Header Ads
Header Ads
Header Ads
Header Ads
Header Ads
Header Ads
Breaking News

ಅಂಬಲಪಾಡಿ ಬೈಪಾಸ್ ಬಳಿ ಅರೆಬರೆ ಕಾಮಗಾರಿ : ಅವ್ಯವಸ್ಥೆಯ ವಿರುದ್ಧ ಸ್ಥಳೀಯರ ಆಕ್ರೋಶ, ಸೂಕ್ತ ಕ್ರಮಕ್ಕೆ ಆಗ್ರಹ

ಅಂಬಲಪಾಡಿ ಬೈಪಾಸ್ ಬಳಿಕ ರಿಕ್ಷಾ ನಿಲ್ಧಾಣದ ಬಳಿ ಡ್ರೈನೇಜ್ ನೀರಿನ ಸಂಪರ್ಕಕ್ಕಾಗಿ ಬೃಹತ್ ಹೊಂಡ ತೋಡಿರುವ ನಗರಾಡಳಿತದ ವಿರುದ್ದ ಇದೀಗ ಅಲ್ಲಿನ ನಾಗರೀಕರು ಹಿಡಿಶಾಪಹಾಕುತ್ತಿದ್ದಾರೆ.

 ಒಂದು ವಾರದ ಹಿಂದೆ ದೊಡ್ಡ ಮಟ್ಟದಲ್ಲಿ ಹೊಂಡ ತೋಡಿ ಹೋಗಿದ್ದರೂ ಇದುವರೆಗೆ ಅದರ ಕಾರ್ಮಗಾರಿಯನ್ನ ಪೂರ್ಣಗೊಳಿಸಿಲ್ಲ. ಒಂದು ಕಡೆ ರಾಜ್ಯ ಹೆದ್ದಾರಿ ಇನ್ನೊಂದು ಕಡೆ ರಾಷ್ಟ್ರೀಯ ಹೆದ್ದಾರಿಯನ್ನ ಸಂದಿಸುವ ಪ್ರಮುಖ ರಸ್ತೆಯಲ್ಲೇ ಅರೆಬರೆ ಕಾಮಗಾರಿಯನ್ನ ಮಾಡಿದ್ದು ಪಾದಾಚಾರಿಗಳಿಗೆ ಮಾತ್ರವಲ್ಲದೇ ವಾಹನ ಸವಾರರಿಗೂ ಅಪಾಯವನ್ನು ಆಹ್ವಾನಿಸುತ್ತಿದೆ. ನಗರಸಭೆಯ ಅಧಿಕಾರಿಗಳ ಬೇಜವ್ಧಾರಿಯಿಂದಾಗಿ ಕಾಮಗಾರಿ ಅರ್ಧದಲ್ಲೇ ನಿಂತಿದ್ದು ಹಗಲು ಮಾತ್ರವಲ್ಲದೇ ರಾತ್ರಿ ವೇಳೆ ಸಂಚಾರ ಕೂಡಾ ಅಪಾಯವಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯ ರಿಕ್ಷಾ ಚಾಲಕರು ಆಗ್ರಹಿಸಿದ್ದಾರೆ.

Related posts

Leave a Reply

Your email address will not be published. Required fields are marked *