Header Ads
Header Ads
Breaking News

ಅಡಿಕೆ ಇತರ ಬೆಳೆಗಳಿಗೆ ಕೊಳೆರೋಗ ಪರಿಹಾರಕ್ಕೆ ಆಗ್ರಹ: ನ.19ರಂದು ವಿಧಾನ ಸೌಧಕ್ಕೆ ಮುತ್ತಿಗೆ

ಈ ಬಾರಿ ಸುರಿದ ಬಾರೀ ಮಳೆಗೆ ಕರಾವಳಿಯಲ್ಲಿ ಪ್ರಮುಖ ಬೆಳೆಯಾದ ಅಡಿಕೆ ಕೃಷಿಗೆ ಕೊಳೆ ರೋಗ ಬಂದಿದ್ದು ಸರಕಾರ ಪರಿಹಾರ ಒದಗಿಸಿಬೇಕೆಂದು ಆಗ್ರಹಿಸಿ ನ.೧೯ರಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೆಂಗಳೂರಿನ ವಿಧಾನಸೌಧದೆದುರು ಪ್ರತಿಭಟನೆ ನಡೆಸಲಿದ್ದು ಮತ್ತು ರೈತರ ಸಂಪೂರ್ಣ ಸಾಲಮನ್ನಾ ಹಾಗೂ ಕೃಷಿ ಉತ್ತನ್ನಗಳಿಗೆ ಶಾಸನಾತ್ಮಕವಾಗಿ ವೈಜ್ಞಾನಿಕ ಬೆಲೆ ನಿಗದಿ ಆಗ್ರಹಿಸಿ ನ. 30ರಂದು ಪಾರ್ಲಿಮೆಂಟ್ ಚಲೋ ನಡೆಯಲಿದೆ.
ಸುಳ್ಯದ ರೈತರೂ ಕೂಡಾ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು ಹೇಳಿದ್ದಾರೆ. ಸುಳ್ಯ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಮಳೆಯಿಂದಾಗಿ ಅಡಿಕೆ, ತೆಂಗು, ಕೊಕ್ಕೋ, ರಬ್ಬರ್‌ಗೆ ಕೊಳೆರೋಗ ಬಂದಿದೆ. ಶೇ.65ರಷ್ಟು ಕೃಷಿ ಬೆಳೆ ಹಾನಿಯಾಗಿದೆ. ಆದ್ದರಿಂದ ಬೆಳೆ ಪರಿಹಾರ ಮತ್ತು ನಾಶ ಹೊಂದಿದ ಕೃಷಿಗೆ ವೈಜ್ಞಾನಿಕ ಪರಿಹಾರವನ್ನು ಸರಕಾರ ತಕ್ಷಣ ಬಿಡುಗಡೆಗೊಳಿಸಬೇಕು.

ಈ ನಿಟ್ಟಿನಲ್ಲಿ ನಾವು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ನಮ್ಮ ಬೇಡಿಕೆಗೆ ಮುಖ್ಯಮಂತ್ರಿಗಳು ಸ್ಪಂದಿಸದೇ ಹೋದರೆ ವಿಧಾನ ಸೌಧ ಮುತ್ತಿಗೆ ಹಾಕಲಾಗುವುದು ಎಂದು ಅವರು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಪ್ರಧಾನ ಕಾರ್ಯದರ್ಶಿ ತೀರ್ಥರಾಮ ಎನ್.ಸಿ. ಜಿಲ್ಲಾ ಕಾರ್ಯದರ್ಶಿ ದಿವಾಕರ ಪೈ ಮಜಿಗುಂಡಿ, ರೋಹನ್ ಪೀಟರ್, ಜಿ.ವಿ.ಭೋಜಪ್ಪ, ವಿಜಯಕುಮಾರ್, ಸೆಬಾಸ್ಟಿನ್ ಉಪಸ್ಥಿತರಿದ್ದರು.

Related posts

Leave a Reply