Header Ads
Header Ads
Breaking News

ಅಕ್ರಮ-ಸಕ್ರಮ ಸಮಿತಿಯ ಅಧ್ಯಕ್ಷ ಶಾಸಕರ ಕರ್ತವ್ಯ ಲೋಪಕ್ಕೆ ನಾವು ಹೊಣೆಯೇ..? ಕಾಪು ಶಾಸಕ ವಿನಯ ಕುಮಾರ್ ಸೊರಕೆ ವಿರುದ್ಧ ಎಲ್ಲೂರು ಗ್ರಾ.ಪಂ. ಗುಡುಗು

ನಮ್ಮ ಎಲ್ಲೂರು ಗ್ರಾಮ ಪಂಚಾಯಿತಿಯ ದುರಾಢಳಿತ ಎಂಬುದಾಗಿ ಪ್ರತಿಭಟಸಿ ದೂರುವ ಶಾಸಕ ಸೊರಕೆ ತನ್ನ ಕರ್ತವ್ಯ ಅರಿತುಕೊಳ್ಳಲಿ, ತಾನೇ ಸ್ವತಃ ಅಕ್ರಮ-ಸಕ್ರಮ ಸಮಿತಿಯ ಅಧ್ಯಕ್ಷನಾಗಿದ್ದರೂ ನಮ್ಮ ಇಲ್ಲಿನ ನಿವೇಶನದ ಬಗ್ಗೆ ಯಾವುದೇ ಚಕಾರವೆತ್ತದೆ ಕರ್ತವ್ಯ ಲೋಪ ಎಸಗಿದ್ದು, ಅವರ ಕರ್ತವ್ಯ ನ್ಯೂನ್ಯತೆಗೆ ನಮ್ಮನ್ನು ಹೊಣೆಗಾರರನ್ನಾಗಿ ಮಾಡುವುದು ಅದೇಷ್ಟು ಸರಿ ಎಂಬುದಾಗಿ ಎಲ್ಲೂರು ಗ್ರಾ.ಪಂ. ಉಪಾಧ್ಯಕ್ಷ ಜಯಂತ್ ಕುಮಾರ್ ಗುಡುಗಿದ್ದಾರೆ.ಕಾಪು ಪ್ರೆಸ್ ಕ್ಲಬ್‌ನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮದು ದುರಾಢಳಿತ ಎನ್ನುವ ಶಾಸಕರು ತಮ್ಮದೇ ಪಕ್ಷ ಆಡಳಿತದಲ್ಲಿವ ಸಂದರ್ಭ, ಅಂದಿನ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ಯಶವಂತ ಶೆಟ್ಟಿ, ಸಂತೋಷ್ ಶೆಟ್ಟಿ ಹಾಗೂ ರಾಘವೇಂದ್ರ ಕುಲಾಲ್ ಈ ಮೂವರು ಅಕ್ರಮವಾಗಿ ಗ್ರಾಮ ಪಂಚಾಯಿತಿ ಕಟ್ಟಡದ ಹಿಂಭಾಗದ ಸರ್ಕಾರಿ ಜಾಗದ ಸುಮಾರು ಎರಡುವರೆ ಎಕ್ರೆ ಪ್ರದೇಶದ ಮಣ್ಣನ್ನು ಗ್ರಾಮ ಪಂಚಾಯಿತಿ ಗಮನಕ್ಕೆ ತಾರದೆ ಏಕಾಏಕಿ ಮಾರಾಟ ನಡೆಸಿ ಸುಮಾರು ನಾಲ್ಕು ಲಕ್ಷ ರೂಪಾಯಿ ನುಂಗಿ ನೀರು ಕುಡಿದ್ದಿದ್ದಾರೆ. ಅದರಲ್ಲಿ ಐವತ್ತು ಸಾವಿರ ರೂಪಾಯಿ ಹಣವನ್ನು ಅಂದಿನ ಪಿಡಿಒ ಉಮೇಶ್ ದೇವಾಡಿಗ ಎಂಬವರಿಗೆ ಲಂಚ ರೂಪದಲ್ಲಿ ನೀಡಿ ಬಾಯಿ ಮುಚ್ಚಿಸಿದ್ದು ಇದು ಕಾಂಗ್ರೆಸ್ ಪಕ್ಷದ ಇಂದಿನ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಮಾಡಿದ ದುರಾಢಳಿತವಲ್ಲವೇ..? ಪಟ್ಟಾ ಸ್ಥಳದ ಮಾಲಿಕರ ಗಮನಕ್ಕೆ ತಾರದೆ ರಸ್ತೆಗೆ ಗುದ್ದಲಿ ಪೂಜೆ ನಡೆಸಲು ಮುಂದಾದ ಶಾಸಕರನ್ನು ತಡೆದ ಸ್ಥಳದ ಮಾಲಕಿ ಮಹಿಳೆಯನ್ನು ಅವ್ಯಾಚ ಶಬ್ದಗಳಿಂದ ನಿಂದಿಸಿದ್ದು ದುರಾಢಳಿತವಲ್ಲವೆ..? ಎಲ್ಲೂರು ಗ್ರಾಮ ಜನತೆಯ ಬಗ್ಗೆ ಕಪಟ ಪ್ರೀತಿ ಪ್ರದರ್ಶಿಸುತ್ತಿರುವ ಶಾಸಕರು ಗ್ರಾಮದ ಅಭಿವೃದ್ಧಿಗೆ ನೀಡಿದ ಕೊಡುಗೆ ಕೇವಲ 5 ಲಕ್ಷ ಎಂಬುದು ಮಾಹಿತಿ ಹಕ್ಕಿನಲ್ಲಿ ಬಹಿರಂಗಗೊಂಡಿದ್ದು ಇದು ದುರಾಢಳಿತವಲ್ಲವೇ..? ವಿವಾದಿತ ಯುಪಿಸಿಎಲ್ ಕಂಪನಿಯ ಸಿಎಸ್‌ಆರ್ ಜನಕ ನಾನೆಂಬುದಾಗಿ ಡಂಗುರ ಸಾರುತ್ತಿರುವ ಶಾಸಕರು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು
ಈ ಸಂದರ್ಭ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಎಲ್ಲೂರು ಗ್ರಾ.ಪಂ. ಅಧ್ಯಕ್ಷೆ ವಸಂತಿ ಮಧ್ವರಾಜ್, ಸದಸ್ಯ ಸತೀಶ್ ಶೆಟ್ಟಿ ಗುಡ್ಡೆಚ್ಚಿ ಮುಂತಾದವರಿದ್ದರು.
ವರದಿ: ಸುರೇಶ್ ಎರ್ಮಾಳ್ ಪಡುಬಿದ್ರಿ

Related posts

Leave a Reply