Header Ads
Breaking News

ಅಡ್ಡಹೊಳೆ- ಬಿಸಿರೋಡ್‍ವರೆಗಿನ ರಸ್ತೆ ಕಾಮಗಾರಿ ವಿಚಾರ : ಅ.10ರಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯಿಂದ ಪ್ರತಿಭಟನೆ

ನೆಲ್ಯಾಡಿಯ ರಾಷ್ಟ್ರೀಯ ಹೆದ್ದಾರಿ 75ರಹೋರಾಟ ಸಮಿತಿಯ ವತಿಯಿಂದ ಅ.10ರಂದು ಸುಮಾರು 23ಸಂಘ ಸಂಸ್ಥೆಗಳು ಬೀದಿಗಿಳಿದು ಹೋರಾಟ ನಡೆಸಲು ತೀರ್ಮಾನಿಸಿದ್ದೇವೆ ಅಂತ ಹೇಳಿದ್ರು. ರಾಷ್ಟ್ರೀಯ ಹೋರಾಟ ಸಮಿತಿಯ ಅಧ್ಯಕ್ಷ ಫಾ. ವರ್ಗೀಸ್ ಹೇಳಿದ್ರು.

ಅವರು ಈ ಬಗ್ಗೆ ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 75ರಲ್ಲಿ ದ.ಕ ಜಿಲ್ಲೆ ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿಂದ ಬಂಟ್ವಾಳ ತಾಲೂಕಿನ ಬಿಸಿ ರೋಡ್ ವರೆಗಿನ ರಸ್ತೆಯನ್ನು ಮರು ಡಾಮರೀಕರಣ ಮಾಡಬೇಕಾಗಿ ಜಿಲ್ಲಾಧಿಕಾರಿ ಮುಖಾಂತರ ಸಂಬಂಧಪಟ್ಟ ಇಲಾಖೆಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ನೀಡಿದ್ರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಅಂತ ಹೇಳಿದ್ರು.

ಈ ಸಂದರ್ಭ ನೆಲ್ಯಾಡಿ ಪಂಚಾಯತಿಯ ಮಾಜಿ ಅಧ್ಯಕ್ಷ ಜಯಾನಂದ, ಹೋರಾಟ ಸಮಿತಿಯ ಫಾ. ಆದರ್ಶ್ ಜೋಸೆಫ್, ಕಾರ್ಯದರ್ಶಿ ಜೋಸ್ ಕೆಜೆ, ಉಪಸ್ಥಿತರಿದ್ರು.

Related posts

Leave a Reply

Your email address will not be published. Required fields are marked *