Header Ads
Breaking News

ಅಖಿಲ ಭಾರತ ಹಿಂದೂ ಮಹಾಸಭಾದಿಂದ ಸುದ್ದಿಗೋಷ್ಠಿ : ಮಂಗಳೂರಿನ ಲೇಡಿಹಿಲ್ ಸರ್ಕಲ್‍ಗೆ ಮರುನಾಮಕರಣಕ್ಕೆ ಆಗ್ರಹ

ಮಂಗಳೂರಿನ ಲೇಡಿಹಿಲ್ ಸರ್ಕಲ್ ಹೆಸರನ್ನು ಬ್ರಹ್ಮಶ್ರೀ ನಾರಾಯಣ ಗುರುಗಳ ವೃತ್ತ ಎಂದು ಮರುನಾಮಕರಣ ಮಾಡುವ ಬಗ್ಗೆ ಹಾಗೂ ರಾಷ್ಟ್ರ ವಿರೋಧಿ ಬರಹಗಳನ್ನು ಬರೆಯವ ದೇಶ ದ್ರೋಹಿಗಳನ್ನು ಕೂಡಲೇ ಬಂಧಿಸುವಂತೆ ಅಖಿಲ ಭಾರತ ಹಿಂದೂ ಮಹಾಸಭಾದ ಸಂಸದೀಯ ಕಾರ್ಯದರ್ಶಿ ದಮೇಂದ್ರ ಆಗ್ರಹಿಸಿದರು.ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಮಂಗಳೂರಿನ ಪ್ರತಿಷ್ಠಿತ ವೃತ್ತ ಬ್ರಿಟೀಷರ ಹೆಸರಿನ ಲೇಡಿಹಿಲ್ ಸರ್ಕಲ್ ಅನ್ನು ಬದಲಾಯಿಸಿ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನು ಮರುನಾಮಕರಣ ಮಾಡುವಂತೆ ಸಾಕಷ್ಟು ಬಾರಿ ಒತ್ತಾಯಿಸಲಾಗಿತ್ತು. ಇದಕ್ಕೆ ಪಾಲಿಕೆಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ವಿರೋಧವನ್ನು ವ್ಯಕ್ತಪಡಿಸಿದ್ದರು. ಬಿಜೆಪಿ ಸದಸ್ಯರು ಕೂಡ ಮೌನಕ್ಕೆ ಶರಣಾಗಿದ್ದಾರೆ. ವೃತ್ತದ ಹೆಸರನ್ನು ಮರುನಾಮಕರಣಗೊಳಿಸಿ ಗುರುಗಳ ಹೆಸರನ್ನು ಘೋಷಿಸಬೇಕೆಂದು ಆಗ್ರಹಿಸಿದರು.ಮಂಗಳೂರಿನಲ್ಲಿ ತಾಲಿಬಾನ್ ಜಿಂದಾಬಾದ್, ಲಷ್ಕರ್ ಜಿಂದಾಬಾದ್ ಗೋಡೆ ಬರಹಗಳು ಪ್ರತ್ಯಕ್ಷಗೊಂಡಿದ್ದು, ಆಡಳಿತದಲ್ಲಿರುವ ಬಿಜೆಪಿಯ ವೈಫಲ್ಯತೆಯನ್ನು ಎತ್ತಿ ತೋರಿಸುತ್ತಿದೆ. ಹಿಂದು ನಾಯಕರ ಹೇಳಿಕೆಗಳ ವಿರುದ್ಧ ಸ್ವಮೊಟೋ ಕೇಸ್ ದಾಖಲಿಸುವ ಪೊಲೀಸ್ ಇಲಾಖೆ ಈ ವಿಚಾರದಲ್ಲಿ ಯಾವ ಕ್ರಮಕೈಗೊಂಡಿದೆ ಎಂದು ಸ್ಪಷ್ಟಪಡಿಸಬೇಕು. ಸರಕಾರ ಕೂಡಲೇ ಈ ಕೃತ್ಯಕ್ಕೆ ಕಾರಣವಾದವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾಧ ಮುಖಂಡರು ಹಾಜರಿದ್ದರು.

Related posts

Leave a Reply

Your email address will not be published. Required fields are marked *