Header Ads
Header Ads
Breaking News

ಅಕ್ರಮ ದನ ಸಾಗಾಟಗಾರರಿಂದ ಹತ್ಯೆ. ಅರಣ್ಯ ಇಲಾಖೆಯ ಮೇಲೆ ಹಲ್ಲೆಗೆ ಯತ್ನ.ಇಲಾಖೆಯವರಿಂದ ಗಾಳಿಯಲ್ಲಿ ಗುಂಡು.

ಸುಳ್ಯದ ಆಲೆಟ್ಟಿ ಗ್ರಾಮದ ಕೂರ್ನಡ್ಕ ಎಂಬಲ್ಲಿ ಕೇರಳಕ್ಕೆ ಅಕ್ರಮವಾಗಿ ಗೋಸಾಗಟ ಮಾಡುತ್ತಿದ್ದವರು ಅರಣ್ಯ ಸಿಬ್ಬಂದಿಗಳ ಹಲ್ಲೆಗೆ ಮುಂದಾಗಿ ಅರಣ್ಯ ಸಿಬ್ಬಂದಿಗಳು ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ವರದಿಯಾಗಿದೆ.ಸುಳ್ಯದ ಅರಣ್ಯ ಸಿಬ್ಬಂದಿಗಳಿಗೆ ಜೀಪಿನಲ್ಲಿ ಅಕ್ರಮವಾಗಿ ಕೇರಳಕ್ಕೆ ಬೀಟಿ ಮರ ಸಾಗಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಹೋಗಿತ್ತು. ಅರಣ್ಯ ಸಿಬ್ಬಂದಿಗಳು ತಕ್ಷಣವೇ ಕೂರ್ನಡ್ಕದತ್ತ ತೆರಳಿ ಜೀಪನ್ನು ತಡೆದು ನಿಲ್ಲಿಸಲು ಪ್ರಯತ್ನಿಸಿದರು. ಆ ವಾಹನದಲ್ಲಿದ್ದವರು ಅರಣ್ಯ ಸಿಬ್ಬಂದಿಗಳ ಮೇಲೆ ಹಲ್ಲೆಗೆ ಮುಂದಾದಗ ಅರಣ್ಯ ಸಿಬ್ಬಂದಿಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದಾಗ ಅಕ್ರಮ ಸಾಗಾಟಗಾರರು ಅಲ್ಲಿಂದ ವಾಹನ ಬಿಟ್ಟು ಓಡಿ ಪರಾರಿಯಾದರು. ಆಗ ಜೀಪಿನಲ್ಲಿ ಎರಡು ಜಾನುವಾರು ಪತ್ತೆಯಾಯಿತು. ಜೀಪನಲ್ಲಿ ಇದ್ದ ಒಬ್ಬಾತ ಕೇರಳದ ಆಸ್ಪತ್ರೆಗೆ ದಾಖಲಾಗಿ ಅರಣ್ಯ ಸಿಬ್ಬಂದಿಗಳು ನನ್ನ ಮೇಲೆ ಗುಂಡು ಹಾರಾಟ ಮಾಡಿದ್ದಾರೆ ಎಂದು ದೂರಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.ಅರಣ್ಯ ಇಲಾಖೆಯವರು ಪ್ರಕರಣವನ್ನು ಸುಳ್ಯ ಪೊಲೀಸರಿಗೆ ಹಸ್ತಾಂತರಿಸಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

Leave a Reply