Header Ads
Header Ads
Header Ads
Breaking News

ಅಂಬಿಕಾ ಲಾಂಚದಲ್ಲಿ ಭೂಮಿಕ ಚಲನಚಿತ್ರ ಕನ್ನಡ ಮತ್ತು ತುಳುವಿನಲ್ಲಿ ಏಕಕಾಲದಲ್ಲಿ ಚಿತ್ರೀಕರಣ ಸುದ್ದಿಗೋಷ್ಠಿಯಲ್ಲಿ ನಂದಿಕೇಶ್ವರ ನಾಟಕ ಸಂಘ ಮಾಹಿತಿ

 

ಅಂಬಿಕಾ ಲಾಂಚನದಲ್ಲಿ ನರೇಂದ್ರ ಪಿ. ನಾಯಕ್ ನಿರ್ಮಾಣದ ಭೂಮಿಕ ಎಂಬ ಚಲನಚಿತ್ರವನ್ನು ತುಳು ಮತ್ತು ಕನ್ನಡ ಭಾಷೆಯಲ್ಲಿ ಏಕ ಕಾಲದಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ತಿಳಿಸಿದರು.
ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಲಿಶಾ ಭೂಮಿಕಾ ಚಲನಚಿತ್ರ ಚಿತ್ರದ ಚಿತ್ರೀಕರಣ ಈಗಾಗಲೇ ಶೇಕಡಾ ೭೫ರಷ್ಟು ಭಾಗ ಮುಗಿದಿರುತ್ತದೆ. ಈ ಕಥೆಯು ಹೆಣ್ಣಿ ಶೋಷಣೆ ಬಗ್ಗೆ ಸೂಕ್ಷ್ಮ ರೀತಿಯಲ್ಲಿ ಹೇಳಲು ಪ್ರಯತ್ನಿಸಲಾಗಿದ್ದು, ಎಲ್ಲರಿಗೂ ಇಷ್ಟವಾಗುವಂತೆ ಪ್ರಯತ್ನಿಸಲಾಗಿದೆ. ಇದರಲ್ಲಿ ಮಾಡಿರುವ ಎಲ್ಲಾ ಕಲಾವಿದರು ಆಯಾ ಪಾತ್ರದಲ್ಲಿ ನಟಿಸಿದ್ದಾರೆ. ಛಾಯಾಗ್ರಹಣ ನಾರಾಯಾನ್, ಸಂಗೀತ ಗುರುಕಿರಣ್, ಸಂಭಾಷಣೆ- ಅನುವಾದ ಅಕ್ಷತ್ ವಿಟ್ಲ, ವರ್ಣಾಲಂಕಾರ ಮಧು, ಕೇಶಲಂಕಾರ- ಸೆಂದಿಲ್, ನಿರ್ಮಾಣ ನಿರ್ವಹಣೆ ಅಶ್ವತ್ ನಾರಾಯಣ ಅವರದು ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ನರೇಂದ್ರ ಪಿ. ನಾಯಕ್, ಗಾಯತ್ರಿ, ಪಿ.ಕೆ.ಹೆಚ್. ದಾಸ್, ರಾಘವೇಂದ್ರ ರೈ ಉಪಸ್ಥಿತರಿದ್ದರು.

ವರದಿ: ಶರತ್ ಮಂಗಳೂರು

Related posts

Leave a Reply