Header Ads
Breaking News

ಅಕ್ಟೋಬರ್ 13ರಂದು ದತ್ತಮಾಲಾ ಅಭಿಯಾನ

 ಇದೇ ತಿಂಗಳ 13ರಂದು ದತ್ತಮಾಲಾ ಅಭಿಯಾನ ನಡೆಯಲಿದ್ದು 5 ಸಾವಿರ ಜನ ಮಾಲಾಧಾರಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಶ್ರೀರಾಮ ಸೇನೆಯ ಸ್ಥಾಪಕ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು ದತ್ತಜಯಂತಿಯ ಹಿನ್ನಲೆಯಲ್ಲಿ ಶೋಭಯಾತ್ರೆ, ಧರ್ಮಸಭೆ ನಡೆಯುತ್ತದೆ.ದತ್ತಹೋಮ, ಗಣಹೋಮ ಕಾರ್ಯಕ್ರಮ ಇರುತ್ತೆ. ಜಮ್ಮುಕಾಶ್ಮೀರದ ರಾಹುಲ್ ಕೌಲ್ ಭಾಗವಹಿಸುತ್ತಾರೆ. ದತ್ತಮಾಲಾ ಕಾರ್ಯಕ್ರಮದ ಸಲುವಾಗಿಯೇ ಬರುತ್ತಿದ್ದಾರೆ. 370ನೇ ವಿಧಿ ರದ್ದು ಮಾಡಿದಕ್ಕೆ ಪ್ರಧಾನಿ ಮೋದಿ ಹಾಗೂ ಕೇಂದ್ರಕ್ಕೆ ಅಭಿನಂದನೆ ಸಲ್ಲಿಸಲಿದ್ದಾರೆ. 1990ರ ಗಲಬೆಯಲ್ಲಿ ಓಡಿಬಂದವರು ಕೌಲ್.ಅವರು ಸ್ವತಃ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿನೀಡಿದರು.ನೆರೆಪರಿಹಾರ ತಡ ಆಯಿತು, ಕಡಿಮೆ ಆಯಿತು ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರುಸಾಮಾನ್ಯ ಜನರಿಗೂ ಇದು ಗಮನಕ್ಕೆ ಬರುತ್ತಿದೆ. ಯಡಿಯೂರಪ್ಪನವರಿಗೆ ಆ ನೋವು ಇದ್ದೆ ಇದೇ. ಜನಪ್ರತಿನಿಧಿಗಳು ಪರಿಹಾರ ತರುವಲ್ಲಿ ಪೂರ್ಣ ಪ್ರಮಾಣ ಧುಮುಕಿದ್ದಾರೆ. ಕೇಂದ್ರದ ನಿಲುವು ಏನು ಎಂದು ಯಾರಿಗೂ ಗೊತ್ತಾಗ್ತ ಇಲ್ಲ. ಸರ್ಕಾರದ ಪ್ರಕಾರ 30ಸಾವಿರ ಕೋಟಿ ನಷ್ಟವಾಗಿದೆ. ಮನೆ, ಶಾಲೆ, ಹೊಲ, ಗದ್ದೆ ನಾಶವಾಗಿದೆ. 1200ಕೋಟಿ ಪರಿಹಾರ ಎಲ್ಲಿಗೂ ಸಾಕಾಗುವುದಿಲ್ಲ. ಪ್ರಾರಂಭದ ಪ್ರಕ್ರಿಯನ್ನಷ್ಟೇ ಮಾಡಿದ್ದಾರೆ. ಮುಂದೆ ಒಳ್ಳೆದಾಗುತ್ತೆ ಎಂಬ ವಿಶ್ವಾಸವಿದೆ ಎಂದು ಅಭಿಪ್ರಾಯಪಟ್ಟರು.

ಸೂಲಿಬೆಲೆಯನ್ನು ಸದಾನಂದ ಗೌಡ ದೇಶದ್ರೋಹಿ ಅಂದದ್ದು ತಪ್ಪು. ಸಂಸದರ ಗೆಲುವಿನ ಹಿಂದೆ ಸೂಲಿಬೆಲೆ ಪರಿಶ್ರಮ ಇದೆ. ಚಕ್ರವರ್ತಿಗೆ ನೆರೆ ಪರಿಹಾರ ವಿಚಾರದಲ್ಲಿ ನೋವಿದೆ. ದೇಶದ್ರೋಹಿ ಪಟ್ಟ ಕಟ್ಟಿದ್ದು ಮೂರ್ಖತನ.ಚಕ್ರವರ್ತಿ ಸೂಲಿಬೆಲೆಯನ್ನು ನಾನು ಬೆಂಬಲಿಸುತ್ತೇನೆ ಎಂದರು.

ಅಯೋಧ್ಯಾ ರಾಮ ಜನ್ಮಭೂಮಿ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ ಮುತಾಲಿಕ್ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತೆ. ಕೋರ್ಟ್ ತೀರ್ಪು ಬಗ್ಗೆ ನೂರಕ್ಕೆ ನೂರು ನಮಗೆ ವಿಶ್ವಾಸ ಇದೆ. 70 ವರ್ಷ ಕಾಂಗ್ರೆಸ್ ವ್ಯವಸ್ಥಿತವಾಗಿ ಕೇಸನ್ನು ಮುಚ್ಚಿ ಹಾಕಿತ್ತು.
ಮುಸ್ಲೀಮರನ್ನು ಎತ್ತಿಕಟ್ಟುವ ಷಡ್ಯಂತ್ರ ಮಾಡಿತ್ತು. ಈಗ ಸುಪ್ರೀಂ ಕೋರ್ಟ್ ಜಡ್ಜ್ ಸರಿಯಾದ ವಿಚಾರಣೆ ನಡೆಸುತ್ತಿದ್ದಾರೆ. ದೇವಸ್ಥಾನ ಅಲ್ಲಿ ಇತ್ತು, ಮತ್ತೆ ನಮಗೆ ಜಮೀನು ವಾಪಾಸ್ ಸಿಗುತ್ತೆ ಎಂಬ ನಂಬಿಕೆಯಿದೆ ಎಂದರು.

Related posts

Leave a Reply

Your email address will not be published. Required fields are marked *