Header Ads
Header Ads
Breaking News

ಅಕ್ರಮ ಮರಳು ಗಣಿಗಾರಿಕೆಗೆ ದಾಳಿ ಕುಂದಾಪುರ ಎಸಿ ಭೂಬಾಲನ್ ನೇತೃತ್ವ ಬ್ರಹ್ಮಾವರದ ಹಂದಾಡಿಯಲ್ಲಿ ನಡೆದ ಅಕ್ರಮ 25 ದೋಣಿ, 9 ಟಿಪ್ಪರ್, 61ಮಂದಿ ವಶಕ್ಕೆ

ಕುಂದಾಪುರ ಉಪವಿಭಾಗಾಧಿಕಾರಿ ಭೂಬಾಲನ್ ನೇತೃತ್ವದಲ್ಲಿ ಬ್ರಹ್ಮಾವರ ಸಮೀಪದ ಹಂದಾಡಿಯಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ದಾಳಿ ನಡೆಯಿತು. ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಕುರಿತು ಖಚಿತ ಮಾಹಿತಿ ಪಡೆದ ಕುಂದಾಪುರ ಎಸಿ ಭೂಬಾಲನ್ ಬೆಳ್ಳಂಬೆಳಗ್ಗೆ ಸ್ಥಳಕ್ಕೆ ತಂಡದೊಂದಿಗೆ ದಾಳಿ ನಡೆಸಿ, 25 ದೋಣಿ, 9ಟಿಪ್ಪರ್, 61 ಮಂದಿ ಉತ್ತರ ಪ್ರದೇಶ ಮೂಲದ ಕಾರ್ಮಿಕರನ್ನ ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ. 

ಸುಮಾರು 25ಕ್ಕೂ ಅಧಿಕ ಮರಳು ತುಂಬಿದ ದೋಣಿಗಳಿದ್ದು ಅದರಲ್ಲಿ ಮರಳಿನ ಭಾರಕ್ಕೆ ಕೆಲವು ದೋಣಿಗಳು ಮುಳುಗಡೆಗೊಂಡಿದೆ. ಬ್ರಹ್ಮಾವರ ವೃತ್ತನಿರೀಕ್ಷಕ ಶ್ರೀಕಾಂತ್, ಬ್ರಹ್ಮಾವರ ಠಾಣೆ ಪಿಎಸ್‌ಐ ಮಧು, ಗಣಿ ಇಲಾಖೆಯ ಅಧಿಕಾರಿ ಮಹದೇವಪ್ಪ ಸೇರಿದಂತೆ ಹಲವು ಅಧಿಕಾರಿಗಳು ಕಾರ್‍ಯಾಚರಣೆಯಲ್ಲಿ ಭಾಗವಹಿಸಿದ್ದರು.

Related posts

Leave a Reply