಭ್ ಭಂಡಾರಿ, ಆಶಿಕ್ ಶೆಟ್ಟಿ, ಶ್ರೇಯಸ್ ಎಸ್.ಶೆಟ್ಟಿ, ಅಶ್ವಿನಿ, ಕರ್ನೂರು ಮೋಹನ ರೈ, ಹರೀಶ್ ಕಟಪಾಡಿ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply