Header Ads
Breaking News

ಅಕ್ರಮವಾಗಿ ಗಾಂಜಾ ದಾಸ್ತಾನಿಟ್ಟ ಪ್ರಕರಣ : ಕೈಕಂಬದ ಪರ್ಲಿಯಾ ಬಳಿಯ ಮನೆಯಲ್ಲಿ ದಾಸ್ತಾನು

ಬಂಟ್ವಾಳದ ಕೈಕಂಬದ ಪರ್ಲಿಯಾ ಬಳಿಯ ಮದ್ದ ಎಂಬಲ್ಲಿನ ಮನೆಯಲ್ಲಿ ಎರಡು ಪಾಲಿಥೀನ್ ಚೀಲಗಳಲ್ಲಿ ಅಕ್ರಮವಾಗಿ ಗಾಂಜಾ ದಾಸ್ತನಿಟ್ಟಿದ್ದ ಆರೋಪದಡಿ ಅಹಮದ್ ಸಾಬೀತ್ (30) ಎಂಬಾತನನ್ನು ಬಂಟ್ವಾಳ ನಗರ ಪೊಲೀಸರು ಬಂದಿಸಿದ್ದಾರೆ. ಈತನಿಂದ 40 ಕೆ.ಜಿ. ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಪರ್ಲಿಯಾದ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯವಿದ್ದ ಈತನ ಬಳಿ ಗಾಂಜಾ ದಾಸ್ತನಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ಸಿಐ ಸಿ.ಡಿ.ನಾಗರಾಜ್ ನೇತೃತ್ವದಲ್ಲಿ, ಬಂಟ್ವಾಳ ನಗರ ಎಸೈ ಅವಿನಾಶ್ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ವಶಕ್ಕೆ ಪಡೆದಿರಿರುವ ಗಾಂಜಾ ಮೌಲ್ಯವ 19,97,400 ರೂ ಆಗಿದ್ದು ದಾಳಿ ವೇಳೆ ಇನ್ನೋರ್ವ ಆರೋಪಿ ಮಹಮ್ಮದ್ ಅನ್ಸಾರ್ ಪರಾರಿಯಾಗಿದ್ದಾನೆ.

Related posts

Leave a Reply

Your email address will not be published. Required fields are marked *