Header Ads
Header Ads
Breaking News

ಅಕ್ರಮ ಜಾನುವಾರು ಸಾಗಾಟದ ಲಾರಿ ಪಲ್ಟಿ ಅಪಘಾತದಲ್ಲಿ ಒಂದು ಎಮ್ಮೆ ಸಾವು ಬಂಟ್ವಾಳದ ವಗ್ಗದಲ್ಲಿ ನಡೆದ ಘಟನೆ

ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಕಂಟೈನರ್ ಲಾರಿಯೊಂದು ಉರುಳಿಬಿದ್ದ ಘಟನೆ ಇಂದು ಬೆಳಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವಗ್ಗದ ಬಳಿಯ ಅಂಚಿಕಟ್ಟೆ ತಿರುವಿನಲ್ಲಿ ನಡೆದಿದೆ.

ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಬೆಳ್ತಂಗಡಿ ಕಡೆಯಿಂದ ಬರುತ್ತಿದ್ದ ಕಂಟೈನರ್ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಈ ಹಿನ್ನೆಲೆಯಲ್ಲಿ ಕಂಟೈನರ್ ಅನ್ನು ತೆರೆದು ನೋಡಿದಾಗ ಅದರೊಳಗೆ 9 ಎತ್ತು ಹಾಗೂ ಐದು ಎಮ್ಮೆಗಳು ಪತ್ತೆಯಾಗಿವೆ. ಈ ಪೈಕಿ ಒಂದು ಎತ್ತು ಸಾವನ್ನಪ್ಪಿತ್ತು. ಈ ನಡುವೆ ಕಂಟೈನರ್ ಅಪಘಾತವಾಗುತ್ತಿದ್ದಂತೆಯೇ ಚಾಲಕ ಸೇರಿದಂತೆ ಅದರಲ್ಲಿದ್ದವರು ಪರಾರಿಯಾಗಿದ್ದಾರೆ.
ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಸಂದೀಪ್ ಬಂಟ್ವಾಳ

Related posts

Leave a Reply