Header Ads
Header Ads
Header Ads
Breaking News

ಅಖಿಲ ಭಾರತ ವಿವಿ ಕ್ರಾಸ್ ಕಂಟ್ರಿ ಚಾಂಪಿಯನ್‌ಶಿಫ್ ಆಳ್ವಾಸ್ ಕ್ರೀಡಾಪಟುಗಳ ಮಹತ್ತರ ಸಾಧನೆ

ಮೂಡುಬಿದಿರೆ: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಆಶ್ರಯದಲ್ಲಿ ಸೋಮವಾರ ಮುಕ್ತಾಯಗೊಂಡ 2017-18ನೇ ಸಾಲಿನ ಅಖಿಲ ಭಾರತ ಅಂತರ್ ವಿವಿ ಕ್ರಾಸ್‌ಕಂಟ್ರಿ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ವಿವಿ ಚಾಂಪಿಯನ್‌ಗಳಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿರುವುದರ ಹಿಂದೆ ಮೂಡುಬಿದಿರೆಯ ಆಳ್ವಾಸ್ ಕ್ರೀಡಾಪಟುಗಳ ಪರಿಶ್ರಮವು ಪೂರಕವಾಗಿದ್ದು, ಈ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ವಿವಿಯನ್ನು ಪ್ರತಿನಿಧಿಸಿದ ಪುರುಷರ ವಿಭಾಗದ ಆರು ಕ್ರೀಡಾಪಟುಗಳು ಹಾಗೂ ಮಹಿಳೆಯರ ವಿಭಾಗದ ಆರು ಕ್ರೀಡಾಪಟುಗಳ ಪೈಕಿ ೫ ಮಂದಿ ಆಳ್ವಾಸ್ ಕ್ರೀಡಾಪಟುಗಳಾಗಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.

ಅವರು ಮಂಗಳವಾರದಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಪುರುಷರ ವಿಭಾಗದಲ್ಲಿ ದಾಖಲೆಯ 23 ಅಂಕಗಳೊಂದಿಗೆ ತಂಡ ಪ್ರಶಸ್ತಿ, ಮಹಿಳೆಯರ ವಿಭಾಗದಲ್ಲಿ ೫೪ಅಂಕಗಳೊಂದಿಗೆ ತೃತೀಯ ತಂಡ ಪ್ರಶಸ್ತಿ ಗಳಿಸುವುದರೊಂದಿಗೆ ಒಟ್ಟು ೭೯ಅಂಕಗಳೊಂದಿಗೆ ಸಮಗ್ರ ಚಾಂಪಿಯನ್ ಗಳಿಸಿದೆ. ಈ ಎಲ್ಲಾ ಅಂಕಗಳನ್ನು ಆಳ್ವಾಸ್ ಕ್ರೀಡಾಪಟುಗಳೇ ಗಳಿಸಿದ್ದಾರೆ ಎಂಬುದು ಗಮನಾರ್ಹ. ಪುರುಷರ ವಿಭಾಗದಲ್ಲಿ ರಂಜಿತ್ ಪಟೇಲ್, ಕಾಂತಿಲಾಲ್, ರಾಬಿನ್, ಸತೀಶ್ ಯಾದವ್, ಹರಿಭಕ್ಷ್ ಹಾಗೂ ಅನಿಲ್.

ಮಹಿಳೆಯರ ವಿಭಾಗದಲ್ಲಿ ಆರತಿ, ರಿಶೂ, ಜ್ಯೋತಿ, ಚೈತ್ರ ದೇವಾಡಿಗ ಹಾಗೂ ಶೈಲಿ ಸತೀಶ್ ಆಳ್ವಾಸ್ ಕ್ರೀಡಾಪಟುಗಳಾಗಿದ್ದಾರೆ. ಈ ಕೂಟದಲ್ಲಿ ಅತ್ಯುತ್ತಮ ಸಾಧನೆಯನ್ನು ತೋರಿದ ಕ್ರೀಡಾಪಟುಗಳ ಪೈಕಿ ರಂಜಿತ್ ಪಟೇಲ್ ಹಾಗೂ ಕಾಂತಿಲಾಲ್ ಈಗಾಗಲೇ ಅಂತರಾಷ್ಟ್ರೀಯ ವಿಶ್ವವಿದ್ಯಾನಿಲಯಗಳ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿದ್ದಾರೆ. ಅಖಿಲ ಭಾರತ ವಿ.ವಿ. ಕ್ರಾಸ್‌ಕಂಟ್ರಿಯಲ್ಲಿ ಮಂಗಳೂರು ವಿ.ವಿ.ಯ ಹ್ಯಾಟ್ರಿಕ್ ಸಾಧನೆಯಲ್ಲಿ ತಮ್ಮ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ನಿರ್ವಹಣೆ ತೋರಿರುವುದಕ್ಕೆ ಕ್ರೀಡಾಪಟುಗಳನ್ನು ಆಳ್ವರು ಅಭಿನಂದಿಸಿದ್ದಾರೆ.

Related posts

Leave a Reply