Breaking News

ಅಕ್ರಮ ಮರಳು ದಕ್ಕೆಗೆ ದಾಳಿ, 8 ಲಾರಿ ಸಹಿತ ಸೊತ್ತು ವಶ

ಪುದು ಗ್ರಾಮದ ಸುಜೀರ್ ಎಂಬಲ್ಲಿ ನೇತ್ರಾವತಿ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಕ್ಕೆಗೆ ದಾಳಿ ನಡೆಸಿದ ಪೊಲೀಸರು 8 ಲಾರಿ ಸಹಿತ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಸುಜೀರ್ ನೇತ್ರಾವತಿ ನದಿ ಬದಿಯಲ್ಲಿ ಮೂರು ದಕ್ಕೆಯಲ್ಲಿ ಅಕ್ರಮ ಮರಳು ಗಾರಿಕೆ ನಡೆಯುತ್ತಿರುವ ಬಗ್ಗೆ ಬಂದ ಖಚಿತ ವರ್ತಮಾನದ ಮೇರೆಗೆ ದಾಳಿ ನಡೆಸಿದ ಪ್ರೊಬೆಷನರಿ ಐಪಿ‌ಎಸ್ ಅಧಿಕಾರಿ ನಾಗೇಶ್ ನೇತೃತ್ವದ ಪೊಲೀಸರ ತಂಡ ೮ ಲಾರಿ ಸಹಿತ ಮರಳು ಗಾರಿಕೆಗೆ ಉಪಯೋಗಿಸಿದ ಉಪಕರಣಗಳನ್ನು ವಶಕ್ಕೆ ಪಡೆದಿದೆ.
ಈ ಮೂರು ದಕ್ಕೆ ಐತಪ್ಪ ಆಳ್ವ, ಸಿದ್ದೀಕ್, ಲತೀಫ್ ಎಂಬವರಿಗೆ ಸೇರಿದ್ದು ಈ ಮೂವರು ಹಾಗೂ ೮ ಲಾರಿ ಚಾಲಕರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

Related posts

Leave a Reply