Header Ads
Breaking News

ಅಕ್ರಮ ಮರಳು ಸಾಗಾಟ; ಎರಡು ಲಾರಿ ವಶಕ್ಕೆ, ನಾಲ್ವರು ಪರಾರಿ..!

ಪಡುಬಿದ್ರೆ: ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿದ್ದ ಎರಡು ಲಾರಿಗಳು ಪಡುಬಿದ್ರಿ ಪೊಲೀಸರು ವಶಕ್ಕೆ ಪಡೆದುಕೊಂಡರೆ, ಅದರಲ್ಲಿದ್ದ ಚಾಲಕ ನಿರ್ವಾಹಕರು ಪರಾರಿಯಾಗಿದ್ದಾರೆ.
ಖಚಿತ ಮಾಹಿತಿ ಪಡೆದ ಪಡುಬಿದ್ರಿ ಪೊಲೀಸರು ಎರ್ಮಾಳು ಬುಧಗಿ ಪೆಟ್ರೋಲ್ ಬಂಕ್ ಬಳಿ ತಡರಾತ್ರಿ ತಪಾಸಣೆ ನಡೆಸುತ್ತಿದ್ದ ವೇಳೆ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದರಾದರೂ, ಪೊಲೀಸರು ಬೆನ್ನಟ್ಟುತ್ತಿದಂತೆ ಲಾರಿಯನ್ನು ನಿಲ್ಲಿಸಿ ಕೀ ಸಹಿತ ಪರಾರಿಯಾಗಿದ್ದರು. ಆ ಬಳಿಕ ಮೆಕ್ಯಾನಿಕ್ ಸಹಕಾರಿಂದ ಲಾರಿಗಳನ್ನು ಠಾಣೆಗೆ ಸಾಗಿಸಲಾಯಿತು.

ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಎರಡು ಲಾರಿಗಳಲ್ಲಿ ನಲ್ವತ್ತೈದು ಟನ್ ಮರಳು ಇದ್ದು, ಯಾವುದೋ ಸರ್ಕಾರಿ ಸ್ಥಳದಿಂದ ಈ ಮರಳನ್ನು ಕದ್ದು ಸಾಗಿಸಿದ್ದಾರೆ ಎನ್ನಲಾಗಿದೆ. ಹೆಜಮಾಡಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯಲ್ಲಿ ಕೆಲ ಹಿಂದೂ ಮುಸ್ಲಿಂ ಯುವಕರು ಭಾಗಿಯಾಗಿದ್ದು, ಮರಳುಗಾರಿಕೆ ನಿಷೇಧದ ಬಳಿಕವೂ ಯಾವುದೇ ಅಡೆತಡೆ ಇಲ್ಲದೆ ತಡರಾತ್ರಿ ಮರಳುಗಾರಿಕೆ ನಡೆಸುತ್ತಿದ್ದರು. ಇದೀಗ ಕೆಲ ದಿನಗಳ ಹಿಂದೆ ತಹಶೀಲ್ದಾರ್ ಹೆಜಮಾಡಿಯ ಅಕ್ರಮ ಮರಳು ಅಡ್ಡೆಗೆ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರೂ, ಅಕ್ರಮಿಗಳು ಮತ್ತೆ ಬಾಲ ಬಿಚ್ಚಿದ್ದು ತಮ್ಮ ಚಾಲಿಯನ್ನು ಮುಂದುವರಿಸಿದ್ದರಿಂದ ಸ್ಥಳೀಯರು ಒಂದಾಗಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ಮುಂದಾಗಿದ್ದಾರೆ.

Related posts

Leave a Reply

Your email address will not be published. Required fields are marked *