Breaking News

ಅಡೆಂಜ ತೂಗು ಸೇತುವೆ ಬಳಿ ನದಿಯಲ್ಲಿ ಮುಳುಗಿ ಬಾಲಕರ ಸಾವು, ಸ್ನಾನಕ್ಕಿಳಿದು ಮೃತರಾದ ಬೆಳ್ತಂಗಡಿಯ ಅಮಿತ್, ಬಿನು

ನೂಜಿ ಬಾಳ್ತಿಲ ಗ್ರಾಮದ ಅಡೆಂಜ ತೂಗು ಸೇತುವೆ ಸಮೀಪ ಸ್ನಾನಕ್ಕೆಂದು ತೆರಳಿದ್ದ ಬಾಲಕರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸಂಜೆ ನಡೆದಿದೆ.
ಮೃತರನ್ನು ಬೆಳ್ತಂಗಡಿ ತಾಲೂಕಿನ ಲಾಲ ನಿವಾಸಿ ಅಬ್ರಹಾಂ ಎಂಬವರ ಪುತ್ರ 18ರ ಅಮಿತ್ ಹಾಗೂ ಪುತ್ತೂರು ತಾಲೂಕಿನ ಆಲಂಕಾರು ಗ್ರಾಮದ ಕಜೆ ನಿವಾಸಿ ವರ್ಗೀಸ್ ಎಂಬವರ ಪುತ್ರ 16ರ ಬಿನು ಎಂದು ಗುರುತಿಸಲಾಗಿದೆ. ಇವರು ಶಾಲೆ ರಜೆಯಾದುದರಿಂದ ಅಜ್ಜನ ಮನೆಗೆಂದು ಬಂದಿದ್ದು, ಮಾವನೊಂದಿಗೆ ಶುಕ್ರವಾರ ಸಂಜೆ ಸ್ನಾನಕ್ಕೆಂದು ನದಿಗೆ ತೆರಳಿದ್ದರು. ಆದರೆ ನದಿಯ ಆಳ ತಿಳಿಯದೆ ಮುಳುಗಿ ಮೃತಪಟ್ಟಿದ್ದಾರೆ. ಮೃತದೇಹವನ್ನು ಕಡಬ ಸಮುದಾಯ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply