Header Ads
Header Ads
Breaking News

ಅಜ್ಜರಕಾಡು ಭುಜಂಗ ಪಾರ್ಕಿನಲ್ಲಿ ಮದ್ಯವ್ಯಸನಿಗಳ ಹಾವಳಿ ಎಲ್ಲೆಂದರಲ್ಲಿ ಮದ್ಯಬಾಟಲಿಗಳ ರಾಶಿ ವಾಯು ವಿಹಾರ ತಾಣದಲ್ಲಿ ಪ್ಲಾಸ್ಟಿಕ್ ಆರಿಸುವ ವಿನೂತನ ಸ್ಪರ್ಧೆ ಅರ್ಧ ಗಂಟೆಯಲ್ಲಿ ಪಾರ್ಕ್ ಪರಿಸರ ಸ್ವಚ್ಚಗೊಳಿಸಿದ ನಾಗರಿಕ ಸಮಿತಿ

ಉಡುಪಿ ಜಿಲ್ಲಾ ನಾಗರಿಕ ಸಮಿತಿ, ಗಾಂಧಿ ಆಸ್ಪತ್ರೆಯ ಸಹಕಾರದೊಂದಿಗೆ ಅಜ್ಜರಕಾಡು ಭುಜಂಗ ಪಾರ್ಕ್ ವಾಯು ವಿಹಾರತಾಣ, ಹಾಗೂ ಸುತ್ತ ಮುತ್ತಲ ಪರಿಸರದಲ್ಲಿ ಪ್ಲಾಸ್ಟಿಕ್ ಆರಿಸುವ ವಿನೂತನ ಸ್ಪರ್ಧೆಯನ್ನು ಏರ್ಪಡಿಸಿ, ಕೇವಲ ಅರ್ಧ ಗಂಟೆಯಲ್ಲಿ ಭಾಗಶಃ ಪಾರ್ಕ್ ಪರಿಸರವನ್ನು ತ್ಯಾಜ್ಯದಿಂದ ಮುಕ್ತಗೊಳಿಸಿದ್ದರು.

ಇದೀಗ ಫೆ. 8 ರಂದು ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸಾಮಾಜಿಕ ಕಾರ್ಯಕರ್ತರಾದ ತಾರಾನಾಥ್ ಮೇಸ್ತ ಶಿರೂರು, ವಿನಯಚಂದ್ರ ಸಾಸ್ತಾನ, ರಾಜೇಶ್ ಕಾಪು ಜೊತೆಗೂಡಿ ಭುಜಂಗ ಪಾರ್ಕಿನ ತುಂಬೆಲ್ಲಾ ಬಿದ್ದುಕೊಂಡಿದ್ದ ಸುಮಾರು 20 ಚೀಲದಷ್ಟು ಮದ್ಯದ ಬಾಟಲಿಗಳನ್ನು ಪಾರ್ಕೆಲ್ಲಾ ಸುತ್ತಾಡಿ ಆರಿಸಿದ್ದಾರೆ. ಆಯಾಕಟ್ಟಿನ ಸ್ಥಳ ಗುರತಿಸಿ ರಾಶಿ ಹಾಕಿ ಇಟ್ಟಿದ್ದಾರೆ. ಬಾಟ್ಲಿಯನ್ನು ವಿಲೇವಾರಿಗೊಳಿಸಲು ನಗರಾಡಳಿತ ಸ್ವಚ್ಚತಾ ಸಿಬ್ಭಂದಿಗೆ ಮಾಹಿತಿಯನ್ನೂ ನೀಡಿದ್ದಾರೆ. ಸಾಮಾಜಿಕ ಕಾರ್ಯಕರ್ತರ ಸಮಯಪ್ರಜ್ಞೆ, ಸ್ವಚ್ಚತಾ ಶ್ರಮದಾನ ಕಂಡು, ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.ಪಾರ್ಕಿನಲ್ಲಿ ಕತ್ತಲಾದಂತೆ ಮದ್ಯ ವ್ಯಸನಿಗಳು ಮದ್ಯ ಸೇವಿಸುತ್ತಿದ್ದು. ನಂತರ ಮನ ಬಂದಂತೆ ಬಾಟ್ಲಿಗಳನ್ನು ಎಸೆದು ಹೊಗುತ್ತಿದ್ದಾರೆ. ಅಲ್ಲದೆ ಕುಡಿತದ ಅಮಲಿನಲ್ಲಿ ಬಾಟ್ಲಿಗಳನ್ನು ಹೊಡೆದು ಹಾಕುತ್ತಿದ್ದಾರೆಂದು ಸಾರ್ವಜನಿಕರು ದೂರಿದ್ದಾರೆ. ಚಿಕ್ಕ ಮಕ್ಕಳು ಆಟ ಆಡಲು ಪಾರ್ಕಿಗೆ ಬರುತ್ತಾರೆ. ವಾಯು ವಿಹಾರಿಗಳು, ಹಿರಿಯ ನಾಗರಿಕರು ಪಾರ್ಕಿಗೆ ಬರುತ್ತಾರೆ. ಬಾಟ್ಲಿ ಗಾಜಿನ ಚೂರುಗಳು ಕಾಲಿಗೆ ಚೂಚ್ಚುವ ಸಂಭವವು ಇದೆ ಎಂಬ, ಅಳಲನ್ನು ಹಿರಿಯ ನಾಗರಿಕರು ತೋಡಿ ಕೊಂಡಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಸೇವನೆ ಕಾನೂನು ಪ್ರಕಾರ ಅಪರಾಧ ಆಗಿರುತ್ತದೆ. ಇಲ್ಲಿ ಮದ್ಯ ಸೇವನೆಗೆ ಮುಕ್ತ ಅವಕಾಶ ಇರುವಂತ ವಾತಾವರಣ ಸೃಷ್ಠಿ ಆಗಿದೆ. ಕಾನೂನು ಪಾಲಕರು ಇತ್ತ ಸುಳಿದಾಡುವುದಿಲ್ಲ. ಅಮಲು ವ್ಯಸನಿಗಳಿಂದ ಪ್ರಶಾಂತ ವಾತವರಣದಲ್ಲಿ ಶಾಂತತೆಗೆ ಭಂಗವಾಗುವ ಸಾದ್ಯತೆಯೂ ಇರುತ್ತದೆ. ಸುಕೃತ ಮನಸು ನಶೆ ಎರಿದಾಗ ವಿಕೃತಗೊಂಡು ಅಹಿತಕರ ಘಟನೆಗಳು ನಡೆಯಲು ಕಾರಣವಾಗುತ್ತದೆ. ಹಾಗಾಗಿ ಉಡುಪಿ ನಗರಾಡಳಿತವು ಭುಜಂಗ ಪಾರ್ಕಿನಲ್ಲಿ ಮದ್ಯ ಸೇವನೆ, ಪಾನಗೋಷ್ಠಿಗಳು ನಡೆಯಲು ನಿಷೇದಿತ ಪ್ರದೇಶ ಎಂದು ಪ್ರವೇಶ ದ್ವಾರಗಳಲ್ಲಿ ಸೂಚನಾ ಫಲಕ ಅಳವಡಿಸ ಬೇಕೆಂದು ಸಾರ್ವಜನಿಕರು ಆಗ್ರಹ ಪಡಿಸಿದ್ದಾರೆ.
ವರದಿ: ಪಲ್ಲವಿ ಸಂತೋಷ್ ಉಡುಪಿ….

Related posts

Leave a Reply