Header Ads
Header Ads
Breaking News

ಅಗೋಳಿ ಮಂಜಣ ಜಾನಪದ ಕೇಂದ್ರದ ವತಿಯಿಂದ ಸೋಣದ ಸೋಗಲೆ ಕಾರ್ಯಕ್ರಮ

ಒಂದು ಕಡೆ ಪುಸ್ತಕ ಹಿಡಿದು ಕ್ಲಾಸ್ ರೂಮಲ್ಲಿ ಪಾಠ ಕೇಳಬೇಕಾಗಿದ್ದ ಹುಡುಗ ಹುಡುಗಿಯರು, ಮತ್ತೊಂದು ಕಡೆ ನಮ್ಮ ತುಳುವರ ಮೂಲ ಕಸುಬು ಬಗ್ಗೆ ಮಕ್ಕಳಿಗೆ ತಿಳಿ ಹೇಳುತ್ತಿರುವ ಹಿರಿಯರು. ಈ ದೃಶ್ಯ ಕಂಡು ಬಂದಿದ್ದು, ಪಾವಂಜೆ ಅಗೋಳಿ ಮಂಜಣ ಜಾನಪದ ಕೇಂದ್ರದ ವತಿಯಿಂದ ನಡೆದ ಸೋಣದ ಸೋಗಲೆ ಕಾರ್ಯಕ್ರಮದಲ್ಲಿ..

ಹೌದು ಪಾವಂಜೆ ಅಗೋಳಿ ಮಂಜಣ ಜಾನಪದ ಕೇಂದ್ರದ ವತಿಯಿಂದ ನಡೆದ ಸೋಣದ ಸೋಗಲೆ ಕಾರ್ಯಕ್ರಮದ ಮೂಲಕ ಮಕ್ಕಳಿಗೆ ಕೃಷಿ ಪಾಠವನ್ನು ಹೇಳಿಕೊಡುವ ಕೆಲಸ ನಡೆಸಲಾಯಿತು. ಅಗೋಳಿ ಮಂಜಣ ಜಾನಪದ ಕೇಂದ್ರ (ರಿ) ಪಾವಂಜೆ ರಾಷ್ಟೀಯ ಸೇವಾ ಯೋಜನೆ ಗೊವಿಂದದಾಸ ಕಾಲೇಜು ಸುರತ್ಕಲ್ ಇವರ ಸಂಯುಕ್ತ ಅಶ್ರಯದಲ್ಲಿ ಪಾವಂಜೆ ಜ್ಜಾನ ಶಕ್ತಿ ಸುಬ್ರಮಣ್ಯ ದೇವಸ್ಥಾನದ ಸಹಕಾರದಲ್ಲಿ ನಿನಾದ ರಂಗ ಮಂದಿರ ರಾಮಪ್ಪ ಪೂಜಾರಿ ಚಾವಡಿ ಪಾವಂಜೆ ಇಲ್ಲಿ ಸೋಣದ ಸೋಗಲೆ ಅಜ್ಜಿಕತೆ ಕಾರ್ಯಕ್ರಮ ನಡೆಯಿತು. ಯುಗಪುರುಷದ ಕೆ ಭುವನಾಭಿರಾಮ ಉಡುಪ ಕಾರ್ಯಕ್ರಮವನ್ನು ಉದ್ಘಟಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಕೃಷಿ ಸಾಧಕ ಸುಧಾಕರ ಸುವರ್ಣ ಕೊಳುವೈಲು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಕ್ಕಳಿಗೆ ಬತ್ತದ ನೇಜಿ ತಯಾರಿಸುವ ಬಗ್ಗೆ ಮಾಹಿತಿ ನೀಡಿದರು. ಹಿರಿಯ ಕೃಷಿ ಸಾಧಕಿ ದುಗ್ಗಮ್ಮ ಕರ್ಕೇರ ಅಜ್ಜಿಕತೆ ಹೇಳಿ ವಿದ್ಯಾರ್ಥಿಗಳ ಮನ ರಂಜಿಸಿದರು.

ನಂತರ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಮೂಲ್ಕಿ ಸುವರ್ಣ ಆರ್ಟ್ಸ್ ನ ಚಂದ್ರಶೇಖರ ಸುವರ್ಣ ಮಾತನಾಡಿ ತುಳು ಬದುಕಿಗೆ ಕೃಷಿಯೇ ಮೂಲ, ಕ್ರಷಿಯನ್ನೇ ನಂಬಿ ಬದುಕಿದವರು ಇಂದು ವಿವಿಧ ಕ್ಷೇತ್ರದಲ್ಲಿ ಸಾದನೆ ಮಾಡಿದರೂ ಕೃಷಿಯನ್ನು ಕೈಬಿಟ್ಟಿಲ್ಲ ಎಂದರು. ಮಕ್ಕಳನ್ನು ಭತ್ತದ ನಾಟಿ ಮಾಡಿದ ಗದ್ದೆಗಿಳಿಸಿ ಬತ್ತದ ಕಳೆ ಕೀಳುವ ಬಗ್ಗೆ ಗಣೇಶ್ ಅಮೀನ್ ಸಂಕಮಾರ ಮತ್ತು ಹಿರಿಯರು ಕಲಿಸಿಕೊಟ್ಟರು. ಗದ್ದೆಯಲ್ಲಿಯೇ ಮಕ್ಕಳಿಗೆ ಕೃಷಿ ಮತ್ತು ಇದರಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಲಾಯಿತು. ಜುಲೈಯಲ್ಲಿ ಈ ಗದ್ದೆಯನ್ನು ನಾಟಿ ಮಾಡಲಾಗಿದ್ದು ಹುಲಸಾಗಿ ಬೇಳೆದ ಭತ್ತದ ಪೈರನ್ನು ಕಂಡು ಸಂಭ್ರಮಪಟ್ಟರು. ಕಾರ್ಯಕ್ರಮದಲ್ಲಿ ಬಾಗವಹಿಸಿದ ಅತಿಥಿಗಳು ಮಕ್ಕಳಿಗೆ ಕೃಷಿ ಮತ್ತು ಕೃಷಿ ಸಂಸ್ಕ್ರತಿ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭ ವಸಂತ ಬೆರ್ನಾಡ್, ಯಾದವ ದೇವಾಡಿಗ, ಕುಸುಮಾ ಮಹಾಬಲ ಪೂಜಾರಿ ಕಡಂಬೋಡಿ, ಬಾಸ್ಕರ ಸಾಲ್ಯಾನ್, ಗಗನ್ ಸುವರ್ಣ, ಬಾಲಚಂದ್ರ ಸನಿಲ್, ನವೀನ್ ಶೆಟ್ಟಿ ಎಡ್ಮೆಮಾರ್, ಪ್ರತೀಕ್ಷಾ, ಪೂರ್ಣಿಮಾ ಗೋಖಲೆ, ಜಯಂತಿ ಅಮೀನ್ ಸಂಕಮಾರ್, ಗಣೇಶ್ ಅಮೀನ್ ಸಂಕಮಾರ್, ಚಂದ್ರಶೇಖರ ನಾನಿಲ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *