Header Ads
Header Ads
Breaking News

ಅಕ್ರಮ ಮರಳು ಸಾಗಾಟಗಾರರ ಗೂಂಡಾಗಿರಿ: ಹೋಂಗಾರ್ಡ್ ಸಹಿತ ಮೂವರು ಅಂದರ್

ಪಕ್ಷಿಕೆರೆ ಮೂಲದ ಟಿಪ್ಪರೊಂದರಲ್ಲಿ ಅಕ್ರಮ ಮರಳು ಸಾಗಾಟ ನಡೆಸುತ್ತಿದ್ದ ವೇಳೆ, ಹೆಜಮಾಡಿ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿದ್ದ ಚುನಾವಣಾ ತಪಾಸಣಾ ತಂಡಕ್ಕೆ ಸಿಕ್ಕಿ ಹಾಕಿಕೊಂಡಿದ್ದು, ಅಲ್ಲಿಗೆ ಬೈಕ್ ಹಾಗೂ ಕಾರುಗಳಲ್ಲಿ ಬಂದ ಇಪ್ಪತ್ತು ಮಂದಿಯ ತಂಡ ಗೂಡಾಗಿರಿ ನಡೆಸಿ ಕರ್ತವ್ಯಕ್ಕೆ ಅಡ್ಡಿ ಸಹಿತ, ಹಲವಾರು ಪ್ರಕರಣಗಳ ಆರೋಪಿಗಳ ಪೈಕಿ ಮೂವರು ಬಂಧನಕ್ಕೊಳಗಾದರೆ ಇತರ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.ಬಂಧನಕ್ಕೋಳಗಾದ ಆರೋಪಿಗಳು ಮೊಹಮ್ಮದ್ ಆರೀಫ್ ಪಕ್ಷಿಕೆರೆ, ಮಹಮ್ಮದ್ ಫಾರೂಕ್ ಊಳಿಯಾರಗೋಳಿ ಕಾಪು ಹಾಗೂ ಎರ್ಮಾಳು ಮೂಲದ ಕಾಪುವಿನಲ್ಲಿ ಕರ್ತವ್ಯದಲ್ಲಿದ್ದ ಹೋ ಗಾರ್ಡ್ ಜೀವನ್ ಎಂಬವರನ್ನು ಪಡುಬಿದ್ರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ

ಘಟನಾ ವಿವರ: ಮರಳು ಸಾಗಾಟ ನಡೆಸುತ್ತಿದ್ದ ಟಿಪ್ಪರನ್ನು ಹೆಜಮಾಡಿ ಚೆಕ್‌ಪೋಸ್ಟ್ ಬಳಿ ಚುನಾವಣಾ ತಪಾಸಣೆಯ ತಂಡವೊಂದು ನಿಲ್ಲಿಸಿ, ದಾಖಲೆಗಳನ್ನು ಪರಿಶೀಲಿಸಿದಾಗ ಸುಳ್ಳು ದಾಖಲೆಗಳನ್ನು ಟಿಪ್ಪರ್ ಚಾಲಕ ನೀಡಿದ್ದು, ಆತ ನೀಡಿದ ಮರಳು ಸಾಗಾಟದ ಟ್ರೀಪ್ ಶಿಟ್ ಬೇರೆ ಯಾವುದೋ ವಾಹನದ್ದಾಗಿದ್ದು ಅದರಲ್ಲಿ ಮಂಗಳೂರು ಬಂದರಿನಿಂದ ಬೆಳಗಾಂ ಗೆ ಎಂದಿತ್ತು, ಈ ಮರಳು ಸಾಗಾಟ ಅಕ್ರಮ ಎಂಬುದಾಗಿ ತಿಳಿದಾಕ್ಷಣ, ತಪಾಸಣಾ ತಂಡದಲ್ಲಿದ್ದ ಹೆಜಮಾಡಿ ವಿಎ ತಹಶಿಲ್ದಾರ್‌ಗೆ ಕರೆ ಮಾಡಿ ವಿಚಾರ ತಿಳಿಸಿದ್ದು, ಅವರಿಗಾಗಿ ಕಾಯುತ್ತಿದ್ದ ವೇಳೆ ಬೈಕ್ ಹಾಗೂ ಕಾರುಗಳಲ್ಲಿ ಸ್ಥಳಕ್ಕೆ ಬಂದ ಇಪ್ಪತ್ತಕ್ಕೂ ಅಧಿಕ ಜನರಿದ್ದ ತಂಡ ಟಿಪ್ಪರ್ ನಿಲ್ಲಿಸಿದ ತಂಡಕ್ಕೆ ಅವ್ಯಾಚ ಶಬ್ದಗಳಿಂದ ನಿಂದಿಸಿ ಗೂಂಡಾಗಿರಿ ಪ್ರದರ್ಶಿಸಿದ್ದು, ಆ ವೇಳೆ ಸ್ಥಳಕ್ಕೆ ಬಂದ ತಹಶಿಲ್ದಾರ್ ಟಿಪ್ಪರ್ ಸಹಿತ ಮರಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಶಕ್ಕೆ ಪಡೆದುಕೊಂಡ ವಾಹನ ಸಹಿತ ಮರಳನ್ನು ತಪಾಸಣಾ ತಂಡದಲ್ಲಿ ಕರ್ತವ್ಯದಲ್ಲಿದ್ದ ಹೋಂ ಗಾರ್ಡ್ ಜೀವನ್ ಸಹಿತವಾಗಿ ಟಿಪ್ಪರ್ ಚಾಲಕನೊಂದಿಗೆ ಪಡುಬಿದ್ರಿ ಠಾಣೆಗೆ ಸಾಗಿಸಲು ಸೂಚಿಸಿದ್ದಾರೆ. ಠಾಣಾ ಪಕ್ಕದಲ್ಲಿ ಟಿಪ್ಪರ್ ನಿಲ್ಲಿಸಿ ಅದರ ಕೀ ಸಹಿತ ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ಆ ಬಳಿಕ ಭೂ ಮತ್ತು ಗಣಿ ಇಲಾಖಾ ಅಧಿಕಾರಿಗಳಿಗೆ ತಹಶಿಲ್ದಾರ್ ದೂರವಾಣಿ ಮೂಲಕ ಕರೆ ಮಾಡಿ ವಾಹನ ಸಹಿತ ಮರಳನ್ನು ಸೀಜ್ ಮಾಡಲು ಸೂಚಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಗಣಿ ಅಧಿಕಾರಿ ಟಿಪ್ಪರ್ ಹಾಗೂ ಮರಳಿನ ಸೀಜ್ ಪ್ರಕ್ರಯೆ ನಡೆಸುತ್ತಿದ್ದ ವೇಳೆ ಟಿಪ್ಪರ್‌ನಲ್ಲಿದ್ದ ಮರಳು ಕಾಣೆಯಾಗಿತ್ತು. ತಕ್ಷಣ ಪೊಲೀಸರು ಠಾಣೆಗೆ ಟಿಪ್ಪರನ್ನು ಸಾಗಿಸಿದಾಗ ಅದರಲ್ಲಿದ್ದ ಹೋಂ ಗಾರ್ಡ್‌ಗೆ ಕರೆ ಮಾಡಿ ಕೇಳಿದಾಗ, ಮರಳನ್ನು ಹೆಜಮಾಡಿ ಮಸೀದಿ ಬಳಿ ಡಂಪ್ ಮಾಡಿರುವ ಬಗ್ಗೆ ಬಾಯಿಬಿಟ್ಟಿದ್ದಾನೆ.

ಇದೀಗ ತಿಳಿದೋ.. ತಿಳಿಯದೆಯೋ.. ಮರಳು ಡಂಪ್ ಮಾಡಿದ ಸುಳಿವು ನೀಡದ ಹೋಂ ಗಾರ್ಡ್ ಕೂಡಾ ವಂಚಿಸಿದ ಪ್ರಕರಣದ ಆರೋಪಿಯಾಗಿದ್ದಾನೆ. ಮರಳು ಕಳ್ಳತನ, ಪೊಲೀಸ್ ಕರ್ತವ್ಯಕ್ಕೆ ಅಡ್ಡಿ, ಅವ್ಯಾಚ ಶಬ್ದಗಳಿಂದ ನಿಂದನೆ, ಮೋಸ, ಸಾಕ್ಷೀ ನಾಶ ಹೀಗೆ ಹಲವಾರು ಪ್ರಕರಣಗಳ ಆರೋಪಿಗಳ ಪೈಕಿ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಇತರರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಪಡುಬಿದ್ರಿ ಠಾಣೆಯಲಲಿ ಪ್ರಕರಣ ದಾಖಲಾಗಿದೆ.

Related posts

Leave a Reply

Your email address will not be published. Required fields are marked *