Header Ads
Breaking News

ಅಕ್ರಮ ಕಸಾಯಿಖಾನೆಗೆ ಪೊಲೀಸರ ದಾಳಿ : ಮೂವರ ಬಂಧನ, ಓರ್ವ ಪರಾರಿ

ಎರ್ಮಾಳಿನ ಅಕ್ರಮ ಕಸಾಯಿಖಾನೆಗೆ ಪಡುಬಿದ್ರೆ ಪೊಲೀಸರು ದಾಳಿ ನಡೆಸಿದ ಘಟನೆ ನಡೆದಿದೆ. ಎರ್ಮಾಳು ಮಲ್ಲಕ್ಕ ಕರೆಯ ಕಮಲ್ ಸಾಹೇಬ್ ಮನೆಯಲ್ಲಿ ಅಕ್ರಮವಾಗಿ ದನಗಳನ್ನು ಕಡಿಯುತ್ತಿದ್ದರು. ಕಸಾಯಿಖಾನೆಗೆ ಪಡುಬಿದ್ರಿ ಎಸ್ಸೈ ದೀಲೀಪ್ ಜಿ.ಆರ್ ನೇತ್ರತ್ವದಲ್ಲಿ ದಾಳಿ ನಡೆಸಿ ದನದ ಮಾಂಸ ಸಹಿತ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಒಂದು ಕಾರು ಮತ್ತು ಒಂದು ಸ್ಕೂಟರ್ ವಶಕ್ಕೆ ಪಡೆದುಕೊಂಡಿದ್ದು ಒರ್ವ ಪರಾರಿಯಾಗಿದ್ದಾನೆ.

ಈ ಆರೋಪಿಗಳು ಯಾವುದೇ ಪರವಾನಗಿ ಇಲ್ಲದೆ ಮನೆಯಲ್ಲಿಯೇ ಅಕ್ರಮವಾಗಿ ಕಸಾಯಿಖಾನೆ ನಡೆಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಪಡುಬಿದ್ರಿ ಪೋಲೀಸರು ದಾಳಿ ನಡೆಸಿದ್ದು, ಮೂವರನ್ನು ಬಂಧಿಸಿದ್ದಾರೆ. ಸ್ಥಳದಿಂದ ಮೂರು ದನಗಳನ್ನು ಮತ್ತು ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಪೋಲೀಸರ ವಶದಲ್ಲಿರುವ ಆರೋಪಿಗಳು, ನಾಸೀರ್, ಜಮೀರ್ ಹಾಗೂ ಸದ್ದಾಮ್ ಎಂದು ಗುರುತಿಸಲಾಗಿದ್ದು, ಪರಾರಿಯಾದಾತ ಉಚ್ಚಿಲ ನಿವಾಸಿ ಹನೀಪ್ ಎಂದು ತಿಳಿದುಬಂದಿದೆ. ಈ ಬಗ್ಗೆ ಪಡುಬಿದ್ರಿ ಪಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply

Your email address will not be published. Required fields are marked *