Header Ads
Header Ads
Header Ads
Breaking News

ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದವರನ್ನು ಸ್ಥಳೀಯರು ತಡೆದು ಹಲ್ಲೆ ಕುಂದಾಪುರ ತಾಲೂಕಿನ ತೊಂಬಟ್ಟಿನಲ್ಲಿ ನಡೆದ ಘಟನೆ ಅಮಾಸೆಬೈಲು ಪೊಲೀಸರಿಂದ ಇಬ್ಬರ ಬಂಧನ

ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದವರನ್ನ ಸ್ಥಳೀಯರು ತಡೆದು ಹಲ್ಲೆ ನಡೆಸಿದ ಘಟನೆ ತಾಲೂಕಿನ ತೊಂಬಟ್ಟಿನಲ್ಲಿ ಗುರುವಾರ ನಡೆದಿದೆ. ಈ ಪ್ರಕರಣದಲ್ಲಿ ಗಾಯಾಳು ಮಂಜುನಾಥ್ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇನ್ನೋರ್ವ ಆರೋಪಿ ಸಮಿವುಲ್ಲಾ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅವರನ್ನ ಹೆಚ್ಚಿನ ಚಿಕಿತ್ಸೆಗೆಂದು ಕೆ‌ಎಂಸಿ ಮಣಿಪಾಲಕ್ಕೆ ದಾಖಲಿಸಲಾಗಿದೆ.

ತೊಂಬಟ್ಟಿನಲ್ಲಿ ಅಕ್ರಮವಾಗಿ 12 ಜಾನುವಾರುವನ್ನ ಜೀಪಿನಲ್ಲಿ ತುಂಬಿಸಿಕೊಂಡು ಬರುತ್ತಿದ್ದು, ಈ ಸಂದರ್ಭ ತೊಂಬಟ್ಟು ಸಮೀಪದ ಮಚ್ಚಟ್ಟಿನಲ್ಲಿ ಸ್ಥಳೀಯರು ವಾಹನವನ್ನ ತಡೆದಿದ್ದಾರೆ. ವಾಹನದಲ್ಲಿ ಸುಮಾರು ನಾಲ್ಕು ಮಂದಿ ಇದ್ದರು ಎನ್ನಲಾಗಿದ್ದು, ಜನರು ಏಕಾ‌ಏಕಿ ನುಗ್ಗಿದ ಹಿನ್ನೆಲೆ ವಾಹನದಲ್ಲಿದ್ದ ಮೂವರು ಪರಾರಿಯಾದರು. ಆದರೆ sಸಮಿವುಲ್ಲಾ ಎಂಬಾತ ಮತ್ತು ಈ ಜೀಪ್‌ನೊಂದಿಗೆ ಬೈಕನಲ್ಲಿ ಬರುತ್ತಿದ್ದ ಅಕ್ರಮ ಜಾನುವಾರು ಸಾಗಾಟ ಕೃತ್ಯದಲ್ಲಿ ಭಾಗವಹಿಸಿದ್ದ ಎಂದು ಆರೋಪಿಸಲಾದ ಮಂಜುನಾಥ ಶೆಟ್ಟಿ ಸಾರ್ವಜನಿಕರ ಕೈಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ನಂತರ ಇಬ್ಬರಿಗೂ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಸಂದರ್ಭ ಜಾನುವಾರು ಕಳ್ಳಸಾಗಣಿಕೆ ಮಾಡುತ್ತಿದ್ದವರನ್ನ ಸಾರ್ವಜನಿಕರು ಹಿಡಿದಿದ್ದಾರೆ ಎಂಬ ಸುದ್ದಿ ಸಿಕ್ಕ ಹಿನ್ನೆಲೆ ತಕ್ಷಣ ಘಟನಾ ಸ್ಥಳಕ್ಕೆ ಬಂದ ಅಮಾಸೆಬೈಲು ಪೊಲೀಸರು ಇಬ್ಬರನ್ನ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

Leave a Reply