Header Ads
Header Ads
Breaking News

ಅಕ್ರಮ ಮರಳು ಸಾಗಾಟದ ಲಾರಿಗಳು ಪೊಲೀಸ್ ವಶಕ್ಕೆ ವಿವಿಧೆಡೆಗಳಿಂದ ಮರಳು ಹೊತ್ತು ತರುತ್ತಿದ್ದ ಲಾರಿಗಳು ಲಾರಿ ತಡೆದು ವಿಚಾರಣೆಗೊಳಪಡಿಸಿದ ಬಂಟ್ವಾಳ ಪೊಲೀಸರು

 

ಬಂಟ್ವಾಳ: ಅಕ್ರಮ ಮರಳು ಸಾಗಾಟದ ಲಾರಿಗಳನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ವಶಕ್ಕೆ ಪಡದುಕೊಂಡಿದ್ದಾರೆ. ಬಂಟ್ವಾಳ ತಾಲೂಕಿನ ವಿವಿಧೆಡೆಗಳಿಂದ ಮರಳು ಹೊತ್ತು ತರುತ್ತಿದ್ದ ಹತ್ತಕ್ಕಿಂತಲೂ ಅಧಿಕ ಲಾರಿಗಳನ್ನು ತಡೆದು ವಿಚಾರಣೆ ನಡೆಸಿದಾಗ ಅಕ್ರಮ ಸಾಗಾಟ ಎನ್ನುವುದು ಬೆಳಕಿಗೆ ಬಂದಿದೆ.

ಬಂಟ್ವಾಳ ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧೆಡೆಗಳಲ್ಲಿ ನೇತ್ರಾವತಿ ನದಿ ಕಿನಾರೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು ಹೊರ ಜಿಲ್ಲೆಗಳಿಗೆ ಅವ್ಯಾಹತವಾಗಿ ಮರಳು ರಫ್ತಾಗುತ್ತಿದೆ. ಈ ಹಿಂದೆಯೂ ಹಲವು ಬಾರಿ ಅಕ್ರಮ ಮರಳುಗಾರಿಕಾ ಕೇಂದ್ರಗಳಿಗೆ ಗಣಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ದಾಳಿ ನಡೆಸಿದ್ದರೂ ರಾಜಕೀಯ ವ್ಯಕ್ತಿಗಳ ಕೃಪೆಯಿಂದಾಗಿ ಮತ್ತೆ ಮರಳುಗಾರಿಕೆ ನಡೆಯುತ್ತಿತ್ತು. ಇದೀಗ ಸಾರ್ವಜನಿಕ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ವಿವಿಧೆಡೆ ಕಾರ್ಯಚರಣೆ ನಡೆಸಿ ಅಕ್ರಮ ಮರಳುಲಾರಿಗಳನ್ನು ವಶಕ್ಕೆ ಪಡೆದಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ವಶಕ್ಕೆ ಪಡೆದುಕೊಂಡಿರುವ ಲಾರಿಗಳನ್ನು ಬಿ.ಸಿ.ರೋಡಿನ ತಾಲೂಕು ಕಚೇರಿ ಮುಂಭಾಗ ನಿಲ್ಲಿಸಲಾಗಿದೆ.
ವರದಿ: ಸಂದೀಪ್ ಬಂಟ್ವಾಳ

Related posts

Leave a Reply