Header Ads
Header Ads
Breaking News

ಅಜ್ಜಾವರ-ಮಂಡೆಕೋಲು ರಸ್ತೆ ದುರಸ್ತಿಗೆ ಸಿಆರ್‌ಎಫ್‌ನಿಂದ 6 ಕೋಟಿ ಬಿಡುಗಡೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಟೆಂಡರ್‌ಗೆ ತಡೆ ಮಾಜಿ ಜಿ.ಪಂ ಸದಸ್ಯ ನವೀನ್ ರೈ ಮೇನಾಲ ಆರೋಪ

ಸುಳ್ಯ ಕಾಂತಮಂಗಲ-ಅಜ್ಜಾವರ-ಮಂಡೆಕೋಲು ರಸ್ತೆಗೆ ಸಂಸದ ಮತ್ತು ಶಾಸಕರ ಶಿಫಾರಸ್ಸಿನ ಮೇರೆಗೆ ಕೇಂದ್ರ ರಸ್ತೆ ನಿಧಿಯಿಂದ 6 ಕೋಟಿ ಬಿಡುಗಡೆ ಆಗಿದೆ. ಜನವರಿ 16ರಂದು ಟೆಂಡರ್ ಒಪನ್ ಆಗಬೇಕಿತ್ತು. ಆದರೆ ಕಾಂಗ್ರೆಸ್ ಸರಕಾರ ಚುನಾವಣೆಗೆ ಮೊದಲು ರಸ್ತೆ ಕಾಮಗಾರಿ ಆಗಬಾರದು ಎಂಬ ದುರುದ್ದೇಶದಿಂದ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಟೆಂಡರ್‌ಗೆ ತಡೆ ಹಿಡಿಯಲಾಗಿದೆ ಇದರಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರ ಕುಮ್ಮಕ್ಕು ಇದೆ ಎಂದು ಮಾಜಿ ಜಿ.ಪಂ ಸದಸ್ಯ ನವೀನ್ ರೈ ಮೇನಾಲ ಆರೋಪ ಮಾಡಿದ್ದಾರೆ. ಈ ಕುರಿತು ಸುಳ್ಯದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರಸ್ತೆಗಾಗಿ ರಸ್ತೆ ಅನುಷ್ಟಾನ ಸಮಿತಿ ಮೂಲಕ ಬೃಹತ್ ಪ್ರತಿಭಟನೆ ಮಾಡಿಯೂ ಯಾವುದೇ ಪ್ರಯೋಜನ ಆಗಿಲ್ಲ. ಈ ರಸ್ತೆಗೆ ಜನವರಿ 4 ರಂದು ಟೆಂಡರ್ ಪ್ರಕ್ರೀಯೆಗೆ ಚಾಲನೆ ಸಿಕ್ಕಿತ್ತು. ಜ. 12ರಂದು ಕೊನೆಯ ದಿನವಾಗಿತ್ತು. ಇಲಾಖೆಯ ಆದೇಶದ ಪ್ರಕಾರ ಜನವರಿ 116ರಂದು ಟೆಂಡರ್ ಓಪನ್ ಆಗಬೇಕಿತ್ತು. ಆದರೆ ಸ್ಥಳೀಯ ಕಾಂಗ್ರೆಸ್ ಮುಖಂಡರ ಕುಮ್ಮಕ್ಕಿನಿಂದ ರಾಜ್ಯ ಸರ್ಕಾರ ಟೆಂಡರ್‌ಗೆ ತಡೆ ಆಗಿದೆ. ಇಷ್ಟೆಲ್ಲಾ ಸತ್ಯ ಗೊತ್ತಿದ್ದರೂ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮುಖ್ಯ ಇಂಜಿನಿಯರ್ ಜೊತೆ ಮಾತನಾಡಲು ಯಾರು? ಇದಕ್ಕೆ ಶಾಸಕರು ಇಲ್ಲವಾ ಎಂದು ಪ್ರಶ್ನೆ ಮಾಡಿದ್ದಾರೆ. 

Related posts

Leave a Reply