Header Ads
Header Ads
Breaking News

ಅಡ್ಯಾರ್‌ನ ಸಹ್ಯಾದ್ರಿ ಕಾಲೇಜ್ ಕ್ಯಾಂಪಸ್‌ನಲ್ಲಿ “ಆಪ್ಷನ್ ಎಂಟ್ರಿ ದ ರೈಟ್ ವೇ” ಓರಿಯಂಟೇಶನ್ ಕಾರ್ಯಕ್ರಮ

 ವೃತ್ತಿಪರ ಕಾಲೇಜು ಪ್ರವೇಶಾಕಾಂಕ್ಷಿಗಳಿಗೆ ಆಪ್ಷನ್ ಎಂಟ್ರಿ ದ ರೈಟ್ ವೇ ಎಂಬ ಓರಿಯಂಟೇಶನ್ ಕಾರ್ಯಕ್ರಮ ನಗರದ ಅಡ್ಯಾರ್‌ನಲ್ಲಿರುವ ಸಹ್ಯಾದ್ರಿ ಕಾಲೇಜು ಕ್ಯಾಂಪಸ್‌ನಲ್ಲಿ ನಡೆಯಿತು.ಮಂಗಳೂರಿನ ಹೊರವಲಯದ ಅಡ್ಯಾರ್‌ನಲ್ಲಿರುವ ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ನಡೆದ ಓರಿಯಂಟೇಶನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಹ್ಯಾದ್ರಿ ಕಾಲೇಜಿನ ಕಾರ್ಯತಂತ್ರ ಯೋಜನೆಯ ನಿರ್ದೇಶಕ ಡಾ. ಉಮೇಶ್ ಎಂ.ಭೂಶಿ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಕಾಲೇಜು ಆಯ್ಕೆ ಪ್ರಕ್ರಿಯೆಯಲ್ಲಿ ಗೊಂದಲಕ್ಕೊಳಗಾಗ ಬಾರದು ಮತ್ತು ನಿಮ್ಮ ಆಯ್ಕೆಯ ಕಾಲೇಜಿನ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಮತ್ತು ನಿಮ್ಮ ಆಯ್ಕೆಯ ವಿಷಯದ ಬಗ್ಗೆಯು ನಿಮಗೆ ಸಂಪೂರ್ಣ ಮಾಹಿತಿಯಿರಬೇಕು.

ಇತರರ ಒತ್ತಡಕ್ಕೆ ಒಳಗಾಗಿ ನಿಮ್ಮ ಅಭಿರುಚಿಯನ್ನು ಮರೆಯದಿರಿ ಎಂದು ಹೇಳಿದರು.ನಂತರ ಮಾತನಾಡಿದ ಕಾಲೇಜು ಪ್ರಾಂಶುಪಾಲರಾದ ಡಾ.ಆರ್.ಶ್ರೀನಿವಾಸ ರಾವ್ ಕುಂಟೆ ಮೊದಲು ನಿಮ್ಮ ಸಿಇಟಿ ರ್‍ಯಾಂಕಿಂಗ್‌ನ ಬಗ್ಗೆ ಗಮನಹರಿಸಿ ನಂತರ ನಿಮ್ಮ ಕನಸಿನ ಕಾಲೇಜು ಮತ್ತು ನಿಮ್ಮ ನೆಚ್ಚಿನ ವಿಷಯದ ಆಯ್ಕೆ ಮಾಡಬೇಕು ಎಂದು ಸೀಟುಗಳು, ಇಂಜಿನಿಯರಿಂಗ್‌ನ ವಿವಿಧ ಬ್ರಾಂಚ್‌ಗಳು ಮತ್ತು ಬ್ರಾಂಚ್ ಮತ್ತು ಕಾಲೇಜುಗಳನ್ನು ಆಯ್ಕೆ ಮಾಡಲು ಬಳಸುವ ಮಾನದಂಡಗಳ ಬಗ್ಗೆ ವಿದ್ಯಾಥಿಗಳಿಗೆ ಮತ್ತು ಪೋಷಕರಿಗೆ ಮಾಹಿತಿ ನೀಡಿದರುಈ ಕಾರ್ಯಕ್ರಮವನ್ನು ಸಹ್ಯಾದ್ರಿ ಸ್ಟಾರ್ಟ್-ಆಪ್ ಕಂಪನಿಗಳಾದ ಕ್ಯಾಲಿಪರ್ ಇಂಜಿನಿಯರಿಂಗ್ ಲ್ಯಾಬ್, ಆರ್ಡಿಎಲ್ ಟೆಕ್ನಾಲಜೀಸ್, ಡಿಟಿಐ ಲ್ಯಾಬ್ ಮತ್ತು ಡ್ರೀಮ್ ಪಾಸ್ಟ್ ಇನ್ನೋವೇಶನ್ಸ್ ಸಹಯೋಗದೊಂದಿಗೆ ಡ್ರೀಮರ್ ಮತ್ತು ಚಾಲೆಂಜರ್ಸ್ ವತಿಯಿಂದ ಆಯೋಜಿಸಲಾಗಿತ್ತುಪೋಷಕರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸಂಪೂರ್ಣ ಸದುಪಯೋಗ ಪಡೆದುಕೊಂಡರು.

Related posts

Leave a Reply