Header Ads
Header Ads
Breaking News

ಅಂಬ್ಯುಲೆನ್ಸ್ ಮೂಲಕ ರೋಗಿ ಜಿಲ್ಲಾಧಿಕಾರಿ ಕಛೇರಿಗೆ..!! ಚಿಕಿತ್ಸೆಗೆ ನೆರವಾಗುವಂತೆ ವಿಶುಶೆಟ್ಟಿಯವರಿಂದ ಮನವಿ

ಸುಮಾರು 38ವರ್ಷದ ಕೂಲಿ ಕಾರ್ಮಿಕ ಮಹಿಳೆಯೊಬ್ಬಳು ಎರಡು ಕಾಲುಗಳಲ್ಲಿ ನಡೆಯಲಾಗದೆ ಸುಮಾರು ೬ ತಿಂಗಳುಗಳಿಂದ ಅಸಹಾಯಕ ಪರಿಸ್ಥಿತಿಯಲ್ಲಿ ಗುಡಿಸಲಿನ ಮೂಲೆ ಸೇರಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ಸಮಾಜ ಸೇವಕ ವಿಶುಶೆಟ್ಟಿಯವರು ಅಕೆಯನ್ನು ಉಡುಪಿ ಜಿಲಾಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೇರೆದ ಘಟನೆ ನಡೆದಿದೆ.ಮಹಿಳೆ ಬೆಳಗಾವಿಯ ರಾಯ್‌ಬಾಗ್ ಮೂಲದವರಾಗಿದ್ದು, ಸುಮಾರು 18 ವರ್ಷಗಳ ಹಿಂದೆ ಕೂಲಿ ಕಾರ್ಮಿಕರಾಗಿ ಉಡುಪಿಗೆ ಬಂದು ನೆಲೆಸಿದ್ದರು. ಇದೀಗ ಆಸ್ಪತ್ರೆಯ ವೈದ್ಯರು ಮಹಿಳೆಯನ್ನು ತಪಾಸಣೆ ಮಾಡಿದ್ದು ಆಕೆಯ ಎರಡು ಕಾಲಿನ ಕೀಲು ಸಂಪೂರ್ಣವಾಗಿ ಸವೆದಿದೆ. ಅದ್ದರಿಂದ ಕೃತಕ ಜಾಯಿಂಟ್ ಜೋಡನೆಯ ಇದಕ್ಕೆ ಎಕೈಕ ಪರಿಹಾರ ಎಂದು ವೈದ್ಯರು ತಿಳಿಸಿದ್ದಾರೆ. ಈ ಕೃತಕ ಜೋಡನೆಯ ಚಿಕಿತ್ಸೆ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಲಭ್ಯವಿಲ್ಲ. ಖಾಸಾಗಿ ಆಸ್ಪತ್ರೆಯಲ್ಲಿ ಎರಡು ಕೃತಕ ಜೋಡನೆಗೆ ಸುಮಾರು ರೂ. 3 ಲಕ್ಷ ವೆಚ್ಚವಾಗುತ್ತದೆ. ಇಸ್ಟೋಂದು ಹಣ ವ್ಯಯಿಸಲು ಮಹಿಳೆ ಅಸಹಾಯಕಳಾಗಿದ್ದಾರೆ. ಸರಕಾರದ ಕರ್ನಾಟಕ ಆರೋಗ್ಯ ಯೋಜನೆಯಡಿಯಲ್ಲಿ ಬಿ.ಪಿ.ಎಲ್.ಕಾರ್ಡ್ ಹೊಂದಿರುವವರಿಗೆ ಖಾಸಾಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಲಭ್ಯವಿದೆ. ಈ ರೋಗಿಯ ಬಳಿಯಲ್ಲಿ ರೇಸನ್ ಕಾರ್ಡ್ ಇಲ್ಲದ ಕಾರಣ ಇದೀಗ ಚಿಕಿತ್ಸೆಯಿಂದ ವಂಚಿತರಾಗಿದ್ದಾರೆ. ಇದೀಗ ಮಹಿಳೆಯು ಜಿಲಾಸ್ಪತ್ರೆಯಿಂದ ಬಿಡುಗಡೆಗೊಂಡು ತನ್ನ ಗುಡಿಸಲಿನಲ್ಲಿ ನಡೆಯಲಾಗದೆ ನೋವಿನಿಂದ ಜೀವಂತ ಸತ್ತ ನರಕಯಾತನೆ ಅನುಭವಿಸುತ್ತಿದ್ದಾರೆ.ಹೀಗಾಗಿ ಇಂದು ವಿಶು ಶೆಟ್ಟಿಯವರು ಅನಿವಾರ್ಯವಾಗಿ ಮಹಿಳೆಯನ್ನು ಅಂಬ್ಯುಲೆನ್ಸ ಮೂಲಕ ಜಿಲ್ಲಾ ಕಛೇರಿಗೆ ಕರೆದುಕೊಂಡು ಹೋಗಿರುತ್ತಾರೆ. ಅಲ್ಲಿ ಮಾನ್ಯ ಅಪರ ಜಿಲ್ಲಾಧಿಕಾರಿ ಶ್ರೀಮತಿ ಅನುರಾಧವರನ್ನು ಬೇಟಿಯಾಗಿ ಅವರು ಹಾಗೂ ರೋಗಿಯು ಚಿಕಿತ್ಸೆಗೆ ನೇರವಾಗುವಂತೆ ಮನವಿಯನ್ನು ನೀಡಿರುತ್ತಾರೆ.

Related posts

Leave a Reply