Header Ads
Header Ads
Header Ads
Breaking News

ಅಡಕೆ ಮರದಿಂದ ಬಿದ್ದು ಕಾರ್ಮಿಕ ಮೃತ್ಯು ಪುತ್ತೂರಿನ ತಿಂಗಳಾಡಿ ಕಜೆ ಎಂಬಲ್ಲಿ ಘಟನೆ

ಪುತ್ತೂರು: ಅಡಿಕೆ ಮರದಿಂದ ಅಡಿಕೆ ಕೊಯ್ಯುತ್ತಿದ್ದ ವೇಳೆ ಕೂಲಿ ಕಾರ್ಮಿಕರೋರ್ವರು ಮರದಿಂದ ಬಿದ್ದು ಮೃತಪಟ್ಟ ಘಟನೆ ತಿಂಗಳಾಡಿ ಕಜೆ ಎಂಬಲ್ಲಿ ನಿನ್ನೆ ಸಂಜೆ ನಡೆದಿದೆ. ಬಡಗನ್ನೂರು ಗ್ರಾಮದ ಪಾದೆಕರಿಯ ನಿವಾಸಿ ಅಪ್ಪು ನಾಯ್ಕ ಎಂಬವರ ಪುತ್ರ ಅವಿವಾಹಿತ ಶೇಷಪ್ಪ ನಾಯ್ಕ (29ವ)ರವರು ಮೃತಪಟ್ಟವರು. ಶೇಷಪ್ಪ ನಾಯ್ಕರವರು ಕೂಲಿ ಕಾರ್ಮಿಕರಾಗಿದ್ದು ಕಳೆದ 2 ದಿನಗಳಿಂದ ತಿಂಗಳಾಡಿಯ ಕಜೆ ಎಂಬಲ್ಲಿ ಇತರ ಕೂಲಿ ಕಾರ್ಮಿಕರಾದ ಅಶೋಕ್, ರವಿಚಂದ್ರ, ಶ್ರೀಧರ್‌ರವರ ಜೊತೆಯಲ್ಲಿ ತೋಟದಲ್ಲಿ ಅಡಿಕೆ ಕೊಯ್ಯುವ ಕೆಲಸ ಮಾಡುತ್ತಿದ್ದರು.

ತೋಟದ ಉಸ್ತುವಾರಿಯನ್ನು ಜಯರಾಮ ಎಂಬವರು ನೋಡಿಕೊಳ್ಳುತ್ತಿದ್ದು, ನ.30 ರಂದು ಮೂರನೆ ದಿನ ಅಡಿಕೆ ಕೊಯ್ಯುವ ಕೆಲಸದಲ್ಲಿ ನಿರತರಾಗಿದ್ದ ಶೇಷಪ್ಪ ನಾಯ್ಕರವರು ಆಕಸ್ಮಿಕವಾಗಿ ತಾನು ಏರಿದ ಅಡಿಕೆ ಮರದಿಂದ ಬಿದ್ದು ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆತರಲಾಯಿತ್ತಾದರೂ ಆಗಲೇ ಶೇಷಪ್ಪ ನಾಯ್ಕ ಮೃತಪಟ್ಟಿದ್ದರು. ಮೃತರು ತಂದೆ ಅಪ್ಪು ನಾಯ್ಕ, ತಾಯಿ ಪದ್ಮಾವತಿ, ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ. ಸರಕಾರಿ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟು ಕೊಡಲಾಗಿದೆ. ಮೃತರ ತಂದೆ ಅಪ್ಪು ನಾಯ್ಕರವರು ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರಕಾರಿ ಆಸ್ಪತ್ರೆಗೆ ಸಿಂಡಿಕೇಟ್ ಸದಸ್ಯ ಪ್ರಸನ್ನ ಕುಮಾರ್ ರೈ ಮತ್ತಿತರರು ಭೇಟಿ ನೀಡಿದ್ದರು.

Related posts

Leave a Reply