Header Ads
Header Ads
Breaking News

ಅಜ್ಜರಕಾಡು:ಸಾಲು ಮರವೊಂದಕ್ಕೆ ಬೆಂಕಿ

ಅಜ್ಜರಕಾಡು ವಾರ್ಡಿನ ಕಿತ್ತೂರು ಚೆನ್ನಮ್ಮ ರಸ್ತೆಯ ಉದ್ದಕ್ಕೂ ಸಾಲು ಮರಗಳಿದ್ದು, ಅದರಲೊಂದು ಸುಮಾರು ನಲವತ್ತು ಅಡಿ ಎತ್ತರಕ್ಕೆ ಬೆಳೆದು ನಿಂತ ಮರದ ಬುಡದಲ್ಲಿ ಕಸ ತ್ಯಾಜ್ಯ, ಒಣ ಕಟ್ಟಿಗೆ ರಾಶಿಗೊಳಿಸಿ ಯಾರೋ ದುಷ್ಕರ್ಮಿಗಳು ಬೆಂಕಿ ನೀಡಿದ ಘಟನೆ ಸೋಮವಾರ ನಡೆದಿದೆ. ಅಗ್ನಿ ಜ್ವಾಲೆಗೆ ಮರದ ಬುಡ ಭಾಗವು ಹೊತ್ತಿ ಉರಿದಿದ್ದು. ಮರ ಬದುಕವ ಸಾಧ್ಯತೆ ಕಡಿಮೆ ಇದೆ ಎಂದು ತಿಳಿದು ಬಂದಿದೆ.ಅದೇ ರಸ್ತೆಯಲ್ಲಿ ಬೈಕಿನಲ್ಲಿ ಹಾದು ಹೋಗುವತ್ತಿರುವ ಸಂದರ್ಭದಲ್ಲಿ ಉಡುಪಿಯ ಸಾಮಾಜಿಕ ಕಾರ್ಯಕರ್ತಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಮರ ದಹಿಸಲ್ಪಡುವ ದೃಶ್ಯವನ್ನು ಗಮನಿಸಿದ್ದಾರೆ. ತಕ್ಷಣ ಅವರು ಸನಿಹದ ಮನೆಗಳಿಂದ ನೀರು ತಂದು ಬೆಂಕಿಯನ್ನು ನಂದಿಸಿ ಮರವನ್ನು ರಕ್ಷಿಸಿದ್ದಾರೆ. ದುಷ್ಕ್ರತ್ಯವನ್ನು ಅವರು ಬಲವಾಗಿ ಖಂಡಿಸಿದ್ದಾರೆ.ಸಕಲ ಜೀವ ಜಂತುಗಳಿಗೆ ಪ್ರಾಣ ವಾಯು ನೀಡುವ, ಪರಿಸರ ತಂಪಾಗಿಸುವ ಮರಗಳು ಉಡುಪಿಯ ಕಾಂಕ್ರೀಟ್ ಕಾಡುಗಳ ನಡುವೆ, ಅಜ್ಜರಕಾಡು ಪರಿಸರದಲ್ಲಿ ಮಾತ್ರ ಒಂದಿಷ್ಟು ಉಳಿದುಕೊಂಡಿದೆ. ಅವುಗಳನ್ನು ಅಗ್ನಿ ಮೂಲಕ ದಹಿಸಿ ಹತ್ಯೆಗೊಳಿಸುವ ವಿಕೃತ ಕೃತ್ಯಗಳು ನಡೆಯುತ್ತಿವೆ. ನಗರಸಭೆ, ಅರಣ್ಯ ಇಲಾಖೆ ಜಂಟಿಯಾಗಿ ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಿಸಿ, ಅವರ ಮೇಲೆ ಕಾನೂನು ಕ್ರಮ ಜರುಗಿಸ ಬೇಕು. ಇಂತಹ ಪರಿಸರ ವಿಘ್ನಗೊಳಿಸುವ ಕೃತ್ಯಗಳು ಮರುಕಳಿಸದಂತೆ ಎಚ್ಚರಿಕೆ ವಹಿಸ ಬೇಕೆಂದು ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಆಗ್ರಹಿಸಿದ್ದಾರೆ.

Related posts

Leave a Reply