Header Ads
Breaking News

ಅಡಿಕೆ ವ್ಯಾಪಾರ –ಜಿಎಸ್‍ಟಿ ವಂಚನೆ : ಸಿಜಿಎಸ್‍ಟಿ ಅಧಿಕಾರಿಗಳಿಂದ ಇಬ್ಬರ ಬಂಧನ

ಮಂಗಳೂರು: ಸರುಕು ಹಾಗೂ ಸೇವಾ ತೆರಿಗೆಯಿಂದ ವಿನಾಯಿತಿ ಪಡೆದುಕೊಳ್ಳುವ ಸಲುವಾಗಿಅಡಿಕೆ ವ್ಯಾಪಾರದಲ್ಲಿ ನಕಲಿ ಪೂರೈಕೆ ಪಟ್ಟಿಯನ್ನು ಒದಗಿಸಿದ ಆರೋಪದ ಮೇಲೆ ಸಿಜಿಎಸ್ ಟಿ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಸುರೇಶ್ ಚತ್ರಭೋಜ ಭಾನುಶಾಲಿ ಹಾಗೂ ಶ್ರೀನಿವಾಸ್ ಮತ್ತು ಶ್ಯಾಮ್ ಟ್ರೇಡರ್ಸ್‍ನ ಮಾಲಿಕ ಶ್ರೀನಿವಾಸ್ ಹೆಗ್ಡೆ ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ ತೆರಿಗೆ ವಂಚನೆಯ ಈ ಜಾಲದಲ್ಲಿ ವ್ಯವಸ್ಥಿತ ತಂಡವೊಂದು ಶಿರಸಿ, ಪುತ್ತೂರು, ಮಂಗಳೂರು ಹಾಗೂ ಚಿತ್ರದುರ್ಗದಲ್ಲಿ ಕಾರ್ಯವೆಸಗುತ್ತಿವೆ. ತಮ್ಮಲ್ಲಿ ಅಡಕೆಯ ದಾಸ್ತಾನು ಇರದಿದ್ದರೂ ಇದೆಯೆಂದು ತೋರಿಸುವ ನಕಲಿ ಪಟ್ಟಿಯನ್ನು ಈ ತಂಡ ಸಿದ್ಧಪಡಿಸಿಕೊಳ್ಳುತ್ತವೆ. ಈ ರೀತಿ ಅಡಿಕೆ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವುದರಿಂದ
ಪಾವತಿಸಬೇಕಾದ ಸರಕು ಮತ್ತು ಸೇವಾ ತೆರಿಗೆಯಿಂದ ವಿನಾಯಿತಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಇಂತಹ ಅವ್ಯವಹಾರದಲ್ಲಿ ನಿರತರಾಗಿರುವ ಮಂದಿ ದಾಖಲೆಯಲ್ಲಿ ತಮ್ಮ ವಿಳಾಸ, ಕಛೇರಿಯ ಬಗ್ಗೆ ವಿವರ ನೀಡಿದರೂ, ಕಾರ್ಯಾಚರಣೆಯ ಸಂದರ್ಭ ಇವೆಲ್ಲವೂ ಭೋಗಸ್ ಎಂದು ಈಗಾಗಲೇ ತಿಳಿದು ಬಂದಿದೆ. ಈ ರೀತಿಯ ಅವ್ಯವಹಾರದಿಂದ ಸರಕಾರಕ್ಕೆ ಸುಮಾರು 17 ಕೋಟಿಗೂ ಅಧಿಕ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಬಂಧಿತರನ್ನು ಜಿಲ್ಲಾ ಮ್ಯಾಜಿಸ್ಟ್ರೇಟರ್ ಮುಂದೆ ಹಾಜರುಪಡಿಸಲಾಗಿದ್ದು ಎಪ್ರಿಲ್ 1 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಸಿಜಿಎಸ್ ಟಿ ಆಯುಕ್ತ ಇಮಾಮುದ್ದೀನ್ ಅಹ್ಮದ್ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಸಹಾಯಕ ಆಯುಕ್ತ ರಾಜೇಶ್ ಪೂಜಾರಿ, ಮೇಲ್ವಿಚಾರಕ ರಾಜಗೋಪಾಲ್, ಇನ್ಸ್‍ಪೆಕ್ಟರ್‍ಗಳಾದ ಪಾರ್ಥಸಾರಥಿ, ಶೈಲೇಂದ್ರ ಜೈನ್, ಅರ್ಪಿತ್ ಕಾಮ್ರಾ, ಹಾಗೂ ಅಭಿನವ್ ಕುಮಾರ್ ಹಾಜರಿದ್ದರು.

Related posts

Leave a Reply

Your email address will not be published. Required fields are marked *