Header Ads
Header Ads
Breaking News

ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಪರಿಚಿತ ಯುವಕನ ಸಂಬಂಧಿಕರು ಪತ್ತೆ

 

ನಗರದ ಬಡುಗುಪೇಟೆ- ಕಲ್ಸಂಕದ ಅಂಗಡಿ ಜಗುಲಿಯಲ್ಲಿ ಕಳೆದ ಒಂದು ತಿಂಗಳಿಂದ ಸೊಂಟದ ಸ್ವಾಧಿನ ಕಳೆದುಕೊಂಡು, ನಡೆಯಲಾಗದೆ, ಅಸಹಾಯಕ ಸ್ಥಿತಿಯಲ್ಲಿದ್ದ ಅಪರಿಚಿತ ಯುವಕನನ್ನು ಉಡುಪಿಯ ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ಭಾಸ್ಕರ ಶೇರಿಗಾರ್, ತಾರಾನಾಥ್ ಮೇಸ್ತ, ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ ಘಟನೆಯು ನ.13ನಡೆದಿತ್ತು.ಆ ಸಂದರ್ಭದಲ್ಲಿ ಯುವಕನು ತನ್ನ ಹೆಸರು ನಕುಲ, (28 ವ) ತಂದೆ ಸುರೇಶ, ತಾಯಿ ಕೆಂಚವ್ವ ಬೊಮ್ಮನ ಹಳ್ಳಿ, ಹಾನಗಲ್ಲ್, ಹಾವೇರಿ ಜಿಲ್ಲೆ ಎಂಬ ವಿಳಾಸ ನೀಡಿದ್ದನು. ಯುವಕನು ನೀಡಿದ ಮಾಹಿತಿಯಂತೆ ಸಂಬಂಧಿಕರ ಪತ್ತೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಭಾವಚಿತ್ರ ಸಹಿತ ಪ್ರಕಟಣೆಯನ್ನು ಸಾಮಾಜಿಕ ಕಾರ್ಯಕರ್ತರು ಬಿತ್ತರಿಸಿದ್ದರು. ಕೊನೆಗೆ ವೈರಲ್ ಆದ ಪ್ರಕಟಣೆಯು ಸಂಬಂಧಿಕರಿಗೆ ತಲುಪಿದೆ. ಹಾನಗಲ್ಲಿನಿಂದ ಯುವಕನ ತಂದೆ ತಾಯಿ ಸಂಬಂಧಿಕರು ಭಾನುವಾರ ಉಡುಪಿಗೆ ಆಗಮಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರ ಸಂಪರ್ಕಿಸಿದ್ದಾರೆ. ನಂತರ ಅವರು ಆಸ್ಪತ್ರೆಯ ವಾರ್ಡಿನಲ್ಲಿ ನಕುಲನ ಕಂಡು ಸಂತಸ ಪಟ್ಟಿದ್ದಾರೆ. ಕಳೆದ 14 ತಿಂಗಳ ಹಿಂದೆ ಮನೆಯಿಂದ ಮಗನು ನಾಪತ್ತೆ ಆಗಿದ್ದನು. ಅವನ ಹುಡುಕಾಟದಲ್ಲಿ ನಾವಿದ್ದೆವು. ಆದರೂ ಅವನ ಇರುವಿಕೆಯ ಸುಳಿವು ಕಂಡು ಬಂದಿಲ್ಲವಾಗಿತ್ತು. ಮಗ ಸಿಕ್ಕಿದ್ದು, ತಮಗೆ ದೊಡ್ಡ ಆಸ್ತಿಯೇ ಸಿಕ್ಕಾಂತಾಗಿದೆ, ಎಂದು ಯುವಕನ ಹೆತ್ತವರು ಹೇಳಿ ಕೊಂಡಿದ್ದಾರೆ. ಸಮಾಜ ಸೇವಕರ ಮಾನವಿಯತೆಯ ಸೇವೆಗೆ ಧನ್ಯವಾದ ಸಲ್ಲಿಸಿದ್ದಾರೆ. ಉದ್ಯಮಿ ಭಾಸ್ಕರ ಶೇರಿಗಾರ್ ಅವರು ಯುವಕನ ಸೇವೆಗೆಂದು ಕಾರ್ಮಿಕನ ನಿಯೋಜನೆ ಮಾಡಿ ವೇತನ ನೀಡಿ ಸಹಕರಿಸಿ ಮಾನವಿಯತೆ ಮೆರೆದಿದ್ದಾರೆ.

Related posts

Leave a Reply