Header Ads
Header Ads
Header Ads
Breaking News

ಅಖಿ ಭಾರತ ಮಹಿಳಾ ಬಾಲ್‌ಬ್ಯಾಡ್ಮಿಂಟನ್ ಆಳ್ವಾಸ್ ತಂಡಕ್ಕೆ ಚಾಂಪಿಯನ್ ಪಟ್ಟ

ತಮಿಳುನಾಡಿನ ತಿರುಚನಾಪಳ್ಳಿಯಲ್ಲಿ ನಡೆದ ಅಖಿ ಭಾರತ ಮಹಿಳಾ ಬಾಲ್‌ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಮೂಡುಬಿದಿರೆಯ ಆಳ್ವಾಸ್ ತಂಡ ಪ್ರಶಸ್ತಿ ಗೆದ್ದುಕೊಂಡಿದೆ. ಫೈನಲ್ ಪಂದ್ಯದಲ್ಲಿ ಆಳ್ವಾಸ್ ತಂಡ ಎಸ್‌ಆರ್‌ಎಂ ವಿಶ್ವವಿದ್ಯಾಲಯವನ್ನು 35 -21, 35 -25 ನೇರ ಸೆಟ್‌ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು. ತಿರುಚನಾಪಳ್ಳಿಯ ಸಿಂಗಂ ಬಾಲ್‌ಬ್ಯಾಡ್ಮಿಂಟನ್ ಸಂಸ್ಥೆ ಹಾಗೂ ತಮಿಳುನಾಡು ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಜಂಟಿಯಾಗಿ ಈ ಚಾಂಪಿಯನ್ ಷಿಪ್ ಅಯೋಜಿಸಿತ್ತು.

ಒಟ್ಟು 20 ತಂಡಗಳು ಈ ಚಾಂಪಿಯನ್ ಷಿಪ್‌ನಲ್ಲಿ ಪಾಲ್ಗೊಂಡಿದ್ದವು. ಸೂಪರ್‌ಲೀಗ್ ಹಂತದಲ್ಲಿ ಆಳ್ವಾಸ್ ತಂಡ ಕೇರಳದ ಪಾಲಕ್ಕಾಡ್ ಹಾಗೂ ತಮಿಳುನಾಡಿನ ಪಾವೈ ತಂಡವನ್ನು ನೇರ ಸೆಟ್‌ಗಳಿಂದ ಮಣಿಸಿ ಪ್ರಶಸ್ತಿ ಸುತ್ತು ತಲುಪಿತ್ತು. ಆಳ್ವಾಸ್‌ನ ಪಲ್ಲವಿ ಎಸ್.ಕೆ ಉತ್ತಮ ಆಟಗಾರ್ತಿ ಗೌರವಕ್ಕೆ ಪಾತ್ರರಾದರು.

Related posts

Leave a Reply