Header Ads
Breaking News

ಅಡ್ಯಾರ್ ಕಣ್ಣೂರು ಮೈದಾನದಲ್ಲಿ ನಡೆಯುವ ಬೃಹತ್ ಪ್ರತಿಭಟನಾ ಸಭೆ : ಬಂಟ್ವಾಳದಿಂದ 25 ಸಾವಿರ ಮಂದಿ ಭಾಗಿ

ಎನ್ ಆರ್‍ಸಿ, ಸಿಎಎ ಹಾಗೂ ಎನ್‍ಪಿ ಆರ್ ವಿರುದ್ಧ ಜ. 15ರಂದು ಮಂಗಳೂರು ಹೊರವಲಯದ ಅಡ್ಯಾರ್ ಕಣ್ಣೂರು ಮೈದಾನದಲ್ಲಿ ನಡೆಯುವ ಬೃಹತ್ ಪ್ರತಿಭಟನಾ ಸಭೆಗೆ ಬಂಟ್ವಾಳ ತಾಲೂಕಿನಿಂದ 25ಸಾವಿರಕ್ಕೂ ಮಂದಿ ಭಾಗವಹಿಸಲಿದ್ದು, ಮುಸ್ಲಿಂ ವರ್ತಕರ ಅಂಗಡಿಮುಂಗಟ್ಟುಗಳು ಬಂದ್ ಆಗಲಿವೆ ಎಂದು ಎನ್‍ಆರ್‍ಸಿ ವಿರೋಧಿ ಹೋರಾಟ ಸಮಿತಿ ಬಂಟ್ವಾಳ ತಾಲೂಕು ಅಧ್ಯಕ್ಷ ಎಸ್. ಮುಹಮ್ಮದ್ ಶಫಿ ಅವರು ತಿಳಿಸಿದ್ದಾರೆ.

ಅವರು ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇದು ಜಿಲ್ಲೆಯಲ್ಲೆ ಒಂದು ಐತಿಹಾಸಿಕ ಪ್ರತಿಭಟನಾ ಸಭೆಯಾಗಿ ಮೂಡಿ ಬರಲಿದ್ದು, ಲಕ್ಷಾಂತರ ಜನರು ಇದಕ್ಕೆ ಸಾಕ್ಷಿಯಾಗಲಿದ್ದಾರೆ. ಆದುದರಿಂದ ಸಂವಿಧಾನವನ್ನು ಎತ್ತಿ ಹಿಡಿಯುವ ಎಲ್ಲ ಜಾತಿ ಮತ ಧರ್ಮಗಳ, ಎಲ್ಲ ಜಾತ್ಯಾತೀತ ತತ್ವವನ್ನು ಬೆಂಬಲಿಸುವ ಪಕ್ಷಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿದೆ ಎಂದು ವಿನಂತಿಸಿಕೊಂಡರು.

ಸುದ್ದಿಗೋಷ್ಠಿಯಲ್ಲಿ ಎಸ್ಕೆಎಸ್ಸೆಫ್ ನ ಉಸ್ಮಾನ್ ದಾರಿಮಿ, ಮುಖಂಡರಾದ ಪಿ.ಎ. ರಹೀಂ, ಕೆ.ಎಚ್. ಅಬೂಬಕರ್, ಪುರಸಭಾ ಸದಸ್ಯ ಮುನಿಶ್ ಅಲಿ ಅಹ್ಮದ್, ಎಸ್ಸೆಸ್ಸೆಫ್ ನ ಆರೀಸ್ ಪೆರಿಯಪಾದೆ, ಬಂಟ್ವಾಳ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಸಲಫಿ ಮೂಮೆಂಟ್ ನ ಬಿ.ಎಂ. ಅಬ್ದುಲ್ ಅಝೀಝ್, ಹಾರೂನ್ ರಶೀದ್ ಹಾಜರಿದ್ದರು.

Related posts

Leave a Reply

Your email address will not be published. Required fields are marked *